ಶಿವಕೋಟೆ ಗ್ರಾ.ಪಂ.ಅಧ್ಯಕ್ಷರಾಗಿ ಸಂಜೀವಯ್ಯ ಅವಿರೋಧ ಆಯ್ಕೆ :

ಯಲಹಂಕ : ಯಲಹಂಕ ಕ್ಷೇತ್ರದ ಶಿವಕೋಟೆ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಮತ್ಕೂರು ಗ್ರಾಮದ ಎಚ್.ಸಂಜೀವಯ್ಯ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

ಶಿವಕೋಟೆ ಗ್ರಾ.ಪಂ.ಯಲ್ಲಿ ಒಟ್ಟು18 ಜನ ಸದಸ್ಯರಿದ್ದು, ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಶನಿವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಸ್ಪರ್ಧಿಯಾಗಿ ಯಾರೂ ಸಹ ಸ್ಪರ್ಧಿಸದ ಕಾರಣ ಎಚ್.ಸಂಜೀವಯ್ಯ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯಲ್ಲಿ 13 ಸದಸ್ಯರು ಪಾಲ್ಗೊಂಡಿದ್ದು, 5 ಸದಸ್ಯರು ಗೈರು ಹಾಜರಾಗಿದ್ದರು.

ನೂತನ ಅಧ್ಯಕ್ಷರನ್ನು ಶಾಸಕ ಎಸ್ ಆರ್ ವಿಶ್ವನಾಥ್ ಗೌರವಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಬಿಜೆಪಿ ಗ್ರಾ.ಮಂಡಲ ಅಧ್ಯಕ್ಷ ಎಚ್.ಬಿ.ಹನುಮಯ್ಯ, ಚೊಕ್ಕನಹಳ್ಳಿ ವೆಂಕಟೇಶ್, ಲಿಂಗನಹಳ್ಳಿ ವೆಂಕಟೇಶ್, ಕೆ..ಸಿ.ಬಾಬು, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ರಮೇಶ್, ಮಾದಪ್ಪನಹಳ್ಳಿ ಕೃಷ್ಣಮೂರ್ತಿ, ಅದ್ದೆ ಮಂಜುನಾಥ ರೆಡ್ಡಿ, ಮತ್ಕೂರು ಬಾಲರಾಜು, ರವಿಕುಮಾರ್, ಬ್ಯಾಲಕೆರೆ ವೆಂಕಟೇಶ್ ಸೇರಿದಂತೆ ಗ್ರಾ.ಪಂ. ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾ.ಪಂ. ಸದಸ್ಯರಿದ್ದರು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು.  ಕೋಗಿಲು ಬಡಾವಣೆ

9845085793

7349337989

9035282296

Leave a Reply

Your email address will not be published. Required fields are marked *