ರಸ್ತೆ ಅಭಿವೃದ್ಧಿಗಾದರೂ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ :

ಯಲಹಂಕ : ರಾಜ್ಯ ಸರ್ಕಾರ ಬೆಂಗಳೂರು ನಗರದ ಅಭಿವೃದ್ಧಿಗೆ ಅನುದಾನ ನೀಡದಿದ್ದರೆ, ಬಂಡವಾಳ ಹೂಡಿಕೆದಾರರು ನಗರದಿಂದ ಹೊರನಡೆಯುತ್ತಾರೆ, ಇದನ್ನು ಮನಗಂಡು ರಾಜ್ಯ ಸರ್ಕಾರ ರಸ್ತೆ ಅಭಿವೃದ್ಧಿಗಾದರೂ ಹಣ ನೀಡಿ ಸಹಕರಿಸಬೇಕು ಎಂದು ಶಾಸಕ ಎಸ್ ಆರ್ ವಿಶ್ವನಾಥ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಕ್ಷೇತ್ರದ ರಾಜಾನುಕುಂಟೆ ಗ್ರಾ.ಪಂ. ವ್ಯಾಪ್ತಿಯ ಅದ್ದಿಗಾನಹಳ್ಳಿ ಗ್ರಾಮದಲ್ಲಿ ಶಾಸಕರ ವಿಶೇಷ ಅನುದಾನದ ಅಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು ‘ಇತ್ತೀಚೆಗೆ ರಾಜ್ಯ ಸರ್ಕಾರ ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿ ಮುಚ್ಚಲು ಒಂದಷ್ಟು ಅನುದಾನ ನೀಡಿ ರಸ್ತೆ ಗುಂಡಿ ಮುಚ್ಚಿಸುವ ಕಾರ್ಯ ಕೈಗೊಂಡಿತು, ಆದರೆ ನಗರದಲ್ಲಿ ಈ ವಾರದಲ್ಲಿ ಸುರಿದ ಮಳೆಯಿಂದಾಗಿ ಮುಚ್ಚಿದ್ದ ರಸ್ತೆ ಗುಂಡಿಗಳು ಮತ್ತದೇ ಹಳೆಯ ಸ್ಥಿತಿ ತಲುಪಿ, ಪ್ರಯೋಜನ ವಿಲ್ಲದಂತಾಗಿವೆ. ವಾಸ್ತವಿಕವಾಗಿ ರಾಜ್ಯ ಸರ್ಕಾರ ರಸ್ತೆಗಳ ಪೂರ್ಣ ಅಭಿವೃದ್ಧಿಗೆ ಆಧ್ಯತೆ ನೀಡಬೇಕು, ಆದರೆ ರಸ್ತೆ ಗುಂಡಿ ಮುಚ್ಚಿಸಲೂ ಅನುದಾನ ನೀಡಲಾಗದಷ್ಟು ಅಭಿವೃದ್ಧಿ ಶೂನ್ಯತೆಯ ಹಂತಕ್ಕೆ ರಾಜ್ಯ ಸರ್ಕಾರ ತಲುಪಿರುವುದು ಶೋಚನೀಯ ಸಂಗತಿ. ನಗರದಲ್ಲಿ ಅಭಿವೃದ್ಧಿ ಆಗದಿದ್ದರೆ ಬಂಡವಾಳ ಹೂಡಿಕೆದಾರರು ನಗರದಿಂದ ಹೊರನಡೆಯುತ್ತಾರೆ, ಇದನ್ನು ರಾಜ್ಯ ಸರ್ಕಾರ ಕನಿಷ್ಟ ಪಕ್ಷ ರಸ್ತೆಗಳ ಅಭಿವೃದ್ಧಿಗಾದರೂ ಅನುದಾನ ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ದಿಬ್ಬೂರು ಜಯಣ್ಣ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್,ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷೆ ಚನ್ನಮ್ಮ, ಮಾಜಿ ಅಧ್ಯಕ್ಷ ಎಸ್.ಜಿ.ನರಸಿಂಹ ಮೂರ್ತಿ(ಎಸ್.ಟಿ.ಡಿ.ಮೂರ್ತಿ), ಗ್ರಾ.ಪಂ. ಸದಸ್ಯರು, ಬಿಜೆಪಿ ಮುಖಂಡರಾದ ಸಾದೇನಹಳ್ಳಿ ಚಿಕ್ಕಣ್ಣ, ಬಿಜೆಪಿ ಯುವ ಮುಖಂಡ ಸಾದೇನಹಳ್ಳಿ ಪ್ರಕಾಶ್ ಗೌಡ, ಸ್ಥಳೀಯ ಮುಖಂಡರಾದ ನರೇಂದ್ರ, ಮಲ್ಲಿಕಾರ್ಜುನ, ಕಿರಣ್, ಪಿಡಿಓ ನಾಗರಾಜ್ ಸೇರಿದಂತೆ ಇನ್ನಿತರರಿದ್ದರು.

Public power

9845085793

7349337989

Leave a Reply

Your email address will not be published. Required fields are marked *