





















ವಿಜೃಂಭಣೆಯಿಂದ ಸಂಪನ್ನಗೊಂಡ ಕೋಗಿಲು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ :
ಟ್ರೋಫಿ ಮುಡಿಗೇರಿಸಿಕೊಂಡ ಕೋಗಿಲು ಸ್ಮ್ಯಾಷರ್
ಬ್ಯಾಟರಾಯನಪುರ : ಕ್ಷೇತ್ರದ ಜಕ್ಕೂರು ವಾರ್ಡ್ ಕೋಗಿಲು ಗ್ರಾಮದಲ್ಲಿ ದಿನಾಂಕ. 16. 02. 2025 ಆಯೋಜಿಸಿದ್ದ ಕೋಗಿಲು ಪ್ರೀಮಿಯರ್ ಲೀಗ್ ಕ್ರಿಕೆಟ್ ಮೊದಲನೇ ವರ್ಷದ ಪಂದ್ಯಾವಳಿಯು
ಕೋಗಿಲು ಸ್ಮ್ಯಾಷರ್ ತಂಡದ ಗೆಲುವಿನೊಂದಿಗೆ, ಟ್ರೋಫಿ, ಬಹುಮಾನ ಮುಡಿಗೇರಿಸಿ ಕೊಳ್ಳುವ ಮೂಲಕ ಭಾನುವಾರ ಸಂಜೆ ವಿಜೃಂಭಣೆಯಿಂದಸಂಪನ್ನಗೊಂಡಿತು.
ಈ ಕಾರ್ಯಕ್ರಮಕ್ಕೆ ಕೋಗಿಲು ಗ್ರಾಮದ ಮಾಜಿ ಬಿಬಿಎಂಪಿ ಸದಸ್ಯರಾದ ಕೆ ಎ ಮುನೀಂದ್ರ ಕುಮಾರ್ ಸಮಾಜಸೇವಕರಾದ ಕೆ ಎನ್ ನಾಗೇಂದ್ರ ಕುಮಾರ್ ಹಾಗೂ ದೇವರಾಜ್ ಗೋವಿ ಕಾಂಗ್ರೆಸ್ ಮುಖಂಡರು ಗೋಪಾಲ್(ಟೈಲರ್) ಭಾಗವಹಿಸಿದರು ಮತ್ತುಗೆಲುವು ಸಾಧಿಸಿದ ಮೊದಲನೇ ಬಹುಮಾನ ಕೋಗಿಲು ಸ್ಮ್ಯಾಷರ್ ತಂಡಕ್ಕೆ ಎರಡನೇ ಬಹುಮಾನ
ಕೋಗಿಲು ಸಿಕ್ಸರ್ ತಂಡಕ್ಕೆ ಕೋಗಿಲು ಗ್ರಾಮದ ಪುಟ್ಟರಾಜು ವಕೀಲರು ಮತ್ತು ಬಿ ಎನ್ ನಾಗರಾಜ್ ಸಮಾಜಸೇವಕರು. ಪಂದ್ಯಾವಳಿಯ ಆಯೋಜಕರಾದ ಕೇಶವ್ ಕೆ ಎನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಡುಗೊರೆ ನೀಡಿ ಗೌರವಿಸಿದರು.
ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಆರು ತಂಡಗಳು ಬಹಳ ಚೆನ್ನಾಗಿ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾದರು ಈ ಸಂದರ್ಭದಲ್ಲಿ ಕೋಗಿಲು ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಅನೇಕರು ಆಟವನ್ನು ವೀಕ್ಷಣೆ ಮಾಡಿ ಇಂತಹ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇನ್ನು ಬಹಳ ಚೆನ್ನಾಗಿ ನಡೆಸಲಿ ಆಟಗಾರರಿಗೆ ಉತ್ತೇಜನ ನೀಡುವ ಮೂಲಕ ಸಮಾಜ ಸೇವಕರು ಪ್ರೋತ್ಸಾಹಿಸಬೇಕು ಎಂದು ನಾಗೇಶ್ ಕೆ ಎನ್ ಮಾತನಾಡಿದರು ಭಾಗವಹಿಸಿದ ಎಲ್ಲಾ ಪಂದ್ಯಾವಳಿಯ ಆಟಗಾರರಿಗೆ ಸಮಾಧಾನಕರ ಬಹುಮಾನ ಕೇಶವ ಕೆ ಎನ್ ಮತ್ತು ದಿನೇಶ್ (ಗೋಕುಲರವರ ಮಗ) ವಿತರಿಸಿದರು ಈ ಕಾರ್ಯಕ್ರಮದಲ್ಲಿ ಪಂದ್ಯಾವಳಿಯ ಆಟಗಾರರು ಮತ್ತು ಕೋಗಿಲು ಗ್ರಾಮಸ್ಥರಿಂದ ಬಹಳ ವಿಜೃಂಭಣೆಯಿಂದ ನೆರವೇರಿತು