






ಸಿಂಧಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಂಟ್ರಾನಿಕಾ ಅಂತರ್ ಶಾಲಾ ಸಾಂಸ್ಕೃತಿಕ ಉತ್ಸವ
ಯಲಹಂಕ. ದಿನಾಂಕ. 22. 11. 2024
ನಗರದ ಚೊಕ್ಕನಹಳ್ಳಿ, ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ನವೆಂಬರ್ 22, 23ರಂದು ಎರಡು ದಿನಗಳ ಅವಧಿಯಲ್ಲಿ ನಡೆದ ಸಿಂಟ್ರಾನಿಕ ಅಂತರ್ ಶಾಲಾ ಸಾಂಸ್ಕೃತಿಕ ಉತ್ಸವವು ಅದ್ದೂರಿಯಾಗಿ ಕೊನೆಗೊಂಡಿತು.
ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಂಗೋಲಿ, ಮೆಹೆಂದಿ, ಚಿತ್ರಕಲೆ, ಸಂಗೀತ ನೃತ್ಯ, ಆನ್ ಲೈನ್ ಗೇಮಿಂಗ್, ರಸಪ್ರಶ್ನೆ ಮುಂತಾದ ಹಲವು ಆಕರ್ಷಕ ಸ್ಪರ್ಧೆಗಳು ನಡೆದವು. ವಿವಿಧ ಪ್ರೌಢಶಾಲೆಯ ಹಲವು ಮಕ್ಕಳು ಇದರಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಶಾಲಾ ಸಮಗ್ರ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಫ್ಲಾರೆನ್ಸ್ ಪಬ್ಲಿಕ್ ಶಾಲೆಯು ಪಡೆದುಕೊಂಡಿತು.ಕುಮಾರ ಕೃಪ ರಸ್ತೆಯಲ್ಲಿರುವ ಸಿಂಧಿ ಪ್ರೌಢಶಾಲೆಯು ಶಾಲಾ ಸಮಗ್ರ ದ್ವಿತೀಯ ಸ್ಥಾನವನ್ನು ಗಳಿಸಿತು. ರೆಡಿಯಂಟ್ ಶೇಮಾ ಶಾಲೆಯ ವಿದ್ಯಾರ್ಥಿಯು ವೈಯಕ್ತಿಕ ಅತ್ಯುತ್ತಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡನು.
ಸಂಜೆ ನಡೆದ ಉತ್ಸವದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ನಂದ.ಎನ್. ಅವರು ವಿಜೇತರಾದ ಶಾಲಾ ಮಕ್ಕಳಿಗೆ ಪಾರಿತೋಷಕ ಗಳನ್ನು ವಿತರಿಸಿ ಶುಭ ಹಾರೈಸಿದರು. ಸಮಾರಂಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಕಾಂಚನ ಹಾಗೂ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾಲೇಜು ಆಡಳಿತ ಮಂಡಳಿಯವರು ಬಹುಮಾನ ಪಡೆದ ಎಲ್ಲಾ ಮಕ್ಕಳಿಗೆ ಶುಭಾಶಯಗಳನ್ನು ಕೋರಿದ್ದಾರೆ.