




ಯಲಹಂಕ : ಆರ್.ಸಿ.ಬಿ. ತಂಡದವರಿಂದ ಅಭಿವೃದ್ಧಿ ಪಡಿಸಲಾಗಿದ್ದ, ಯಲಹಂಕ ಕ್ಷೇತ್ರದ ಇಟಗಲ್ ಪುರ ಕೆರೆ ಮತ್ತು ಸಾದೇನಹಳ್ಳಿ ಗ್ರಾಮದ ಕೆರೆಗಳನ್ನು ಆರ್.ಸಿ.ಬಿ. ತಂಡದ ರಾಜೇಶ್ ಮೆನನ್ ರವರು ಶಾಸಕ ಎಸ್ ಆರ್ ವಿಶ್ವನಾಥ್ ರವರ ಮೂಲಕ ರಾಜಾನುಕುಂಟೆ ಗ್ರಾಮ ಪಂಚಾಯಿತಿಗೆ ಶನಿವಾರ ಹಸ್ತಾಂತರ ಮಾಡಿದರು.
ನಂತರ ಈ ಕುರಿತು ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಆರ್.ಸಿ.ಬಿ.ತಂಡವು ತಮ್ಮ ಸಿಎಸ್ಆರ್ ನಿಧಿಯಡಿ ರೂ 1ಕೋಟಿ 15 ಲಕ್ಷ ವೆಚ್ಚಮಾಡಿ ಇಟಗಲ್ ಪುರ ಮತ್ತು ಸಾದೇನಹಳ್ಳಿ ಕೆರೆಗಳನ್ನು ಇಂದು ಹಸ್ತಾಂತರ ಮಾಡಿರುವುದು ಸಂತೋಷದ ಸಂಗತಿ. ಈ ಮಹತ್ವದ ಕಾರ್ಯಕ್ಕಾಗಿ ಆರ್.ಸಿ.ಬಿ.ಗೆ ಯಲಹಂಕ ಕ್ಷೇತ್ರದ ನಾಗರೀಕರ ಪರವಾಗಿ ಧನ್ಯವಾದ ತಿಳಿಸಲಿಚ್ಛಿಸುತ್ತೇನೆ. ಆರ್.ಸಿ.ಬಿ.ಯ ಸಾಮಾಜಿಕ ಕಳಕಳಿಯಿಂದಾಗಿ ನಮ್ಮ ಯಲಹಂಕ ಕ್ಷೇತ್ರದ ಎರಡು ಕೆರೆಗಳು ಸ್ವಚ್ಛವಾಗಿದ್ದು, ನಿಜಕ್ಕೂ ಇದೊಂದು ಶ್ಲಾಘನೀಯ ಕಾರ್ಯವಾಗಿದೆ. ಇದೇ ರೀತಿಯಲ್ಲಿ ಇತರೆ ಬಹುರಾಷ್ಟ್ರೀಯ ಕಂಪನಿಗಳು ಪರಿಸರ ಕಾಳಜಿಗೆ ಮುಂದಾದರೆ, ಪರಿಸರ ಸಂರಕ್ಷಣೆಗೆ ಒಂದಷ್ಟು ಕೊಡುಗೆ ನೀಡಿದಂತಾಗುತ್ತದೆ. ಈ ಪುಣ್ಯ ಕಾರ್ಯಕ್ಕಾಗಿ ಆರ್.ಸಿ.ಬಿ.ತಂಡಕ್ಕೆ ಹೃತ್ಪೂರ್ವಕ ಧನ್ಯವಾದ ಮತ್ತು ಅಭಿನಂದನೆ ಹೇಳಲಿಚ್ಛಸುತ್ತೇನೆ ಎಂದರು.
ಕೆರೆಗಳ ಅಭಿವೃದ್ಧಿಗೆ ಉದಾರ ನೆರವು ನೀಡಿ, ಸ್ಪಂದಿಸಿದ್ದಕ್ಕಾಗಿ ಆರ್.ಸಿ.ಬಿ.ಪ್ರತಿನಿಧಿ ರಾಜೇಶ್ ಮೆನನ್ ರವರನ್ನು ಗೌರವಿಸಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಆರ್.ಸಿ.ಬಿ.ಯ ರಾಜೇಶ್ ಮೆನನ್, ರಾಜಾನುಕುಂಟೆ ಗ್ರಾ.ಪಂ. ಅಧ್ಯಕ್ಷೆ ಚನ್ನಮ್ಮ, ರಾಜಾನುಕುಂಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ), ಗ್ರಾ.ಪಂ.ಸದಸ್ಯರು, ಬಿಜೆಪಿ ಮುಖಂಡರಾದ ಸಾದೇನಹಳ್ಳಿ ಚಿಕ್ಕಣ್ಣ, ರಾಜಾನುಕುಂಟೆ ಸೋಮಶೇಖರ್, ಬಿಜೆಪಿ ಯುವ ಮುಖಂಡ ,ಸಾದೇನಹಳ್ಳಿ ಪ್ರಕಾಶ್ ಗೌಡ, ಗ್ರಾಮದ ಹಿರಿಯ ಮುಖಂಡ ಅಪ್ಪಣ್ಣಗೌಡ, ಪಿಡಿಓ ನಾಗರಾಜ್ ಸೇರಿದಂತೆ ಗ್ರಾ.ಪಂ. ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಸಾದೇನಹಳ್ಳಿ ಗ್ರಾಮಸ್ಥರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
Public power
R Hanumanthu
Kogilu layout
Yelahanka
9845085793
7349337989
9035282296
