ಪರಿಸರ ಉಳಿವಿಗಾಗಿ ಜಯಕರ್ನಾಟಕ ಜನಪರ ವೇದಿಕೆ ಸದಾಸಿದ್ದ

ಒಂದು ಸಾವಿರ ಗಿಡಗಳನ್ನು ನೆಟ್ಟು ನಾಲ್ಕನೇ ವಾರ್ಷಿಕೋತ್ಸವ ಆಚರಿಸಿಕೊಂಡ ಜಯಕರ್ನಾಟಕ ಜನಪರ ವೇದಿಕೆ

ಬೆಂಗಳೂರು/ಬ್ಯಾಟರಾಯನಪುರ:
ಗಿಡ ನಕ್ಕರೆ ಜನ ನಗುವುದು, ಗಿಡ ಅಳಿದರೆ ಜಗ ಅಳಿಯುವುದು’ ಎಂಬ ಮಾತನ್ನು ಸದಾ ನೆನಪಿನಲ್ಲಿರಿಸಿಕೊಂಡು ಪರಿಸರದ ರಕ್ಷಣೆಗಾಗಿ ಪ್ರತಿನಿತ್ಯ ನಮ್ಮ ಕೈಲಾದಷ್ಟು ಪ್ರಯತ್ನ ಪಡೋಣ. ಅದಕ್ಕಾಗಿ ನಾವೆಲ್ಲರೂ ಸಾಲು ಮರದ ತಿಮ್ಮಕ್ಕರನ್ನು ಮಾದರಿಯಾಗಿ ಇಟ್ಟುಕೊಂಡು ಪರಿಸರ ಸಂರಕ್ಷಣೆಗೆ ಕೈ ಜೋಡಿಸೋಣ. ಪರಿಸರವನ್ನು ಉಳಿಸಿ ಒಳ್ಳೆಯ ಭವಿಷ್ಯವನ್ನು ರೂಪಿಸೋಣ ಇದಕ್ಕಾಗಿ ನಮ್ಮ ಜಯಕರ್ನಾಟಕ ಜನಪರ ವೇದಿಕೆ ಸದಾಕಾಲವೂ ಸಿದ್ದ ಇರುವುದಾಗಿ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ್ ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಂಡಿಕೊಡಿಗೇಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬಾಯಿಲಹಳ್ಳಿ ಗ್ರಾಮದ ರಕ್ಷಾ ನಿಕುಂಜ್ ಅನೆಕ್ಸ/ಲೆಂಡಿ ಏರೋ ಪಾರ್ಕ್ ನಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಗಾಂಧಿ ಜಯಂತಿ ಪ್ರಯುಕ್ತ ಒಂದು ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಮಾತನಾಡಿದ ಅವರು, ಪರಿಸರವಾದಿಗಳು, ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳು, ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರು, ಜಯಕರ್ನಾಟಕ ಜನಪರ ವೇದಿಕೆ, ಐಕೇರ್ ಫೌಂಡೇಷನ್ ಮತ್ತು ಐಕೇರ್ ಬ್ರಿಗೇಡ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ ರವರ ಮಾರ್ಗದರ್ಶನದಲ್ಲಿ,
ಜಯಕರ್ನಾಟಕ ಜನಪರ ವೇದಿಕೆ ವಾರ್ಷಿಕೋತ್ಸವ ಹಾಗೂ ಗಾಂಧಿ ಜಯಂತಿ ಪ್ರಯುಕ್ತ
“ಮನೆಗೊಂದು ಮರ ಊರಿಗೊಂದು ಕೆರೆ” “ಜಯ ಕರ್ನಾಟಕ ಜನಪರ ವೇದಿಕೆಯ ನಡೆ ನಿಸರ್ಗದ ಕಡೆ” ಎಂಬ ಅಭಿಯಾನದಡಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡುವ ಮುಖಾಂತರ ಕಾರ್ಯಕ್ರಮವನ್ನು ಈ ಹಿಂದೆ ಆಚರಿಸಿದ್ದೇವೆ.

ಅದರಂತೆ ಈ ಬಾರಿಯೂ ಸಹ ಜಯಕರ್ನಾಟಕ ಜನಪರ ವೇದಿಕೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಾಗೂ ಗಾಂಧಿ ಜಯಂತಿ ಪ್ರಯುಕ್ತ ಐಕೇರ್ ಫೌಂಡೇಷನ್, ಐಕೇರ್ ಬ್ರಿಗೇಡ್ ಮತ್ತು ಬಂಡಿಕೊಡಿಗೇಹಳ್ಳಿ ಗ್ರಾ.ಪಂ ಸಹಯೋಗದೊಂದಿಗೆ ಸಾಮಾಜಿಕ ಕಳಕಳಿಯುಳ್ಳ ವಿವಿಧ ಬಗೆಯ ಒಂದು ಸಾವಿರ ಗಿಡಗಳನ್ನು ನೆಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದು.

