ವರದಿ: ಮುಬಷೀರ್ ಅಹಮದ್

ಪೋಷಕರ ಕನಸನ್ನು ನನಸು ಮಾಡಲು ವಿಧ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ, ಡಾ.ಟಿ. ಮಲ್ಲಪ್ಪ..

ಪೋಷಕರ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಜೀವನ ಸಾಗಿಸಿದರೆ ಬದುಕು ಬಂಗಾರವಾಗುತ್ತೆ: ಕವಿತಾ ರಘುನಾಥ್

ಚಿಕ್ಕಬಳ್ಳಾಪುರ: ಮಾಹಿತಿ ಹಾಗೂ,ಅಧ್ಯಯನಕ್ಕಾಗಿ ಮೊಬೈಲ್ ಬಳಸಿ ಮೊಬೈಲ್ನ ರೀಲ್ ಪ್ರಪಂಚಕ್ಕೆ ಬಲಿಯಾಗಿ ನಿಜ ಜಿವನ ಹಾಳು ಮಾಡಿ ಕೊಳ್ಳಬೇಡಿ,ಅದೇ ನಮ್ಮ ಪ್ರಪಂಚ ಎಂದು ಭಾವಿಸಿದರೆ ನಿಮ್ಮ ಜೀವನದ ಪ್ರಮುಖ ಘಟ್ಟ ಹಾಗೂ ನಿಮ್ಮ ಪೋಷಕರ ಶ್ರಮ ವ್ಯರ್ಥವಾಗುತ್ತೆ ಎಂದು ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಖ್ಯಾತ ಕವಿಗಳಾದ ಡಾ. ಟಿ.ಯಲ್ಲಪ್ಪ ತಿಳಿಸಿದರು.

ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಿದ್ದ ಬಾಲಾಜಿ ಎಜುಕೇಷನಲ್ ಟ್ರಸ್ಟ್ ನ ಬೆಸ್ಟ್ ಪಿಯು ಕಾಲೇಜಿನ ಸ್ಪೂರ್ತಿ 2024 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯುವಕರು ದಿನೇ ದಿನೇ ತಮ್ಮ ಅಮೂಲ್ಯ ಸಮಯವನ್ನು ಮೊಬೈಲ್ ಬಳಕೆಯಲ್ಲಿ ವ್ಯರ್ಥ ಮಾಡುತ್ತಿದ್ದು ಪೋಷಕರು ಶಿಕ್ಷಣ ತಜ್ಞರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ದೇಶವನ್ನು ಕಟ್ಟು ಬೆಳೆಸವಯುವ ಶಕ್ತಿ ಇಂದು ರೀಲ್ ಪ್ರಪಂಚಕ್ಕೆ ಬಲಿಯಾಗಿ ನಿಜ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.

ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಪೋಷಕರು ಪಡುವ ಶ್ರಮ ಅಷ್ಟಿಷ್ಟಲ್ಲ ಉಪವಾಸ ಇದ್ದರು ಸರಿ ಮಕ್ಕಳ ಶಿಕ್ಷಣದಲ್ಲಿ ಏನೂ ಕಮ್ಮಿಯಾಗಬಾರದೆಂದು ಬೆವರು ಹರಿಸಿ ನಿಮ್ಮನ್ನು ಶಿಕ್ಷಣ ಕೊಡಿಸುತ್ತಾರೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಯುವ-ಜನಾಂಗ ಸಾಧಕರನ್ನು ರೊಲ್ ಮಾಡಲ್ ಮಾಡ್ಕೊಳ್ಳಿ ತಂದೆ ತಾಯಿ ಕನಸನ್ನು ನನಸು ಮಾಡಲು ವಿಧ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ ಗುರುಗಳನ್ನು ಆರಾಧಿಸಿ ಗುರು ಭಕ್ತಿಯನ್ನು ಬೆಳಸಿಕೊಳ್ಳಿ ಜೀವನದ ಪರೀಕ್ಷೆಯನ್ನು ಬರೆಯಿರಿ ಜೀವನ ಸಾರ್ಥಕವಾಗುತ್ತದೆ ಗುರಿಯಿಟ್ಟು ಸಾಧನೆ ಮಾಡಿ ನಿಮ್ಮ ಜವಾಬ್ದಾರಿಯನ್ನು ಅರಿತು ಸಾರ್ಥಕ ಜೀವನ ಸಾಗಿಸಬಹುದು ಎಂದರು.

