











ಬಿಜೆಪಿ ಮುಖಂಡರು, ಸ್ನೇಹಿತರು, ಹಿತೈಷಿಗಳಿಂದ ಶುಭ ಹಾರೈಕೆ :
ಯಲಹಂಕ : ಯಲಹಂಕ ಕ್ಷೇತ್ರದ ಹಿರಿಯ ಬಿಜೆಪಿ ಮುಖಂಡರು, ಬೆಂಗಳೂರು ಡೈರಿ ಮತ್ತು ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದಿಬ್ಬೂರು ಜಯಣ್ಣ ಮತ್ತು ಅವರ ಸಹೋದರ, ರಾಷ್ಟ್ರೀಯ ಕಿಸಾನ್ ಸಂಘಟನೆಯ ರಾಜ್ಯಾಧ್ಯಕ್ಷ ದಿಬ್ಬೂರು ವಿಜಯಣ್ಣ ಅವರ ಜನ್ಮದಿನದ ಪ್ರಯುಕ್ತ ಅವರ ಸ್ವಗ್ರಾಮ ದಿಬ್ಬೂರು ಗ್ರಾಮದ ನಿವಾಸದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಅರ್ ವಿಶ್ವನಾಥ್, ಅರ್ ಎಸ್ ಎಸ್ ಎನ್ ಬ್ಯಾಂಕ್ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್, ಬಿಜೆಪಿ ಯುವ ಮುಖಂಡ, ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕರಾದ ಅಲೋಕ್ ವಿಶ್ವನಾಥ್ ಅವರು ದಿಬ್ಬೂರು ಜಯಣ್ಣ ಮತ್ತು ವಿಜಯಣ್ಣ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಎಸ್ ಎನ್ ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ಯಲಹಂಕ ಗ್ರಾ. ಮಂಡಲ ಬಿಜೆಪಿ ಅಧ್ಯಕ್ಷ ಎಂ.ಜಿ.ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಬಿಜೆಪಿ ಮುಖಂಡರಾದ ಟಿ.ಮುನಿರೆಡ್ಡಿ, ಎಸ್ ಜಿ ನರಸಿಂಹಮೂರ್ತಿ(ಎಸ್.ಟಿ.ಡಿ. ಮೂರ್ತಿ), ಮಾವಳಿಪುರ ಟಿ.ರಮೇಶ್, ಮಾದಪ್ಪನಹಳ್ಳಿ ಕೃಷ್ಣಮೂರ್ತಿ, ಕಾಕೋಳು ಮುನೇಶ್, ತಿಮ್ಮರಾಯಿಗೌಡ, ಕೊಲುವರಾಯನಹಳ್ಳಿ ಮಂಜುನಾಥ್, ಕಿರಣ್, ಇಟಗಲ್ ಪುರ ಮೋಹನ್, ಶಿವಾನಂದ್, ಎಸ್ ಜಿ.ಪ್ರಶಾಂತ್ ರೆಡ್ಡಿ, ಡಿ.ಹೇಮಂತ್ ಕುಮಾರ್, ಮುನಿದಾಸಪ್ಪ, ಸಂಜೀವಪ್ಪ, ಮುನಿರಾಜು, ವಸಂತ್ ಅರಕೆರೆ, ರಾಜೇಂದ್ರ ಬೈರಾಪುರ, ಯಲಹಂಕ ಜಯಣ್ಣ, ಅಶೋಕ್, ಬಾಬುರೆಡ್ಡಿ, ಮುನೇಗೌಡ, ಲಕ್ಷ್ಮೀಪತಿಗೌಡ, ಅರವಿಂದ್, ಹರ್ಷ, ಶ್ರೀಜಿತ್, ಸಾದೇನಹಳ್ಳಿ ಪ್ರಕಾಶ್ ಗೌಡ, ನವೀನ್(ತಂಬಿ), ನಾಗೇಶ್, ಮುನಿಕೃಷ್ಣ, ರಾಜಶೇಖರ್, ಬ್ಯಾಲಕೆರೆ ವೆಂಕಟೇಶ್, ಕಾವೇರಪ್ಪ, ಸೇರಿದಂತೆ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮುಖಂಡರು ಮತ್ತು ಜಯಣ್ಣ ಅವರ ಅಭಿಮಾನಿಗಳಿದ್ದರು.
