Tag: kbg. hunsmarnhali lake

ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಕಂದಾಯ ಸಚಿವ ಕೃಷ್ಣಬೈರೇಗೌಡ

ಪುನಶ್ಚೇತನಗೊಳಿಸಿದ ಹುಣಸಮಾರನಹಳ್ಳಿ ಕೆರೆ ಲೋಕಾರ್ಪಣೆ : ಬ್ಯಾಟರಾಯನಪುರ : ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಪ್ರತಿ ನಾಗರೀಕರು ಭಾವಿಸಬೇಕು ಹಾಗಾದಾಗ ಮಾತ್ರ ಉತ್ತಮ ಪರಿಸರವನ್ನು ನಿರೀಕ್ಷಿಸಬಹುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು. ಸಣ್ಣ ನೀರಾವರಿ…

ಇದನ್ನೂ ಓದಿ

ಯಲಹಂಕದ ಐಷಾರಾಮಿ ‘ತಾಜ್ ಯಲಹಂಕ’ ಹೋಟೆಲ್ ಉದ್ಘಾಟನೆಯಲಹಂಕ ಸುದ್ದಿ​ಬೆಂಗಳೂರು (ಯಲಹಂಕ), ನವೆಂಬರ್ 21:ಉತ್ತರ ಬೆಂಗಳೂರಿನ ಆತಿಥ್ಯ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಅತ್ಯಾಧುನಿಕ ‘ತಾಜ್ ಯಲಹಂಕ’ ಪಂಚತಾರಾ ಹೋಟೆಲ್ ಅನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದರು.​ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ (NH-44) ತಲೆ ಎತ್ತಿರುವ ಈ ಭವ್ಯ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಕೃಷ್ಣ ಜಿವಿಕೆ ಲಕ್ಸುರಿ ಹೋಟೆಲ್ಸ್ ಲಿಮಿಟೆಡ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭೂಪಾಲ್ ಶಾಲಿನಿ ಭೂಪಾಲ್ ಸೇರಿದಂತೆ ಸಂಸ್ಥೆಯ ಪ್ರವರ್ತಕರು, ಗಣ್ಯರು ಹಾಗೂ ಉದ್ಯಮಿಗಳು ಪಾಲ್ಗೊಂಡಿದ್ದರು.​​ಉತ್ತರ ಬೆಂಗಳೂರಿನ ಬೆಳವಣಿಗೆಗೆ ಪೂರಕ: ವಿಮಾನ ನಿಲ್ದಾಣ ಮತ್ತು ನಗರ ಕೇಂದ್ರದ ನಡುವೆ ಆಯಕಟ್ಟಿನ ಜಾಗದಲ್ಲಿರುವ ಯಲಹಂಕ ಭಾಗವು ಐಟಿ ಪಾರ್ಕ್‌ಗಳು ಹಾಗೂ ಏರೋಸ್ಪೇಸ್ ಕ್ಲಸ್ಟರ್‌ಗಳ ಮೂಲಕ ವೇಗವಾಗಿ ಬೆಳೆಯುತ್ತಿದೆ. ಈ ಭಾಗಕ್ಕೆ ಭೇಟಿ ನೀಡುವ ಉದ್ಯಮಿಗಳು ಮತ್ತು ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯವನ್ನು ಈ ಹೋಟೆಲ್ ಒದಗಿಸಲಿದೆ.​ ​ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರಿನ ಮೂಲಸೌಕರ್ಯ ಮತ್ತು ಆತಿಥ್ಯ ಕ್ಷೇತ್ರದ ಪ್ರಗತಿಗೆ ಇಂತಹ ಬೃಹತ್ ಹೂಡಿಕೆಗಳು ಹೆಚ್ಚಿನ ಬಲ ತುಂಬಲಿವೆ ಎಂದು ಶುಭ ಹಾರೈಸಿದರು.