’ಹಾಫ್‌ಟೈಮ್” ಕ್ಷಣಗಳನ್ನು ಮರುವಿವರಿಸಲು ಯಶ್ ಅವರನ್ನು ಸೇರಿಸಿಕೊಂಡ ಕೋಕ-ಕೋಲಾ ಇಂಡಿಯಾ(Coca-Cola® India)

ತನ್ನ ಇತ್ತೀಚಿನ ಚಿತ್ರದೊಂದಿಗೆ ಬ್ರ್ಯಾಂಡ್, ತನ್ನ ಹಾಫ್‌ಟೈಮ್ ಪ್ರಚಾರಕ್ಕೆ ಅಲ್ಪವಿರಾಮದ ಶಕ್ತಿಯನ್ನು ಮರುವಿವರಿಸಲು ಸೂಪರ್‌ಸ್ಟಾರ್ ಯಶ್ ಅವರೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡು, ಮಂಜಿನಷ್ಟು ತಂಪಾದ ಕೋಕ-ಕೋಲಾದಿಂದ ಶಕ್ತಿ ಪಡೆದ ಸರಿಯಾದ ಬ್ರೇಕ್ ಪ್ರತಿನಿತ್ಯದ ಕ್ಷಣಗಳನ್ನು ಏನಾದರೂ ಅಸಾಮಾನ್ಯವಾದುದನ್ನಾಗಿ ಪರಿವರ್ತಿಸಬಹುದು ಸಾಬೀತುಪಡಿಸಿದೆ!

ಪ್ರಚಾರದ ಚಿತ್ರಕ್ಕೆ ಲಿಂಕ್: https://www.youtube.com/watch?v=Zi-HtWjyw_w

ಬೆಂಗಳೂರು, 01 ಏಪ್ರಿಲ್ 2025: ತನ್ನ ಪ್ರಸ್ತುತ ನಡೆಯುತ್ತಿರುವ ಕೋಕ್ ಹಾಫ್‌ಟೈಮ್ ಪ್ರಚಾರದ ಸಮಯದಲ್ಲಿ ಭಾರತೀಯ ಸೂಪರ್‌ಸ್ಟಾರ್ ಯಶ್ ಅವರನ್ನು ಬ್ರ್ಯಾಂಡ್‌ನ ಹೊಸ ಮುಖವಾಗಿ ಘೋಷಿಸಲು ಕೋಕ-ಕೋಲಾ(Coca-Cola®) ಉತ್ಸುಕಗೊಂಡಿದೆ. ಸರಿಯಾದ ಸಮಯಕ್ಕೆ ಬರುವ ಅಲ್ಪವಿರಾಮವು ಕೆಲವೊಮ್ಮೆ ನಮ್ಮ ದಿನನಿತ್ಯದ ಕೆಲಸಗಳ ನಡುವೆ ನಮಗೆ ಅತ್ಯಾವಶ್ಯಕವಾಗಿ ಬೇಕಾಗಿರುವುದನೇ ನೀಡಬಹುದು ಎಂಬುದನ್ನು ಆ ಮೂಲಕ ಒತ್ತಿಹೇಳಿದೆ. ಯಶ್ ಅವರನ್ನು ಜೊತೆಗೆ ಸೇರಿಸಿಕೊಳ್ಳುವ ಮೂಲಕ ಕೋಕ-ಕೋಲಾ (Coca-Cola®), ಅರ್ಥಪೂರ್ಣ ಅಲ್ಪವಿರಾಮಗಳನ್ನು-ಅಂದರೆ ಕೇವಲ ಸಮಯವನ್ನು ನಿಲ್ಲಿಸುವುದಕ್ಕಿಂತ ಹೆಚ್ಚಿನದನ್ನು ಮಾಡುವ ಕ್ಷಣಗಳನ್ನು ಕೋಕ್ ಹಾಫ್‌ಟೈಮ್‌ನೊಂದಿಗೆ ಆಚರಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

ಗಿಜಿಗುಡುವ ಮಾರುಕಟ್ಟೆ ಸ್ಥಳದಲ್ಲಿ ಚಿತ್ರೀಕರಿಸಲಾಗಿರುವ ಹೊಸ ಪ್ರಚಾರ ಚಿತ್ರವು, ಯಶ್ ಅವರ ಅನಾಯಾಸ ಆಕರ್ಷಣೆ ಮತ್ತು ಹಾಫ್‌ಟೈಮ್ ಕ್ಷಣದ ಶಕ್ತಿಯನ್ನು ತೋರಿಸುತ್ತದೆ. ಅಕ್ಕಪಕ್ಕದ ಸ್ನೇಹಿತರು ಬೃಹತ್ತಾದ ಕಟೌಟ್‌ಅನ್ನು ಜೋಡಿಸಲು ಹೆಣಗುತ್ತಿದ್ದಾಗ, ಯಶ್, ಸೂಚನೆಗಳೊಂದಿಗಲ್ಲದೆ, ತಣ್ಣಗಿನ ಕೋಕ-ಕೋಲಾದೊಂದಿಗೆ ಒಂದು ಅಲ್ಪವಿರಾಮಕ್ಕೆ ಸಂಜ್ಞೆ ನೀಡುತ್ತಾರೆ. ಅವರೆಲ್ಲರೂ ಒಂದುಗೂಡುತ್ತಿದ್ದಂತೆ, ಈ ಬ್ರೇಕ್, ತಣ್ಣಗಿನ ಕೋಕ್‌ನೊಂದಿಗೆ ಅವರಿಗೆ ಅತ್ಯಾವ್ಯಶಕವಾಗಿ ಬೇಕಾಗಿದ್ದ ಬ್ರೇಕ್ ನೀಡಿ ಅವರನ್ನು ತಾಜಾಗೊಳಿಸಿ, ಮತ್ತೆ ತಮ್ಮ ಕೆಲಸವನ್ನು ಪೂರೈಸಲು ಅವರಿಗೆ ಹುರುಪು ನೀಡುತ್ತದೆ. ಕಟೌಟ್‌ನ ಅನಾವರಣವು ಸ್ವತಃ ಯಶ್ ಅವರದೇ ಆಗಿರುತ್ತದೆ.