ಪರಿಸರವೇ ನಮ್ಮ ಅಸ್ತಿತ್ವದ ಅಡಿಪಾಯ. ಇದು ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ವಾಸಿಸುವ ಭೂಮಿ ಮತ್ತು ಭೂಮಿಯ ಮೇಲಿನ ಎಲ್ಲ ಜೀವಿಗಳನ್ನು ಬೆಂಬಲಿಸುವ ಪರಿಸರ ವ್ಯವಸ್ಥೆಗಳ ಸಂಕೀರ್ಣಗಳನ್ನು ಒಳಗೊಳ್ಳುತ್ತದೆ. ಈ ಗ್ರಹದ ಮೇಲ್ವಿಚಾರಕರಾಗಿ ನಮ್ಮ ಕಾರ್ಯಗಳು ಪರಿಸರದ ಮೇಲೆ ಬೀರುವ ಆಳವಾದ ಪ್ರಭಾವವನ್ನು ಗುರುತಿಸುವುದು ಮತ್ತು ಅಭಿವೃದ್ಧಿ ಹೊಂದುತ್ತಿರುವ ಭವಿಷ್ಯಕ್ಕಾಗಿ ಶ್ರಮಿಸುವುದು ನಮ್ಮ ಜವಾಬ್ದಾರಿಯಾಗಿದೆ.
ಪ್ರಕೃತಿಗೂ ಮಾನವನಿಗೂ ಗಾಢವಾದ ಸಂಬಂಧವಿದೆ. ಆದರೆ ಆಧುನಿಕತೆ, ನಗರೀಕರಣ, ಕೈಗಾರೀಕರಣ, ತಂತ್ರಜ್ಞಾನ ಮತ್ತು ಅಭಿವೃದ್ಧಿ ಯೋಜನೆಗಳ ಭರದಲ್ಲಿ ಪರಿಸರದ ಮೇಲೆ ನಾವು ನಿರಂತರವಾಗಿ ದಾಳಿ ನಡೆಸುತ್ತಲೇ ಬಂದಿದ್ದೇವೆ. ಇದರ ಪರಿಣಾಮವಾಗಿ ಮಾಲಿನ್ಯ ಹೆಚ್ಚಾಗುತ್ತಿದೆ ಮತ್ತು ಪರಿಸರ ನಾಶವಾಗುತ್ತಿದೆ. ಸಹಜವಾಗಿಯೇ ಹವಾಮಾನ ವೈಪರೀತ್ಯಗಳೂ ಸಂಭವಿಸುತ್ತಿವೆ.
ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಪ್ರತಿಯೊಬ್ಬನೂ ತೊಡಗಿಕೊಳ್ಳಬೇಕಿದೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಎಲ್ಲ ಕಾರ್ಯಗಳಿಗೂ ಸಾಧ್ಯವಾದಷ್ಟು ಕಡಿವಾಣ ಹಾಕ ಬೇಕಿದೆ. ಈ ಪರಿಸರ ಸಕಲ ಜೀವರಾಶಿಗಳಿಗೆ ಸೇರಿದ್ದಾಗಿದೆ ಎಂಬುದನ್ನು ನಾವು ಮೊದಲು ಅರ್ಥೈಸಿಕೊಂಡು, ನಿಸರ್ಗದೊಂದಿಗೆ ಸಹಬಾಳ್ವೆ ನಡೆಸಿದಾಗ ಪರಿಸರದ ಉಳಿವು ಸಾಧ್ಯ ಎಂದರು.

ಬಾಕ್ಸ್:
ಒಂದು ಸಾವಿರ ವಿವಿಧ ಬಗೆಯ ಗಿಡಗಳನ್ನು ನೆಟ್ಟು ನಾಲ್ಕನೇ ವಾರ್ಷಿಕೋತ್ಸವ ಹಾಗೂ ಗಾಂಧಿ ಜಯಂತಿಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡ ಜಯಕರ್ನಾಟಕ ಜನಪರ ವೇದಿಕೆ

ಈ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ, ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯತಿ ಆಡಳಿತ ಮಂಡಳಿ, ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಪದಾಧಿಕಾರಿಗಳು, ಬೆಂಗಳೂರು ಜಿಲ್ಲಾ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು, ಎಲ್ಲಾ ಘಟಕ ಹಾಗೂ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಸಹಸ್ರಾರು ಸಂಖ್ಯೆಯಲ್ಲಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

Public power

R Hanumanthu

Kogilu layout

Yelahanka

,9845085793

7349337989

9035282296

Leave a Reply

Your email address will not be published. Required fields are marked *