
ಯಲಹಂಕ ಸುದ್ದಿ. ಎ ಎಂ ಡಿ ಕಂಪನಿ ವತಿಯಿಂದ ಅಗಸ್ತ್ಯ ಸಹಾಯ ದೊಂದಿಗೆ ಯಲಹಂಕ ಬಿ. ಇ. ಓ ಶಾಲೆ ಎರಡು ದಿನಗಳ ಕಾಲ ಅದ್ದೂರಿಯಾಗಿ ಬೃಹತ್ ವಿಜ್ಞಾನ ಮೇಳ ಯಶಸ್ವಿಯಾಗಿ ಜರುಗಿತ್ತು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ದೃಷ್ಟಿಯಿಂದ ಜರುಗಿದ ಈ ವಿಜ್ಞಾನ ಮೇಳವನ್ನು ಋತುಜ ಎಸ್ ದೇವರು ಸೈಟ್ ಸಿ. ಸ್. ಆರ್. ರೆಪ್ರೆಸೆಂಟಿವ್ ಬೆಂಗಳೂರು ಏ ಎಮ್ ಡಿ ಕಂಪನಿ ಉದ್ಘಾಟಿಸಿದರು ಈ ಕಾರ್ಯಕ್ರಮದಲ್ಲಿ ಯಲಹಂಕ ಶಿಕ್ಷಕರ ಸಂಘದ ಅಧ್ಯಕ್ಷರು, ರಾಮಾಂಜಿನಪ್ಪನವರು ಮುಖ್ಯ ಶಿಕ್ಷಕರು& ಶಿಕ್ಷಕರು ಭಾಗವಹಿಸಿದ್ದರು ಈ ವಿಜ್ಞಾನ ಮೇಳ ದಲ್ಲಿ ನೂರಕ್ಕೂ ಹೆಚ್ಚು ಮಾದರಿಗಳನ್ನು ಮತ್ತು 10 ವಿಶಿಷ್ಟವಾದ ಕಾರ್ನರ್ ಗಳನ್ನು ಮಾಡಲಾಗಿತ್ತು ರಾಸಾಯನಿಕ, ಆಯುರ್ವೇದಿಕ್ ಗಿಡಮೂಲಿಕೆ, ಸಿರಿಧಾನ್ಯಗಳ ಅರಿವು, ಕಡಿಮೆ ವೆಚ್ಚದ ಮಾದರಿಗಳು, ಆಹಾರ ಕಲಬೆರಿಕೆ, ಬರಿಗಾಮಿ , ಚಟುವಟಿಕೆ ಆಧಾರಿತ ಮಾದರಿಗಳ ತಯಾರಿ ಇನ್ನು ಮುಂತಾದ ಕಾರ್ನರ್ ಮಾಡಲಾಗಿತ್ತು ಈ ಎರಡು ದಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ನಾಲ್ಕು ಖಾಸಗಿ ಶಾಲೆಗಳು ಮತ್ತು ಆರು ಸರ್ಕಾರಿ ಶಾಲೆಗಳು ಇದರ ಸದುಪಯೋಗವನ್ನು ಪಡೆದುಕೊಂಡರು , ಮಕ್ಕಳಲ್ಲಿ ಕುತೂಹಲ ಆಸಕ್ತಿ ಮತ್ತು ನಾಯಕತ್ವವನ್ನು ಬೆಳೆಸುವಲ್ಲಿ ಈ ಒಂದು ಮೇಳ ತುಂಬಾ ಸಹಕಾರಿಯಾಗಿದೆ