ಯಲಹಂಕ : ಅತ್ಯಾಧುನಿಕ ಸೌಲಭ್ಯಗಳು, ವ್ಯವಸ್ಥಿತ ಕಾರ್ಯನಿರ್ವಹಣೆಯ ಮೂಲಕ ಬೆಂ.ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಶಂಸೆಗೆ ಪಾತ್ರವಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ರಾಜಾನುಕುಂಟೆ ಗ್ರಾಮ ಪಂಚಾಯಿತಿಯ ಡಿಜಿಟಲ್‌ ಗ್ರಂಥಾಲಯಕ್ಕೆ ಬ್ರಿಟಿಷ್‌ ಡೆಪ್ಯುಟಿ ಹೈಕಮಿಷನರ್(ಕರ್ನಾಟಕ & ಕೇರಳ)ಚಂದ್ರಶೇಖರ್ ಅಯ್ಯರ್, ಡೆಪ್ಯುಟಿ ಹೆಡ್ ಆಫ್ ಮಿಷನ್ ಬ್ರಿಟಿಷ್ ಜೇಮ್ಸ್ ಗಾಡ್ ಬೇರ್, ಕಂಟ್ರಿ ಡೈರೆಕ್ಟರ್ ಇಂಡಿಯಾ ಬ್ರಿಟಿಷ್ ಕೌನ್ಸಿಲ್ ಅಲಿಸನ್ ಬ್ಯಾರೆಟ್‌, ಬ್ರಿಟಿಷ್ ಕೌನ್ಸಿಲ್ ನ ದಕ್ಷಿಣ ಭಾರತದ ಡೈರೆಕ್ಟರ್ ಜನಕಾ ಪುಷ್ಪನಾಥನ್ ಸೇರಿದಂತೆ ಬ್ರಿಟಿಷ್ ಕೌನ್ಸಿಲ್‌ನ ನಿಯೋಗ ಭೇಟಿ ನೀಡಿ, ಗ್ರಂಥಾಲಯದಲ್ಲಿನ ಅತ್ಯಾಧುನಿಕ ಸೌಲಭ್ಯಗಳು, ಗ್ರಂಥಾಲಯದ ವ್ಯವಸ್ಥಿತ ನಿರ್ವಹಣೆ, ಕಾರ್ಯಪ್ರಗತಿಯನ್ನು ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್, ಬೆಂ.ನಗರ ಜಿ.ಪಂ. ಸಿಇಒ ಲತಾಕುಮಾರಿ, ಉಪ ಕಾರ್ಯದರ್ಶಿ ಅನಿತಾ, ಯಲಹಂಕ ತಾ.ಪಂ.ಇಓ ಮಧು, ಸಹಾಯಕ ನಿರ್ದೇಶಕ ಅಮರಯ್ಯ, ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷೆ ಚನ್ನಮ್ಮ, ಮಾಜಿ ಅಧ್ಯಕ್ಷ ಎಸ್.ಜಿ. ನರಸಿಂಹಮೂರ್ತಿ(ಎಸ್.ಟಿ.ಡಿ. ಮೂರ್ತಿ), ಉಪಾಧ್ಯಕ್ಷ ವೆಂಕಟೇಶ್, ಪಿಡಿಓ ನಾಗರಾಜ್, ಪಂ.ಕಾರ್ಯದರ್ಶಿ ರಾಕೇಶ್, ಗ್ರಾ.ಪಂ.ಸದಸ್ಯ ಸಂತೋಷ್, ಲೆಕ್ಕ ಪರಿಶೋಧಕ ಉಮೇಶ್ ಸೇರಿದಂತೆ ಗ್ರಾ.ಪಂ. ವ್ಯಾಪ್ತಿಯ ಚುನಾಯಿತ ಜನ ಪ್ರತಿನಿಧಿಗಳು, ಅದ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿ.ಪಂ., ತಾ.ಪಂ., ಗ್ರಾ.ಪಂ. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿದ್ದರು.

ಬಳಿಕ ಅರಕೆರೆಯ ಸ್ವಚ್ಛ ಸಂಕೀರ್ಣ ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ಕಸ ವಿಂಗಡಣೆಯ ಮಾದರಿ, ಔಷದೀಯ ಸಸ್ಯಗಳಿರುವ ಉದ್ಯಾನವನ, ಕಸದಿಂದ ಉತ್ಪಾದಿಸುವ ಸಾವಯವ ಗೊಬ್ಬರ ತಯಾರಿಕಾ ಘಟಕವನ್ನು ಪರಿಶೀಲಿಸಿದರು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

9845085793

7349337989

Leave a Reply

Your email address will not be published. Required fields are marked *