



ಯಲಹಂಕ : ಯಲಹಂಕ ಕ್ಷೇತ್ರದ ರಾಜಾನುಕುಂಟೆ ಯಲ್ಲಿರುವ ನೇಹ ಎಚ್.ಪಿ.ಗ್ಯಾಸ್ ಕಚೇರಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ಶನಿವಾರ ಆಯುಧಪೂಜೆ ಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ನೇಹ ಎಚ್.ಪಿ.ಗ್ಯಾಸ್ ಸಂಸ್ಥೆಯ ಮಾಲೀಕರು, ರಾಜಾನುಕುಂಟೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ) ಅವರ ನೇತೃತ್ವದಲ್ಲಿ ನಡೆದ ಆಯುಧ ಪೂಜೆಯ ವಿಶೇಷ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳು, ನರಸಿಂಹಮೂರ್ತಿ ಯವರ ಕುಟುಂಬ ವರ್ಗದವರು ಹಾಗೂ ಹಲವು ಮುಖಂಡರು, ಹಿತೈಷಿಗಳು ಹಾಗೂ ಸ್ನೇಹಿತರು ಪಾಲ್ಗೊಂಡು, ಆಯುಧ ಪೂಜೆಯನ್ನು ಯಶಸ್ವಿಗೊಳಿಸಿದರು.
ಸಂಸ್ಥೆಯ ಮಾಲೀಕರಾದ ಎಸ್ ಜಿ ನರಸಿಂಹಮೂರ್ತಿ ಯವರು ಸಂಸ್ಥೆಯ ಸಿಬ್ಬಂದಿಗಳು, ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಲವು ಮುಖಂಡರು ಸೇರಿದಂತೆ ಎಲ್ಲರಿಗೂ ಸಿಹಿ ವಿತರಿಸಿ ದಸರಾ ಹಬ್ಬದ ಶುಭ ಹಾರೈಸಿದರು.
Public power
9845085793
7349337989
9035282296
