ಚಿಕ್ಕಬಳ್ಳಾಪುರ:
ಕೆ.ವಿ.ನವೀನ್ ಕಿರಣ್ ರವರು ರಾಜಕಾರಣದೊಂದಿಗೆ ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇಂದಿನ ಯುವ ಜನಾಂಗಕ್ಕೆ
ಮಾರ್ಗದರ್ಶಕರಾಗಿದ್ದಾರೆ.ಇವರನ್ನು ಶ್ಲಾಘಿಸುವುದು ಅವಶ್ಯಕತೆ ಎಂದು ಹುಟ್ಟು ಹಬ್ಬದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದರು.
ಕೆ.ವಿ.ನವೀನ್ ಕಿರಣ್ ರವರ 46ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಮನೆಗೆ ಶ್ರೀ ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ನಿರ್ವಹಣೆ
ಯಲ್ಲಿರುವ ಎಲ್ಲಾ ವಿದ್ಯಾಸಂಸ್ಥೆಗಳ ಮುಖಂಡರುಗಳು ಹಾಗೂ ಸಿಬ್ಬಂದಿ ವರ್ಗ ತಂಡ ತಂಡವಾಗಿ ಆಗಮಿಸಿ ಅವರಿಗೆ ಶುಭ ಹಾರೈಸಿದರು.
ತಾಲೂಕಿನ ಅನೇಕ ಪ್ರಮುಖರು ವಾಣಿಜ್ಯೋದ್ಯಮಿಗಳು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಸಹ ಆಗಮಿಸಿ ಅವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮನತುಂಬಿ ಮಾತನಾಡಿದ ಕೆ.ವಿ.ನವೀನ್ ಕಿರಣ್ ನಾನು ಜಮೀನು ಸಂಪಾದಿಸಿಲ್ಲ ಆಸ್ತಿ ಸಂಪಾದಿಸಿಲ್ಲ ಆದರೆ ಜನರ ಪ್ರೀತಿ ಸಂಪಾದಿಸಿದ್ದೇನೆ. ಈ ಪ್ರೀತಿಯೇ ನನಗೆ ಶ್ರೀರಕ್ಷೆ ಆಗಿದೆ ಇಷ್ಟೊಂದು ಜನ ನನ್ನ ಮನೆಗೆ ಬಂದು ನನ್ನ ಹುಟ್ಟು ಹಬ್ಬದ ಪ್ರಯುಕ್ತ ನನಗೆ ಶುಭ ಹಾರೈಸುರುವುದು ಮನ ತುಂಬಿ ಬಂದಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ನಗರ್ಬಸಭೆ ಆಧ್ಯಕ್ಷ ಗಜೇಂದ್ರ ಉಪಾಧ್ಯಕ್ಷ ನಾಗರಾಜ್.ಜಿ ,ಮುಕ್ತಮುನಿಯಪ್ಪ,ವಾಣಿಜ್ಯೋದ್ಯಮಿ ಮಹೇಶ್, ಸುಬ್ಬಚಾರಿ, ಅರುಣ್, ಮಂಜುನಾಥ ಚಾರಿ, ಹೂವಿನ ವರ್ತಕರ ಸಂಘದ ಅಧ್ಯಕ್ಷ ರವೀಂದ್ರ, ಅನು ಆನಂದ್,
ದೇವರಾಜ್, ಆನಂದ್ ಸ್ಟುಡಿಯೋ ಕೃಷ್ಣಾಚಾರಿ ಮತ್ತು ಇತರರು ಇದ್ದರು.

Leave a Reply

Your email address will not be published. Required fields are marked *