ಚಿಕ್ಕಬಳ್ಳಾಪುರ: ಪೈಪ್‌ಲೈನ್ ಹೊಡೆದ ಕಾರಣ ಎದುರಾಗಿದ್ದ ನೀರಿನ ಸಮಸ್ಯೆ ಕುರಿತು ಗಮನಕ್ಕೆ ಬಂದ ತಕ್ಷಣವೇ ನಗರಸಭೆ ಉಪಾಧ್ಯಕ್ಷ ನಾಗರಾಜ್. ಜಿ ಹಬ್ಬದ ರಜೆ ಇದ್ದರು ಸಹಾ ಕೂಡಲೇ ನಗರಸಭೆ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿ ಪೈಪ್ ಲೈನ್ ಮರು ಜೋಡಿಸುವ ಕಾರ್ಯ ಪೂರ್ಣಗೊಳಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಗರದ 5ನೇ ವಾರ್ಡಿನ ಅರಣ್ಯ ಇಲಾಖೆ ಆವರಣದಲ್ಲಿರುವ ವಸತಿ ಗೃಹಗಳಿಗೆ ಹೆದ್ದಾರಿ ವಿಸ್ತರಣೆ ವೇಳೆ ಪೈಪ್‌ಲೈನ್ ಹೊಡೆದು ನೀರಿನ ಸಮಸ್ಯೆ ಎದುರಾಗಿತ್ತು ಈ ಪ್ರದೇಶಕ್ಕೆ ಜಕ್ಕಲಮಡಗು ಮತ್ತು ಬೋರ್‌ವೆಲ್ ಎರಡೂ ಕಡೆಗಳಿಂದಲೂ ನೀರು ಸರಬರಾಜು ಮಾಡುತ್ತಿದ್ದು,
ಪೈಪ್‌ಲೈನ್ ಹೊಡೆದ ಕಾರಣ ನೀರಿನ ಸಮಸ್ಯೆ ಎದುರಾಗಿತ್ತು.

ಈ ಬಗ್ಗೆ ವಸತಿ ನಿಲಯ ನಿವಾಸಿಗಳು ತಮ್ಮ ಗಮನಕ್ಕೆ ತಂದಿದ್ದು,ಕೂಡಲೇ ಸರ್ಕಾರಿ ರಜೆ ಇದ್ದರೂ ನಗರಸಭೆ ಸಿಬ್ಬಂದಿಯನ್ನು ಕರೆಯಿಸಿ ಪೈಪ್ ಲೈನ್ ಮರು ಜೋಡಿಸುವ ಕಾರ್ಯ ಪೂರ್ಣಗೊಳಿಸಲಾಯಿತು ಎಂದು ನಗರಸಭೆ ಉಪಾಧ್ಯಕ್ಷ ನಾಗರಾಜ್. ಜೆ ತಿಳಿಸಿದ್ದಾರೆ.
ಸ್ಥಳೀಯರಿಂದ ದೂರು ಬಂದ ಕೆಲವೇ ಗಂಟೆಗಳಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗಿದ್ದು,ಈ ವಸತಿ ನಿಲಯಗಳ ಜನರು ಸಮಸ್ಯೆಯಿಂದ ಪಾರಾಗಿದ್ದಾರೆ. ಒಟ್ಟಿನಲ್ಲಿ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿರುವ ವಸತಿ ನಿಲಯಗಳ ಜನರಿಗೆ ಹಬ್ಬದ ಸಮಯದಲ್ಲಿ ನೀರಿನ ಸಮಸ್ಯೆ ಬಗೆಹರಿಸಿರುವುದು ಸಂತಸ ತಂದಿದೆ ಎಂದು ನಾಗರಾಜ್. ಜಿ ತಿಳಿಸಿದರು.

Leave a Reply

Your email address will not be published. Required fields are marked *