
ಬಯಲು ಸಿಂಹ:
ಬಂಗಾರ ಪೇಟೆ : ಪಟ್ಟಣದ ಕೆ ಸಿ ರೆಡ್ಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಇದೀಗ ನೂತನ ವಾಗಿ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಡಾ ಶಕುಂತಲಾ ರವರಿಗೆ ಕೋಲಾರ ಕವಿ ಬಳಗ ದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ನೆರವೇರಿಸಿದ ರಾಜ್ಯ ಅರಳು ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕವಿ ವಿ ಲಕ್ಷ್ಮಯ್ಯ ರವರು ಮಾತನಾಡಿ ಕಾಲೇಜುಗಳು ಜ್ಞಾನ ದೇಗುಲ ವಿದ್ದಂತೆ ಅಧ್ಯಾಪಕರು ಜ್ಞಾನ ದಕ್ಷರ ಬಿತ್ತುವ ದೇವರುಗಳಿದ್ದಂತೆ,ತಂದೆ ತಾಯಿಯ ನಂತರದ ಮಕ್ಕಳ ಆಗುಹೋಗುಗಳ, ಚಲನ ವಲನ ಗಳ ವೀಕ್ಷಣೆ ಯೊಂದಿಗೆ ಅವರನ್ನು ಒಳ್ಳೆಯ ಮಾರ್ಗದಲ್ಲಿ ನಡೆದು ಕೊಳ್ಳುವ ರೀತಿಯಲ್ಲಿ ಪಾಠದೊಂದಿಗೆ, ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುವಂತಹ ಜವಾಬ್ದಾರಿ ಶಿಕ್ಷಕರು ಅಥವಾ ಅಧ್ಯಾಪಕರು ವಹಿಸಿಕೊಂಡು ಬರುತ್ತಿದ್ದಾರೆ
ಅದಕ್ಕಾಗಿಯೇ ನಮ್ಮ ಪೂರ್ವ ಕಾಲದಿಂದಲೂ ಸಹ ಗುರುವಿಗೆ ಬಹಳ ಭಕ್ತಿ ಪೂರ್ವಕ ಗೌರವ ವನ್ನು ನೀಡುತ್ತಾ ಬಂದಿದ್ದಾರೆ ಅದನ್ನು ನಾವುಗಳು ಗೌರವ ನೀಡುವುದನ್ನು ಮುಂದುವರೆಸಿಕೊಂಡು ಹೋಗಬೇಕೆಂದರು.
ಸನ್ಮಾನ ಸ್ವೀಕರಿಸಿದ ಡಾ ಶಕುಂತಲಾ ರವರು ಮಾತನಾಡಿ ಕಾಲೇಜು ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿ ಗೆ ಸದಾ ಶ್ರಮಿಸುವುದರೊಂದಿಗೆ ಪ್ರತಿಯೊಬ್ಬ ವಿದ್ಯಾರ್ಥಿಯ ಅವರ ಆಸಕ್ತಿಯನ್ನು ಅವಲೋಕಿಸಿ ಮಾನಸಿಕ ವಾಗಿ ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪಠ್ಯ ಮತ್ತು ಇತರೆ ಸಮಾಜ ಮುಖಿ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೆರೇಪಿಸಲು ಶ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಸ್ ಜ್ಯೋತಿ,ಪ್ರಾಧ್ಯಾಪಕರಾದ ವೇಣುಗೋಪಾಲ್ ರವರು,
ಉಪನ್ಯಾಸಕರು ಪ್ರಸನ್ನಕುಮಾರ್ ರವರು,ಪ್ರೊಪೆಸರ್ ಶ್ರೀಧರ್, ಸಹಾಯಕ ಪ್ರಾಧ್ಯಾಪಕರು ಮಂಜುಳ ರವರು,
ಕೆ ರಾಜು (ಉಪೇಂದ್ರ), ವೆಂಕಟಾಚಲಪತಿ, ಶ್ರೀನಿವಾಸ್ ಹಾಗೂ ಇತರರು ಹಾಜರಿದ್ದರು.
