*ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವ

ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವವನ್ನು* ವಿಜ್ರಂಭಣೆಯಿಂದ
ಯಲಹಂಕದ ರೈಲು ಗಾಲಿ ಕಾರ್ಖಾನೆ ಪಶ್ಚಿಮ ಬಡಾವಣೆಯ ಮನೋರಂಜನ ಕೇಂದ್ರದಲ್ಲಿ ಬಸವ ಶ್ರೀ ಸೇವಾ ಸಮಿತಿ(ರಿ) ವತಿಯಿಂದ ಅದ್ದೂರಿಯಿಂದ ಜಾತಿ ಭೇದ ವಿಲ್ಲದೇ ಆಚರಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪಟ್ಟದ ಶ್ರೀ ಡಾಕ್ಟರ್ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಮೇಲಣಗವಿ ವೀರ ಸಿಂಹಾಸನ ಸಂಸ್ಥಾನ ಮಠ ,ಶಿವಗಂಗಾ ಕ್ಷೇತ್ರ ಅವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ರೈಲು ಗಾಲಿ ಕಾರ್ಖಾನೆಯ ಪ್ರಧಾನ ಮುಖ್ಯ ಕಾರ್ಮಿಕ ಅಧಿಕಾರಿಗಳಾದ ಶ್ರೀ ಶುಜಾ ಮಹಮೂದ್ ರವರು, ಬಸವಶ್ರೀ ಸೇವಾ ಸಮಿತಿಯ ಅಧ್ಯಕ್ಷರಾಗಿ ಶ್ರೀ ಬಸಯ್ಯ ಬಿ ಕಡೂರ ರವರು , ಅತಿಥಿಗಳಾಗಿ ರೈಲು ಗಾಲಿ ಕಾರ್ಖಾನೆಯ ಜಂಟಿ ಕಾರ್ಯದರ್ಶಿ ವಿ ದಯಾನಂದರಾವ್, ಅಖಿಲ ಭಾರತ ವೀರಶೈವ ಮಹಾಸಭಾ ಯಲಹಂಕ ಘಟಕದ ಅಧ್ಯಕ್ಷರು, ವಿಶ್ವ ಶಿವಶಕ್ತಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರು ಆದ ಶ್ರೀಮತಿ ಹೇಮಲತಾ ಚಿದಾನಂದ, ಹಿರಿಯ ನ್ಯಾಯವಾದಿಗಳಾದ ಶ್ರೀ ರುದ್ರಯ್ಯ, ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ಶಿವಶರಣಪ್ಪ, ಬಸವಶ್ರೀ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಎಂ ಎನ್ ಇಂದ್ರಶೇಖರ್ ಮತ್ತು ಶ್ರೀ ಸಿದ್ದಪ್ಪ ಹಿಟ್ನಳ್ಳಿ ಪ್ರಧಾನ ಕಾರ್ಯದರ್ಶಿ ಶ್ರೀ ಬಸವರಾಜು ಅವರು ವೇದಿಕೆ ಅಲಂಕರಿಸಿದ್ದರು.

ಸುಂದರ ಕಾರ್ಯಕ್ರಮವನ್ನು ಪಟ್ಟದ ಪೂಜ್ಯಶ್ರೀ ಡಾ. ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮಿಗಳು ದೀಪ ಬೆಳಗಿಸುವ ಮೂಲಕ ವೇದಿಕೆ ಗಣ್ಯರ ಜತೆಗೂಡಿ ಉದ್ಘಾಟಿಸಿದರು. ಸಂಘದ ಪದಾಧಿಕಾರಿಗಳು ಗುರುವರ್ಯ ರನ್ನು ಹಾಗೂ ವೇದಿಕೆಯ ಗಣರನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆಯ ಗಣ್ಯರು ಅವರವರ ಶೈಲಿಯಲ್ಲಿ ಮಾತನಾಡಿ ಬಸವಣ್ಣನವರ ತತ್ವವನ್ನು ಎಲ್ಲರೂ ಪಾಲಿಸಬೇಕೆಂದರು. ಅಂತ್ಯಮವಾಗಿ ಆಶೀರ್ವಚನ ನೀಡಿದ ಪೂಜ್ಯ ಶ್ರೀಗಳು ಬಸವಣ್ಣನವರ ಕಾಯಕ ಹಾಗೂ ಸಮಾಜ ಸುಧಾರಣೆ ಎಲ್ಲವನ್ನೂ ವಿಸ್ತಾರವಾಗಿ ನುಡಿದು ಶ್ರೀ ಜಗಜ್ಯೋತಿ ಮತ್ತು ವಿಶ್ವಗುರು ಆದದ್ದು ಹೇಗೆ ಎಂದು ಬಣ್ಣಿಸಿದರು. ದೇಹವೇ ದೇಗುಲ ಕಾಲೇ ಕಂಬ ಎಂಬ ಬಸವಣ್ಣನವರ ವಚನದಂತೆ ಸಂಘವು ನಡೆದುಕೊಂಡು ಬಂದಿದೆ ಎಂದು ಶ್ಲಾಘಿಸಿ ಪದಾಧಿಕಾರಿಗಳನ್ನು ಅಭಿನಂದಿಸಿದರು. ಇದೇ ವೇಳೆ ಮಕ್ಕಳ ಪ್ರತಿಭೆಯನ್ನು ಹೊರತಂದು, ಈ ಪ್ರತಿಭೆಗಳನ್ನು ಪೂಜ್ಯರಿಂದ ಆಶೀರ್ವಾದ ಕೊಡಿಸಿದರು. ಬಸವ ಶ್ರೀ ಶರಣರನ್ನು ಗುರುತಿಸಿ ಗೌರವಿಸಿದರು.

ಸುಂದರವಾಗಿ ಮೂಡಿ ಬಂದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಸಯ್ಯ ಬಿ ಕಡೂರ, ಪದಾಧಿಕಾರಿಗಳಾದ ಮಂಜುನಾಥ್ ಬಿ ಆರ್, ಬಸವರಾಜ್, ಲಿಂಗರಾಜ್ ಬಿ ಎಸ್, ಕಿರಣ್ ಕೆ.ಕೆ, ಮಂಜುನಾಥ ಅಂಗಡಿ, ಶ್ರೀಮತಿ ಲಲಿತ ಜಿಪಿ, ಶ್ರೀಮತಿ ಶಶಿಕಲಾ ಅಂಗಡಿ, ದ್ಯಾಮಪ್ಪ ಬಿ.ಜೆ, ಮೋಹನ್ ಎಚ್ ಪವನ್ ಕುಮಾರ್ ಕೆ ಜೆ ಮುಂತಾದವರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಬಸವಶ್ರೀ ಶರಣರು ನೆರೆದಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ರೈಲು ಗಾಲಿ ಕಾರ್ಖಾನೆಯ ಮುಖ್ಯ ಬಂಡಾರ ಅಧೀಕ್ಷಕರು ಆದ ಶ್ರೀ ಸಿದ್ದಲಿಂಗ ಮೂರ್ತಿಯವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ನಂತರ ಸರ್ವರಿಗೂ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಉಮೇಶ್, ಯಲಹಂಕ

Leave a Reply

Your email address will not be published. Required fields are marked *