Category: Blog

Your blog category

ಚಿಕ್ಕಬಳ್ಳಾಪುರ: ಪ್ರತಿಯೊಬ್ಬರೂ ಕ್ರೀಡಾಶಕ್ತಿಯನ್ನು ಬೆಳೆಸಿಕೊಂಡು ದೇಶಿಯ ಕ್ರೀಡೆಗಳನ್ನು ಉತ್ತುಂಗಕ್ಕೆ ಏರಿಸಬೇಕು ಎಂದು ಜೈ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಯಕುಮಾರ್ ಹೇಳಿದರು.
ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿ ಹೋಬಳಿ ಕೇಂದ್ರದ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜೈ ಫೌಂಡೇಶನ್ ಹಾಗೂ ಮಾನ್ ಸ್ಟಾರ್ ಬಾಯ್ಸ್ ಸಂಯುಕ್ತ ಆಶ್ರಯದಲ್ಲಿ ಮತ್ತು ಜೈ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಯಕುಮಾರ್ ಅವರ ಸಾರಥ್ಯದಲ್ಲಿ “ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ” ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಮಾತ್ರ ಅಲ್ಲದೆ ಕ್ರೀಡೆಗಳಲ್ಲಿ ಆಸಕ್ತಿ ಬಳಸಿಕೊಂಡಿರುವ ಎಲ್ಲರೂ ಇಂತಹ ಕ್ರೀಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾ ಮನೋಭಾವನೆಗಳನ್ನು ರೂಡಿಸಿಕೊಳ್ಳಬೇಕು ಎಂದರು. ಅದೇ ರೀತಿ ಕ್ರೀಡೆಗಳು ನಮ್ಮ ಮಾನಸಿಕ ತುಮುಲಗಳನ್ನು ದೂರ ಮಾಡಲಿವೆ ನಾವು ಕಡೆಗಳಲ್ಲಿ ಭಾಗವಹಿಸಿ ಇನ್ನಿತರಗು ಸಹ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೇರೆಪಣೆ ನೀಡಬೇಕು.ಇಂದು ಮಂಚೇನಹಳ್ಳಿಯಲ್ಲಿ ಮಾನ್ ಸ್ಟಾರ್ ಬಾಯ್ಸ್ ಯುವಕರು ಮುತುವರ್ಜಿಯಿಂದ ಹೋಬಳಿ ಕೇಂದ್ರದ ಕ್ರೀಡಾಕೂಟದಲ್ಲಿ ಭಾಗವಹಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ, ಜಾತಿಭೇದ ಮತ್ತು ಧರ್ಮಭೇದ ಇಲ್ಲದೆ ಇಂತಹ ಕ್ರೀಡೆಗಳಿಗೆ ಹೆಚ್ಚಿನ ಸಹಕಾರ ನೀಡುವುದಾಗಿಯೂ ಇದೇ ಸಂದರ್ಭದಲ್ಲಿ ಜಯಕುಮಾರ್ ಅವರು ತಿಳಿಸಿದರು.
ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 25,000 ಮತ್ತು ದ್ವಿತೀಯ ಸ್ಥಾನ ತಂಡಕ್ಕೆ15,000 ಜೈ ಫೌಂಡೇಶನ್ ವತಿಯಿಂದ ನಗದು ಬಹುಮಾನ ನೀಡುವುದಾಗಿ ಜಯಕುಮಾರ್ ಘೋಷಣೆ ಮಾಡಿದರು.
ಜೈ ಫೌಂಡೇಶನ್ ಕಾರ್ಯದರ್ಶಿ ಮುಬಾರಕ್ ಮಾತನಾಡಿ ವಿದ್ಯಾದಿಸೆ ಜೊತೆ ಜೊತೆಯಲ್ಲಿಯೇ ಕ್ರೀಡೆಗಳನ್ನು ಹವ್ಯಾಸವನ್ನಾಗಿ ಮಾಡಿಕೊಂಡು ಬರುವುದು ಒಂದು ವಿಧವಾದರೆ ನಂತರ ಸಂಘ ಸಂಸ್ಥೆಗಳ ಒಡನಾಡಿಗಳಾಗಿ ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ಇನ್ನಿತರಗು ಪ್ರೇರೇಪಣೆ ನೀಡುವುದು ಒಳ್ಳೆಯ ಬೆಳವಣಿಗೆ, ಇಂತಹ ಕಾರ್ಯಕ್ರಮಗಳಿಗೆ ಜೈ ಫೌಂಡೇಶನ್ ವತಿಯಿಂದ ಇಡೀ ಮಂಚೇನಹಳ್ಳಿ ಹೋಬಳಿ ಕೇಂದ್ರದಲ್ಲಿ ಮಾತ್ರವಲ್ಲದೆ ವಿಧಾನಸಭಾ ಕ್ಷೇತ್ರದಾದ್ಯಂತ ನಾನಾ ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಲ್ಲಾಗುತ್ತಿದೆ ಅಲ್ಲದೆ ಆರೋಗ್ಯ, ಶಿಕ್ಷಣಕ್ಕೆ ಜೈ ಫೌಂಡೇಶನ್ ಹೆಚ್ಚು ಒತ್ತು ನೀಡುತ್ತಾ ಬಂದಿದೆ ಎಂದ ಅವರು ಇಂದು ಆಯೋಜಿಸಿರುವ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.
ಫೌಂಡೇಷನ್ ಟ್ರಸ್ಟಿ ನವೀನ್ ಮಾತನಾಡಿ ವ್ಯಾಸಂಗಕ್ಕೆ ನೀಡುವಷ್ಟೇ ಆದ್ಯತೆಯನ್ನು ಕ್ರೀಡೆಗಳಿಗೂ ಮೀಸಲಿಡಬೇಕು ಆಗ ತಮ್ಮಲ್ಲಿನ ಪ್ರತಿಭೆ ಹೊರ ಪ್ರದರ್ಶಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವಂತಾಗಲಿದೆಎಂದರು.
ಜೈ ಫೌಂಡೇಶನ್ ಟ್ರಸ್ಟಿಗಳಾದ ಸುಬ್ರಮಣಿ, ಗೋವಿಂದರಾಜು, ಹಾಗೂ ಮಾನ್ ಸ್ಟಾರ್ ಬಾಯ್ಸ್ ಪದಾಧಿಕಾರಿಗಳು ಮತ್ತು ಕ್ರೀಡಾಪಟುಗಳು ಹಾಜರಿದ್ದರು.

