ಯಲಹಂಕ ದಿನಪತ್ರಿಕೆ ವಿತರಕರ ಸಂಘದಿಂದ ಡಾ.ಪುನೀತ್ ರಾಜ್ ಕುಮಾರ್ ಜನ್ಮದಿನಾಚರಣೆ :

ಯಲಹಂಕ : ಯಲಹಂಕ ದಿನಪತ್ರಿಕೆ ವಿತರಕರ ಸಂಘದ ಪದಾಧಿಕಾರಿಗಳು ಯಲಹಂಕ ಓಲ್ಡ್ ಟೌನ್ ಪತ್ರಿಕಾ ವಿತರಣಾ ಕೇಂದ್ರದಲ್ಲಿ ಮರೆಯಲಾಗದ ಮಾಣಿಕ್ಯ ಡಾ.ಪುನೀತ್ ರಾಜ್ ಕುಮಾರ್ ಅವರ 50ನೇ ಜನ್ಮದಿನಾಚರಣೆಯನ್ನು ಸರಳ ಮತ್ತು ಅರ್ಥಪೂರ್ಣ ರೀತಿಯಲ್ಲಿ ಆಚರಿಸಿದರು.

ಇದೇ ವೇಳೆ ವಿತರಕರ ಸಂಘದ ಉಪಾಧ್ಯಕ್ಷ ಶಂಕರ್ ಕುಮಾರ್, ಖಜಾಂಚಿ ವೀರಭದ್ರ ವೈ.ಸಿ. ಅವರು ಮಾತನಾಡಿ ‘ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆಸಿರುವ ನೆಚ್ಚಿನ ನಾಯಕ ನಟ ಡಾ.ಪುನೀತ್ ರಾಜ್ ಕುಮಾರ್ ಅವರ ನಟನೆ, ಸಮಾಜ ಸೇವೆ, ಸರಳ ಜೀವನ, ಅನಾಥ ಆಶ್ರಮ, ವೃದ್ಧಾಶ್ರನಗಳಿಗೆ ಸದ್ದಿಲ್ಲದೆ ಮಾಡಿರುವ ಸಹಕಾರ, ನೀಡಿರುವ ನೆರವು, ನಟನೆಯಲ್ಲಿ ಮೂಡಿಸಿರುವ ಛಾಪು, ಸಮಾಜಕ್ಕೆ ನೀಡಿರುವ ಸತ್ ಸಂದೇಶ, ಪಡೆದಿರುವ ಬಿರುದುಗಳು, ಸಂದಿರುವ ಪ್ರಶಸ್ತಿಗಳ ಕುರಿತು ಸ್ಮರಿಸಿದರು. ಅವರ ಆದರ್ಶ, ಮಾಡಿರುವ ಸಾಧನೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಾಳಬೇಕು, ಸಾವು ದೇಹಕ್ಕಷ್ಟೆ ಸಾಧನೆಗಳಿಗಲ್ಲ ಎಂಬ ಸಂದೇಶವನ್ನು ಸಾರಿದರು.

ಇದೇ ಸಂದರ್ಭದಲ್ಲಿ ದಿನಪತ್ರಿಕೆ ವಿತರಕರ ಸಂಘದ ಪದಾಧಿಕಾರಿಗಳಾದ ವೀರೇಶ್, ಉಮೇಶ್, ಶಶಿ, ಗೌರೀಶ್, ನಾಗಾರ್ಜುನ, ನವೀನ್, ದಿನೇಶ್ ಸೇರಿದಂತೆ ಪತ್ರಿಕೆ ಹಾಕುವ ಹುಡುಗರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *