
ಮುಸ್ಟೂರು ರಸ್ತೆಗೆ ತನ್ನ ಸ್ವಂತ ಖರ್ಚಿನಲ್ಲಿಯೇ ಜಲ್ಲಿ ವೆಟ್ ಮಿಕ್ಸ್ ಹಾಕಿಸಿದ ಮುಸ್ಟೂರು ಶ್ರೀಧರ್
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಿಂದ ಮುಷ್ಟೂರು ಗೆ ಹೋಗುವ ರಸ್ತೆ ಹದಗೆಟ್ಟುಹೋಗಿದೆ ಆಳುದ್ದ ಗುಂಡಿಗಳು ಬಿದ್ದಿವೆ ಮಳೆ ಬಂದರೆ ರಸ್ತೆ ಯಾವುದು ಹಳ್ಳ ದಿನ್ನೆ ಯಾವುದು ಗೋತ್ತಾಗೊಲ್ಲ ಕುಂಟೆಯಂತಾಗಿರುವ ರಸ್ತೆಯಲ್ಲೆ ನೀರು ನಿಲ್ಲುತ್ತೆ ಸುಮಾರು ಐದಾರು ವರ್ಷಗಳಿಂದ ರಿಪೇರಿಯೂ ಮಾಡದೆ ಡಾಂಬರೀಕರಣವೂ ಕಾಣದ ರಸ್ತೆಗೆ ಕೊನೆಗೆ ಸಮಾಜಿಕ ಹೋರಾಟಗಾರ,ಪಂಚಾಯಿತಿ ಸದಸ್ಯ ಮುಷ್ಟೂರು ಶ್ರೀದರ್ ತಾನೆ ಸ್ವಂತ ಖರ್ಚಿನಿಂದ ರಸ್ತೆ ಜಲ್ಲಿ ವೆಟ್ ಮಿಕ್ಸ್ ಹಾಕಿಸಿ ತಾತ್ಕಾಲಿಕ ಶಮನ ಮಾಡಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಚಿಕ್ಕಬಳ್ಳಾಪುರ ದಿಂದ ಕೇತೇನಹಳ್ಳಿಗೆ ಹಾದು ಹೋಗುವ ಮುಸ್ಟೂರು ರಸ್ತೆ ವಿನಾಯಕ ಮುಷ್ಟೂರು ಕೆರೆವರಗೂ ವಿಪರೀತ ಹಳ್ಳ ದಿನ್ನೆಗಳಾಗಿ ಮಳೆ ಬಂದ್ರೆ ಎಲ್ಲಿ ರಸ್ತೆ ಇರುತ್ತೆ ಎಲ್ಲಿ ಹಳ್ಳ ನೀರು ಇರುತ್ತೆ ಗೋತ್ತಾಗೊಲ್ಲ ಇದೆ ರಸ್ತೆಯಲ್ಲಿ ಕ್ರಷರ್ ಟಿಪ್ಪರ್ ಗಳು ಒಡಾಡ್ತವೆ ಆಂಬುಲೆನ್ಸ್,ಶಾಲಾ ವಾಹನಗಳು ಹೂವು ಮಾರುಕಟ್ಟೆಗೆ ಹೋಗುವ ವಾಹನಗಳು ಈಶಾಗೆ ಹೋಗುವ ವಾಹನಗಳು ಇದೆ ರಸ್ತೆಯಲ್ಲೆ ಹೋಗ್ತಾವೆ ಎಷ್ಟೋ ಜನ ಅಪಘಾತಗಳಾಗಿ ಗಾಯಗೊಂಡಿದ್ದರು ರಸ್ತೆ ದುರಸ್ತಿಗೆ ತಿಪ್ಪೇನಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಹಾಗು ಸಾಮಾಜಿಕ ಹೋರಾಟಗಾರ ಮುಷ್ಟೂರು ಶ್ರೀದರ್ ತಾನೆ ಸ್ವಂತ ಕರ್ಚಿನಲ್ಲಿ ಐದಾರು ಟಿಪ್ಪರ್ ಜಲ್ಲಿ ವೆಟ್ ಮಿಕ್ಸ್ ತರಿಸಿ ಎರಡು ಜೆಸಿಬಿ ಗಳಲ್ಲಿ ಹಾಕಿಸಿ ದುರಸ್ತಿ ಕಾರ್ಯ ನಡೆಸಿದ್ದು, ವಿನಾಯಕ ಕಲ್ಯಾಣ ಮಂಟಪದಿಂದ ಮುಸ್ಟೂರು ವರೆಗೆ ತಾತ್ಕಾಲಿಕ ರಸ್ತೆ ರಿಪೇರಿ ಮಾಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟು ಸಮಾಜಿಕ ಕಳಕಳಿಯನ್ನ ತೋರಿದ್ದಾರೆ.
