
ಬೆಂಗಳೂರು ಸುದ್ದಿ. ದಿನಾಂಕ. 29. 06. 2025 ರಂದು ಬೆಂಗಳೂರು: ನಗರದ ಮಲ್ಲೇಶ್ವರಂನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಡಿ.ಮಂಜುನಾಥ ರವರನ್ನು ರಾಜ್ಯಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಡಿ.ಎಂ.ರಾಠೋಡ್ ರವರ ನಿವೃತ್ತಿಯಿಂದ ಈ ಹುದ್ದೆಯು ತೆರವಾಗಿತ್ತು. ಚಿತ್ರದುರ್ಗ ಜಿಲ್ಲೆಯವರಾದ ಇವರು ಮಂಜುನಾಥ ಹಲವಾರು ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ ಅನುಭವ ಇದೆ.ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಮಮತಾ ಡಿ.ಕೆ, ಕಾರ್ಯದರ್ಶಿಯಾಗಿ ಮಾಲತೇಶ್ ಚಲವಾದಿ, ಖಜಾಂಚಿಯಾಗಿ ಅವಿನಾಶ್ ಹಿರೇಮಠ್ ರವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಠೋಡ್,ಅವಿನಾಶ್ ಮಾಲತೇಶ್ ಚಲವಾದಿ ಓಂಕಾರಪ್ಪ,ಮಮತಾ.ಡಿ.ಕೆ,ಎಂ ಕೆ ಚೌಹಾಣ್,ಸಿದ್ದೇಗೌಡ,ಮಂಜುನಾಥ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಬಹಳ ಸಂಭ್ರಮದಿಂದ ನಡೆಯಿತು
