







ಯಲಹಂಕ ಉಪನಗರದಲ್ಲಿ ಫ್ರಂಟ್ ಲೈನ್ ಐಎಎಸ್ ಅಕಾಡೆಮಿ ಉದ್ಘಾಟನೆ :
ಯಲಹಂಕ : ಐಎಎಸ್, ಐಪಿಎಸ್, ಕೆಎಎಸ್ ಮುಂತಾದ ಉನ್ನತ ಹುದ್ದೆಗಳ ಕನಸು ಕಾಣುವ ಪ್ರತಿಭಾವಂತ ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ದಿಸೆಯಲ್ಲಿ ಆರಂಭವಾಗಿರುವ ಫ್ರಂಟ್ ಲೈನ್ ಐಎಎಸ್ ಅಕಾಡೆಮಿ ಸಂಸ್ಥೆಯ ನೂತನ ಕೋಚಿಂಗ್ ಕೇಂದ್ರವನ್ನು ಶಾಸಕ ಎಸ್ ಆರ್ ವಿಶ್ವನಾಥ್ ರವರ ಸಲಹೆ ಸಹಕಾರದ ಮೇರೆಗೆ ಯಲಹಂಕ ಉಪನಗರದಲ್ಲಿ ಸೋಮವಾರ ಉದ್ಘಾಟಿಸಲಾಯಿತು.
ಬಿಪಿಎಲ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಸರ್ಕಾರಿ ಕಾಲೇಜುಗಳಲ್ಲಿ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡುವ ಮಹತ್ವದ ಉದ್ದೇಶವನ್ನು ಸಂಸ್ಥೆ ಹೊಂದಿದ್ದು, ಪ್ರತಿಭಾವಂತ ಬಡ ಮಕ್ಕಳು ಸಹ ಐಎಎಸ್, ಐಪಿಎಸ್ ನಂತಹ ಪ್ರಮುಖ ಹುದ್ದೆಗಳನ್ನು ಅಲಂಕರಿಸಲು ಅಗತ್ಯವಾದ ತರಬೇತಿಯನ್ನು ಸಂಸ್ಥೆಯ ವತಿಯಿಂದ ಉಚಿತವಾಗಿ ನೀಡಲು ಮುಂದಾಗಿರುವುದು ಹಲವರ ಶ್ಲಾಘನೆಗೆ ಪಾತ್ರವಾಗಿದೆ.
ಫ್ರಂಟ್ ಲೈನ್ ಐಎಎಸ್ ಅಕಾಡೆಮಿಯ ನೂತನ ಕೋಚಿಂಗ್ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಸಾಯಿ ರಾಘವೇಂದ್ರ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷ ಚಲಪತಿ ಎನ್.ವಿ., ಕಾರ್ಯದರ್ಶಿ ಶಿವಶಂಕರ್ ಎಸ್.ಆರ್., ಯಲಹಂಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಪ್ಪ, ಫ್ರಂಟ್ ಲೈನ್ ಐಎಎಸ್ ಅಕಾಡೆಮಿಯ ಸಂಚಾಲಕ ಸುರೇಶ್ ಕುಮಾರ್, ತೆಲಂಗಾಣ ರಾಜ್ಯದ ಡಿವೈಎಸ್ ಪಿ, ದಾಮೋದರ್, ಸುನಿಲ್ ಕುಮಾರ್, ಧನಂಜಯ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹಿರಾತು ಸಂಪರ್ಕಿಸಿ
ಆರ್ ಹನುಮಂತು
9845085793
7349337989