ಪಬ್ಲಿಕ್ ಪವರ್. ಕನ್ನಡ ರಾಜ್ಯೋತ್ಸವ ಬೆಳ್ಳಹಳ್ಳಿ ಗ್ರಾಮದಲ್ಲಿ ಸೈಯದ್ ಶರೀಫ್ ರವರ ಅಧ್ಯಕ್ಷೆತೆಯಲ್ಲಿ

ಸುಮಾರು 80ಕ್ಕೂ ಹೆಚ್ಚು ಆಟೋ ವಾಹನಗಳು ಭಾಗವಹಿಸಿದವು ಬಹಳ ವಿಜೃಂಭಣೆಯಿಂದ ಪೂಜೆ ಮಾಡಿ ಬೆಳ್ಳಹಳ್ಳಿ ಗ್ರಾಮದಿಂದ ಬೆಳ್ಳೆಹಳ್ಳಿ ಕ್ರಾಸಿನವರೆಗೆ ಮೆರವಣಿಗೆ ಮಾಡಿ ಕನ್ನಡ ರಾಜ್ಯೋತ್ಸವದ ಮೆರುಗನ್ನು ಬೆಳ್ಳಹಳ್ಳಿ ಗ್ರಾಮದಲ್ಲಿ ತಂದು ಕೊಟ್ಟರು ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ…

ಪಬ್ಲಿಕ್ ಪವರ್. R hanumanthu***********””ಕನ್ನಡ ರಾಜ್ಯೋತ್ಸವ
ಬೆಳ್ಳಹಳ್ಳಿ ಗ್ರಾಮದಲ್ಲಿ ಸೈಯದ್ ಶರೀಫ್ ರವರ ವಿಜೃಂಭಣೆಯಿಂದ

