ಬಂಗಾರಪೇಟೆ: ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ತಾಲ್ಲೂಕಿನ ಕೇಂದ್ರ ಸ್ಥಳಕ್ಕೆ ತಾಲ್ಲೂಕಿನ ಎಲ್ಲಾ ಶಾಲೆಯ ಮಕ್ಕಳು ಬಂದಿದ್ದು ನೀವು ವಿವಿಧ ರೀತಿಯ ವೇಷಗಳನ್ನು ಧರಿಸಿ ಪ್ರತಿಭೆಯನ್ನು ತೋರಿಸಿ ಗೆದ್ದು ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟಕ್ಕೆ ಹೋಗಬೇಕೆಂಬುವ ಆಸೆಯಿಂದ ಬಂದಿದ್ದೀರಿ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಭಿಪ್ರಾಯ ಪಟ್ಟರು
ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳೆಲ್ಲರೂ ಇಂದು ವೇಷ ಭೂಷಣಗಳನ್ನು ಧರಿಸಿ ಬಹಳ ಉತ್ಸಾಹದಿಂದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದು. ನಾವು ಏನು ಬೇಕಾದರೂ ಕೊಂಡುಕೊಳ್ಳಬಹುದು ಆದರೆ…
