ಮಾಲೂರು :- ತಾಲ್ಲೂಕಿನ ಕಸಬಾ ಹೋಬಳಿಯ ತೊರ‍್ನಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ತೊರ‍್ನಹಳ್ಳಿ ಗ್ರಾಮದ ಸಪಲಾಂಭ ದಿನ್ನೆಯಲ್ಲಿ ಸುಮಾರು ವರ್ಷಗಳಿಂದ ಸುಸೂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಲ್ಲಿ ಶನಿವಾರ ರಾತ್ರಿ ಕಳ್ಳರು ದರೋಡೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಹಿಂದೆ ಇರುವ ಶೌಚಾಲಯದ ಗೋಡೆಯಲ್ಲಿ ರಂಧ್ರವನ್ನು ಕೊರೆದು ಬ್ಯಾಂಕ್ ಬಾಗಿಲನ್ನು ಸ್ವಲ್ಪ ಮುರಿದು, ಸಿ ಸಿ ಟಿವಿಗಳನ್ನು ನಿಷ್ಕ್ರಿಯಗೊಳಿಸಿ 1ಲಕ್ಷ 38 ಸಾವಿರ ಬೆಲೆಯ 10 ರೂಪಾಯಿ ನಾಣ್ಯಗಳನ್ನು ಕದ್ದಿದ್ದಾರೆ.
ಒಂದು ಖಾಜಾನೆಯಲ್ಲಿನ ಚಿಲ್ಲರೆ ದುಡ್ಡು 1ಲಕ್ಷ 38 ಸಾವಿರ ನಾಣ್ಯಗಳನ್ನು ಕದ್ದಿದ್ದಾರೆ. ಜೊತೆಗೆ ಮತ್ತೊಂದು ಖಜಾನೆಯಲ್ಲಿನ ಬಂಗಾರ ಹಾಗೂ ದುಡ್ಡು ಕದಿಯಲು ಪ್ರಯತ್ನ ಪಟ್ಟಿದ್ದು, ವಿಫಲರಾಗಿ ಹೊಡೆಯದೆ ಹಾಗೆ ಬಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಕೋಲಾರ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಮಾಡುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಎಸ್ಪಿ.ಭಾಸ್ಕರ್, ಡಿವೈಎಸ್ಪಿ ಮುರಳೀಧರ, ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಾಧರ್, ಕ್ರೈಮ್ ಸಬ್ ಇನ್ಸ್ಪೆಕ್ಟರ್ ರವೀಂದ್ರಗೌಡ ಸೇರಿದಂತೆ ತೊರ‍್ನಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಹನುಮಪ್ಪ, ರಿಜಿನಲ್ ಮ್ಯಾನೇಜರ್ ಸುರೇಶ್, ಸೀನಿಯರ್ ಮ್ಯಾನೇಜರ್ ಸದಾನಂದ, ಜನರಲ್ ಮ್ಯಾನೇಜರ್ ಸೋಮಶೇಖರ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬ್ಯಾಂಕಿಗೆ ಕನ್ನ ಹಾಕಿರುವ ಕಳ್ಳರು ಹಣ ಕದ್ದು ಪರಾರಿ