ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಕಟ್ಟಿಗೇನಹಳ್ಳಿ ಗ್ರಾಮದ ‘ಕಟ್ಟಿಗೇನಹಳ್ಳಿ ಗಂಗಾಮತಸ್ಥರ ಸಂಘ’ದ ವತಿಯಿಂದ ಭಾನುವಾರ ಏರ್ಪಡಿಸಿದ್ದ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ 904ನೇ ಜಯಂತಿ ಕಾರ್ಯಕ್ರಮವನ್ನು ಕುಣಿಗಲ್ ತಾಲ್ಲೂಕು ವ್ಯಾಸಪೀಠ ಮಠದ ಶ್ರೀ ಬಸವಾನಂದ ಸ್ವಾಮೀಜಿ ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಅವರು ‘ಅಂಬಿಗರ ಚೌಡಯ್ಯನವರು 12ನೇ ಶತಮಾನದ ಬಸವಾದಿ ಶರಣರಲ್ಲಿ ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಂಡ ಶಿವಶರಣರಲ್ಲಿ ಒಬ್ಬರಾಗಿದ್ದು, ಸಮಾಜಕ್ಕೆ ಸತ್ ಸಂದೇಶ, ಸಮಾನತೆಯ ತತ್ವವನ್ನು ಸಾರುವ ಮೂಲಕ ಸಮಾಜದ ಏಳಿಗೆಗೆ ಕೊಡುಗೆ ನೀಡಿದ್ದಾರೆ. ಅವರ ತತ್ವಾದರ್ಶಗಳು ಎಲ್ಲಾ ಕಾಲಕ್ಕೂ, ಸಮಾಜದ ಎಲ್ಲಾ ಜನತೆಗೂ ಅನ್ವಯವಾಗುವ ಸಾರ್ವಕಾಲಿಕ ತತ್ವಗಳಾಗಿದ್ದು, ನಾವು ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆ ಯಬೇಕು ಎಂದರು.
ಇದೇ ಸಂದರ್ಭದಲ್ಲಿ ಕಟ್ಟಿಗೇನಹಳ್ಳಿ ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷ ಬಿ. ವೆಂಕಟೇಶಯ್ಯ, ಅಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಸಂದೀಪ್, ಯಲಹಂಕದ ಗಂಗಾಮತಸ್ಥರ ಮುಖಂಡ ವೈ ಎನ್ ಮಂಜುನಾಥ್, ಕರ್ನಾಟಕ ರಾಜ್ಯ ಯುವ ಗಂಗಾಮತಸ್ಥರ ಸಂಘದ ಕಾರ್ಯಾಧ್ಯಕ್ಷ ಹರೀಶ್ ಎಸ್ ದೇವ್ರು, ಗೋವಿಂದರಾಜು, ರಾಜಣ್ಣ, ರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಅಂಬಿಗರ ಚೌಡಯ್ಯನವರ 904ನೇ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆ ಯಿಂದ ನೆರವೇರಿಸಿದರು.

