ಸಂಪೂರ್ಣ ಸ್ವಯಂಚಾಲಿತ ವಾಷಿಂಗ್ ಮೆಷಿನ್ ಮಾಡೆಲ್ ಬಿಡುಗಡೆ

ಬೆಂಗಳೂರು, ಸೆಪ್ಟೆಂಬರ್ 25, 2024: ಫ್ರೆಂಚ್ ಮೂಲದ ಬ್ರ್ಯಾಂಡ್ ಥಾಮ್ಸನ್ ಸೆಪ್ಟೆಂಬರ್ 27ರಿಂದ ಪ್ರಾರಂಭವಾಗುತ್ತಿರುವ ಫ್ಲಿಪ್‌ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ತನ್ನ ಸ್ಮಾರ್ಟ್ ಟಿವಿಗಳು, ವಾಷಿಂಗ್ ಮೆಷಿನ್‌ ಗಳು ಮತ್ತು ಸ್ಪೀಕರ್‌ ಗಳ ಮೇಲೆ ಅದ್ಭುತ ರಿಯಾಯಿತಿಗಳನ್ನು ಘೋಷಿಸಿದೆ. ಪ್ಲಸ್ ಸದಸ್ಯರು 10-ದಿನಗಳ ಕಾಲ ನಡೆಯಲಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಸೆಪ್ಟೆಂಬರ್ 26ರಂದೇ ಖರೀದಿ ಮಾಡುವ ಅವಕಾಶ ಹೊಂದಲಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಹಕರು ಥಾಮ್ಸನ್ ಆಂಡ್ರಾಯ್ಡ್ ಟಿವಿಗಳಲ್ಲಿ ಪ್ರತ್ಯೇಕವಾಗಿ ಸೋನಿ ಲೈವ್, ಜೀ5 ಮತ್ತು 27 ಇತರ ಓಟಿಟಿಗಳನ್ನು ನೋಡುವ 3 ತಿಂಗಳ ಓಟಿಟಿ ಪ್ಲೇ ಚಂದಾದಾರಿಕೆ ಪಡೆಯಲಿದ್ದಾರೆ.

ರೂ. 5,999ಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ಪನ್ನ ಒದಗಿಸುತ್ತಿರುವ ಥಾಮ್ಸನ್ ಪ್ರತೀ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ ದರದಲ್ಲಿ ಉತ್ಪನ್ನಗಳನ್ನು ನೀಡಲಿದೆ. ಇದೇ ಸಂದರ್ಭದಲ್ಲಿ ಥಾಮ್ಸನ್ ರೂ. 12,999 ಬೆಲೆಯಲ್ಲಿ ಆಕರ್ಷಕವಾದ ಮರೂನ್ ಬಣ್ಣದ ಟಾಪ್ ಲೋಡ್ ಸಂಪೂರ್ಣ ಸ್ವಯಂಚಾಲಿತ ವಾಷಿಂಗ್ ಮೆಷಿನ್ ಮಾಡೆಲ್ ಅನ್ನು ಬಿಡುಗಡೆ ಮಾಡಿದೆ.

ಥಾಮ್ಸನ್ ಇತ್ತೀಚೆಗಷ್ಟೇ ಆಲ್ಫಾಬೀಟ್ 25 ಮತ್ತು ಆಲ್ಫಾಬೀಟ್ 60 ಎಂಬ ಎರಡು ಪ್ರಮುಖ ಸೌಂಡ್‌ ಬಾರ್‌ ಗಳನ್ನು ಬಿಡುಗಡೆ ಮಾಡಿತ್ತು. ಥಾಮ್ಸನ್ ಮುಂದಿನ ಆರು ತಿಂಗಳಲ್ಲಿ 20 ಮಾಡೆಲ್ ಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಎರಡು ಹೊಸ ಸೌಂಡ್ ಬಾರ್‌ಗಳು ಕ್ರಮವಾಗಿ ರೂ.1499 ಮತ್ತು ರೂ. 3599ರ ವಿಶೇಷ ಬೆಲೆಯಲ್ಲಿ ದೊರೆಯಲಿದೆ.

ಬ್ಯಾಂಕ್ ಆಫರ್ ಗಳು:
ಹೆಚ್ ಡಿ ಎಫ್ ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಹೊಂದಿರುವವರು ತ್ವರಿತ ರಿಯಾಯಿತಿ ಹೊಂದಬಹುದು. ಜೊತೆಗೆ ಯುಪಿಐ ಪಾವತಿಗಳ ಮೇಲೆ ಶೇ.50 ವರೆಗೆ ರಿಯಾಯಿತಿ ಪಡೆಯಬಹುದು. ಗ್ರಾಹಕರು ಫ್ಲಿಪ್ ಕಾರ್ಟ್ ಆಕ್ಸಿಸ್ ಕ್ರೆಡಿಟ್ ಕಾರ್ಡ್ ಕಾರ್ಡ್ ಬಳಸಿಕೊಂಡು ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದು.

ಥಾಮ್ಸನ್ ಟಿವಿ ರೂ.5999 ರಿಂದ ರೂ.74999ರವರೆಗಿನ ಬೆಲೆಯಲ್ಲಿ ದೊರೆಯುತ್ತವೆ.

ಥಾಮ್ಸನ್ 7 ಕೆಜಿ ಸಾಮರ್ಥ್ಯದ ವಾಷಿಂಗ್ ಮೆಷಿನ್ ಆರಂಭಿಕ ಬೆಲೆ ರೂ.7490 ಮತ್ತು 9 ಕೆಜಿ ವಾಶಿಂಗ್ ಮೆಷಿನ್ ಆರಂಭಿಕ ಬೆಲೆ ರೂ.8790.

ಈ ಕುರಿತು ಭಾರತದಲ್ಲಿ ಥಾಮ್ಸನ್‌ ನ ವಿಶೇಷ ಬ್ರಾಂಡ್ ಪರವಾನಗಿದಾರರಾದ ಎಸ್ ಪಿ ಪಿ ಎಲ್ ನ ಸಿಇಓ ಶ್ರೀ ಅವ್ನೀತ್ ಸಿಂಗ್ ಮರ್ವಾಹ್, “ಈ ಹಬ್ಬದ ಋತುವಿನಲ್ಲಿ 2 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಅದಕ್ಕಾಗಿ ಪ್ರೇಕ್ಷಕರಿಗೆ ಅತ್ಯುತ್ತಮ ಆಫರ್ ಗಳನ್ನು ಒದಗಿಸುತ್ತಿದ್ದೇವೆ” ಎಂದು ಹೇಳಿದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

Public power

R Hanumanthu

kogilu layout 

Yelahanka

9845085793

7349337989

Leave a Reply

Your email address will not be published. Required fields are marked *