ಕೋಕ-ಕೋಲಾ ಕಂಪನಿಯ ಭಾರತ ಮತ್ತು ಸೌತ್‌ವೆಸ್ಟ್ ಏಶ್ಯ ಆಪರೇಟಿಂಗ್ ಘಟಕದ ಕೋಕ-ಕೋಲ ವರ್ಗದ ಮಾರ್ಕೆಟಿಂಗ್ ವಿಭಾಗದ ಹಿರಿಯ ನಿರ್ದೇಶಕ ಕೌಶಿಕ್ ಪ್ರಸಾದ್ , “ಕೋಕ-ಕೋಲಾ ಎಂದರೆ, ಪ್ರತಿದಿನದ ಕ್ಷಣಗಳನ್ನು ಉನ್ನತೀಕರಿಸುವುದರ ಕುರಿತಾಗಿದೆ ಮತ್ತು ಕೋಕ್ ಹಾಫ್‌ಟೈಮ್, ಅಂತ್ಯವಿಲ್ಲದ ನಿತ್ಯಕರ್ಮಗಳ ನಡುವೆ ಒಂದು ಅಲ್ಪವಿರಾಮ ತೆಗೆದುಕೊಳ್ಳಲು, ಇನ್ನೂ ಉತ್ತಮವಾಗಬೇಕೆಂದರೆ, ಸ್ವಾದಿಷ್ಟವಾದ, ಮಂಜಿನಷ್ಟು ತಣ್ಣಗಿರುವ ಕೋಕ-ಕೋಲಾದೊಂದಿಗೆ ವಿಶೇಷವಾಗಿ ಒಂದು ಅಲ್ಪವಿರಾಮ ತೆಗೆದುಕೊಳ್ಳುವುದಕ್ಕೆ ಒಂದು ಆಹ್ವಾನವಾಗಿದೆ. ಕೋಕ-ಕೋಲಾ ಕುಟುಂಬಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ಸ್ವಾಗತಿಸುವುದಕ್ಕೆ ನಮಗೆ ಕೌತುಕ ಮತ್ತು ಉತ್ಸಾಹವೆನಿಸುತ್ತಿದೆ. ಅವರು ಅತ್ಯಂತ ನಿರೀಕ್ಷೆಯ ಕ್ಷಣಗಳಲ್ಲಿ ಒದಗುವ ಶಕ್ತಿಯ ಪ್ರತೀಕವಾಗಿದ್ದಾರೆ. ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಅವರ ಕ್ರಿಯಾಶೀಲತೆ, ಪ್ರೇರಣೆ ನೀಡುವ ವ್ಯಕ್ತಿತ್ವ ಮತ್ತು ಜನರೊಂದಿಗಿನ ಸಂಬಂಧವನ್ನು, ಕೋಕ-ಕೋಲಾಕ್ಕೆ ನಿಖರವಾದ ವ್ಯಕ್ತಿಯಾಗಿ ನೋಡುತ್ತಾರೆ ಎಂದು ಆಶಿಸುತ್ತೇವೆ.” ಎಂದರು.

ಕೋಕ-ಕೋಲಾದೊಂದಿಗೆ ತಮ್ಮ ಸಹಯೋಗದ ಬಗ್ಗೆ ಮಾತನಾಡುತ್ತಾ, ಸೂಪರ್ ಸ್ಟಾರ್ ಯಶ್, “ಹಾಫ್‌ಟೈಮ್ ಕೇವಲ ಒಂದು ಬ್ರೇಕ್ ಅಲ್ಲ- ಇದು ಮುಂದಿನ ದೊಡ್ಡ ಕ್ಷಣದ ಮುನ್ನಿನ ಮಿಂಚು ಮತ್ತು ಕೋಕ್, ಪ್ರತಿಯೊಂದು ಅಲ್ಪವಿರಾಮವನ್ನೂ ಒಂದು ಆಚರಣೆಯಾಗಿ ಭಾಸವಾಗುವಂತೆ ಮಾಡುತ್ತದೆ. ಕೋಕ-ಕೋಲಾದೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿರುವುದಕ್ಕೆ ನನಗೆ ಬಹಳ ಸಂತೊಷವಾಗಿದೆ- ಏಕೆಂದರೆ, ಕೋಕ್‌ನೊಂದಿಗೆ ಹಾಫ್‌ಟೈಮ್ ವಿಭಿನ್ನವಾಗಿ ಬಾರಿಸುತ್ತದೆ!” ಎಂದರು.