ಅಬ್ದುಲ್ ಕಲಾಂ ರವರು ಬಡ ಕುಟುಂಬದಲ್ಲಿ ಜನಿಸಿದವರು, ಕನಸು ಹೊತ್ತಿ ಮುಂದೆ ಸಾಗಿ ಶ್ರಮದಿಂದ ಕನಸನ್ನು ನನಸು ಮಾಡಿಕೊಂಡು ಪ್ರಶಸ್ತಿ ಪಡೆಯುವ ಜೊತೆಗೆ ದೂಡ್ಡ ದೂಡ್ಡ ಹುದ್ದೆಗಳನ್ನು ಅಲಂಕರಿಸದರು.ಹಾಗಾಗಿ ಯುವಕರು ಅವಕಾಶವನ್ನು ಬಳಸಿಕೊಂಡು ಶ್ರಮ ಪಡಬೇಕು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಆಗಲೇ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಬೆಸ್ಟ್ ಪಿಯು ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲದಿದ್ದರೂ ಉತ್ತಮವಾಗಿ ಕಾಲೇಜನ್ನು ಮುನ್ನಡೆಸಿಕೊಂಡು ಬರುತ್ತಿರುವ ಇವರು ಮಕ್ಕಳಿಗೆ ಇಂತಹ ಕಾರ್ಯಕ್ರಮಗಳನ್ನು ರೂಪಿಸಿ ಬೆಸ್ಟ್ ಪಿಯು ಕಾಲೇಜು ಜಿಲ್ಲೆಯಲ್ಲಿ ದಿ ಬೆಸ್ಟ್ ಆಗಿ ಹೊರಬರುತ್ತಿದೆ ಎಂದು ಬಣ್ಣಿಸಬಹುದು ಎಂದರು.

ಬಾಲಾಜಿ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷೆ ಕವಿತಾ ರಘುನಾಥ್ ಮಾತನಾಡಿ ವಿದ್ಯಾರ್ಥಿಗಳಿಗೆ ಪೋಷಕರ,ಗುರುಗಳ ಮಾರ್ಗದರ್ಶನ ಬಹು ಮುಖ್ಯ ನಮ್ಮ ಸಾಧನೆಯಲ್ಲಿ ನಾವು ಅಲಂಕರಿಸಿರುವ ದೂಡ್ಡ ದೂಡ್ಡ ಹುದ್ದೆಗಳ ಹಿಂದೆ ಅವರ ಶ್ರಮ ಬಹಳಷ್ಟಿದೆ ಅದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಅವರ ಮಾರ್ಗದರ್ಶನದಲ್ಲಿ ಜೀವನ ಸಾಗಿಸಿದರೆ ಬದುಕು ಬಂಗಾರವಾಗುತ್ತೆ, ಅವರನ್ನ ನಿರ್ಲಕ್ಷ್ಯಿಸಿದರೆ ಬದುಕು ಕಷ್ಟಕರ ಎಂಬುದನ್ನು ಅರ್ಥೈಸಿಕೊಳ್ಳಬೇಕು. ನಿರಂತರ ಅಧ್ಯಯನದಲ್ಲಿ ತೊಡಗಿಸಿ ಇನ್ನು ಉಪಯುಕ್ತ ಮಾಹಿತಿ ಸಂಗ್ರಹಣೆ ಮಾಡುವುದನ್ನು ರೂಡಿಸಿಕೊಳ್ಳುವ ಜೊತೆಗೆ ಸಾಮಾಜಿಕ ಕಳಕಳಿಯನ್ನು ವಿದ್ಯಾರ್ಥಿಗಳು ಹೊಂದಿರಬೇಕು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ ಒಳ್ಳೆಯ ಶಿಕ್ಷಣ ಪಡೆದು ಸೊಶಿಯಲ್ ಮಿಡಿಯಾಗಳಿಂದ ಆದಷ್ಟು ದೂರವಿದ್ದು ಓದಿನ ಕಡೆ ಗಮನ ಹರಿಸಿ ಶಿಕ್ಷಣ ಪಡೆದ ಸಂಸ್ಥೆಗೆ ಒಳ್ಳೆ ಹೆಸರು ತಂದು ಕೊಡಬೇಕು ಎಂದರು.
ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾಲೇಜಿನ ಪ್ರಾಂಶುಪಾಲ
ರಘುನಾಥ್, ಡಾ.ರಾಣಾಪ್ರತಾಪ್ ರೆಡ್ಡಿ,ರಾಮಯ್ಯ,ಬಾಲರಾಜು,
ಮಲ್ಲಣ್ಣ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿಧ್ಯಾರ್ಥಿ ಪೋಷಕರು ಇದ್ದರು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

Public power

R Hanumanthu

kogilu layout

Yelahanka

Bangalore

9845085793

7349337989

9035282296

Leave a Reply

Your email address will not be published. Required fields are marked *