ಕನ್ನಡ ರಾಜ್ಯೋತ್ಸವಬೆಳ್ಳಹಳ್ಳಿ ಗ್ರಾಮದಲ್ಲಿ ಸೈಯದ್ ಶರೀಫ್ ರವರ ಅಧ್ಯಕ್ಷೆತೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಆಟೋ ವಾಹನಗಳು ಬಹಳ ವಿಜೃಂಭಣೆಯಿಂದ ಪೂಜೆ ಪುರಸ್ಕಾರ ಮಾಡಿ ಬೆಳ್ಳಹಳ್ಳಿ ಗ್ರಾಮದಿಂದ ಬೆಳ್ಳೆಹಳ್ಳಿ ಕ್ರಾಸಿನವರೆಗೆ ಮೆರವಣಿಗೆ ಮಾಡಿ ಕನ್ನಡ ರಾಜ್ಯೋತ್ಸವದ ಮೆರುಗನ್ನು ತಂದು ಕೊಟ್ಟರು ಈ ಸಂದರ್ಭದಲ್ಲಿ…

ಪಬ್ಲಿಕ್ ಪವರ್. R ಹನುಮಂತು****************ಗುರಿಯನ್ನು ಖಚಿತಪಡಿಸಿಕೊಂಡು ತಲುಪುವ ಹಾದಿಯಲ್ಲಿ ಸಾಗಿ :

ಪದವಿ ವಿದ್ಯಾರ್ಥಿಗಳಿಗೆ ಡಾ.ಜಿ.ಎಸ್.ಮೂರ್ತಿ ಕರೆ : ಯಲಹಂಕ : ನೂತನ ಪದವೀಧರರು ಮೊದಲು ಗುರಿ ಯಾವುದೆಂದು ಖಚಿತ ಪಡಿಸಿಕೊಂಡು ನಂತರ ಆ ಗುರಿ ತಲುಪುವ ಹಾದಿಯಲ್ಲಿ ಸಾಗಬೇಕೆಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ.ಬಿ.ಎಸ್.ಮೂರ್ತಿ ಪದವಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.…

ಪಬ್ಲಿಕ್ ಪವರ್. R. ಹನುಮಂತು 9845085793. 7349337989**************ಯಲಹಂಕ ಪತ್ರಿಕಾ ವಿತರಕರ ಭವನ ನಿರ್ಮಾಣ ಕಾಮಗಾರಿಗೆ ಎಸ್ ಆರ್ ವಿಶ್ವನಾಥ್ ಚಾಲನೆ :

ಯಲಹಂಕ : ಯಲಹಂಕ ಭಾಗದ ಪತ್ರಿಕಾ ವಿತರಕರಿಗಾಗಿ ನಿರ್ಮಿಸಲು ಯೋಜಿಸಿರುವ ನೂತನ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಶುಕ್ರವಾರ. ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು ‘ಯಲಹಂಕ ಭಾಗದ ಪತ್ರಿಕಾ ವಿತರಕರು ಕಳೆದ ಹಲವು ವರ್ಷಗಳಿಂದ…

ಪಬ್ಲಿಕ್ ಪವರ್. ***************************ಕೆಳದಿ ಚೆನ್ನಮ್ಮ ರಾಜ್ಯೋತ್ಸವ ಪ್ರಶಸ್ತಿ 2023

68ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಹಾಗೂ ಶ್ರೀ ಬನವೇಶ್ವರ ಅಧ್ಯಯನ ಪೀಠ – ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಂಶುಪಾಲರಿಗೆ ಕೊಡ ಮಾಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಕೆಳದಿ ಚೆನ್ನಮ್ಮ ರಾಜ್ಯೋತ್ಸವ ಪ್ರಶಸ್ತಿ, 2023ರ…

BAYALU SIMHA daily News paper.

9845085793 7349337989 9035282296 ಬಯಲು ಸಿಂಹ ಪಬ್ಲಿಕ್ ಪವರ್ ಪತ್ರಿಕೆಗೆ ಜಾಹೀರಾತು ನೀಡಲು ಸಂಪರ್ಕಿಸಿ. 9845085793