ದೆಹಲಿಯ VML ತಂಡವು ರಚಿಸಿ, ಕಿಶೋರ್ ಐಯ್ಯರ್ ನಿರ್ದೇಶಿಸಿರುವ ಪ್ರಚಾರ ಚಿತ್ರವು, IPL, ದೂರದರ್ಶನ ಮತ್ತು ಡಿಜಿಟಲ್ ಟಚ್‌ಪಾಯಿಂಟ್‌ಗಲಾದ್ಯಂತ ಲಗ್ಗೆಹಾಕಿ, ಪ್ರತಿದಿನದ ಜೀವನಗಳಲ್ಲಿ ಹಾಫ್‌ಟೈಮ್‌ನ ಶಕ್ತಿಗೇ ಶಕ್ತಿ ಒದಗಿಸಲಿದೆ!

ಕೋಕ-ಕೋಲಾ ಹಾಫ್‌ಟೈಮ್ ಪ್ರಚಾರದ ಕುರಿತು:
• ಕೋಕ-ಕೋಲಾ, ಒಂದು ಆಟ-ಬದಲಾಯಿಸುವ ಪ್ರಚಾರಕ್ಕೆ ಜೀವ ತುಂಬಿ ಅಲ್ಪವಿರಾಮದ ಮಾಯೆಯನ್ನು ಆಲಂಗಿಸಿಕೊಳ್ಳಲು, ಅಂದರೆ ರೀಸೆಟ್ ಮಾಡಿಕೊಳ್ಳಲು, ಹೊಸತನ ಪಡೆದುಕೊಳ್ಳಲು ಮತ್ತು ಮತ್ತೆ ಜೀವಂತಗೊಳ್ಳುವ ಮುನ್ನ ಮರು ಉದ್ದೀಪನಗೊಳ್ಳಲು ಒಂದು ಕ್ಷಣ ತೆಗೆದುಕೊಳ್ಳಲು ಅಭಿಮಾನಿಗಳಿಗೆ ಪ್ರೇರಣೆ ನೀಡುತ್ತದೆ.
• ಕಥಾನಕ, ಬ್ರ್ಯಾಂಡ್ ಚಿತ್ರಗಳು ಹಾಗೂ ಡಿಜಿಟಲ್ ಅನುಭವಗಳ ಮಿಶ್ರಣದ ಮೂಲಕ ಬ್ರ್ಯಾಂಡ್ ಪ್ರಚಾರವನ್ನು ಘೋಷಿಸಿದೆ; ಪ್ರಚಾರ ಚಿತ್ರವು(campaign film), ಯಾವ ರೀತಿ ಒಂದು ಸಿಪ್ ಕೋಕ-ಕೋಲಾ ಓಡಿಹೋಗುವ ಕ್ಷಣಗಳನ್ನೂ ಏನಾದರೂ ಒಂದು ವಿಶೇಷ ಕ್ಷಣವನ್ನಾಗಿಸುತ್ತದೆ ಎಂಬುದನ್ನು ಎತ್ತಿತೋರಿಸುತ್ತದೆ.
• ಹಾಫ್‌ಟೈಮ್ ಪ್ರಚಾರದ ಭಾಗವಾಗಿ, ಕೋಕ ಸ್ಟುಡಿಯೋ ಭಾರತ್‌ನ “ಹೋಲಿ ಆಯೀ ರೇ”, ಮಥುರಾ ಮತ್ತು ವೃಂದಾವನದ ಹೋಲಿಯ ಉಜ್ವಲ ಚೈತನ್ಯಕ್ಕೆ ಜೀವ ತುಂಬಿತ್ತು. ಟ್ರ್ಯಾಕ್‌ನ ಭರ್ಜರಿ ಪ್ರಾರಂಭವು, ಭಾರತ ಮತ್ತು ನ್ಯೂಜೀಲೆಂಡ್ ನಡುವೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಂತಿಮ ಆಟದ ಸಮಯದಲ್ಲಿ ಅಧಿಕ-ಶಕ್ತಿಯ ಕೋಕ್ ಹಾಫ್‌ಟೈಮ್ ಪ್ರದರ್ಶನಕ್ಕೆ ರಂಗ ಸಜ್ಜುಗೊಳಿಸಿ, ಕೋಟ್ಯಂತರ ಕ್ರಿಕೆಟ್ ಮತ್ತು ಸಂಗೀತ ಅಭಿಮಾನಿಗಳಿಗೆ ಹಬ್ಬದ ಮೂಡ್‌ಅನ್ನು ಹೆಚ್ಚಿಸಿತ್ತು.

Leave a Reply

Your email address will not be published. Required fields are marked *