ಬಡವರಿಗೆ ಉಚಿತ ನಿವೇಶನ ಕೋರಿ ದ.ಸಂ.ಸ. ಮನವಿ :

ಯಲಹಂಕ : ‘ಮುಖ್ಯಮಂತ್ರಿಗಳ ಉಚಿತ ವಸತಿ ಯೋಜನೆ’ ಅಡಿಯಲ್ಲಿ ಯಲಹಂಕ ಕ್ಷೇತ್ರದಲ್ಲಿ ನೆಲೆಸಿರುವ ಬಡವರಿಗೆ ಉಚಿತ ನಿವೇಶನ ನೀಡುವಂತೆ ಕೋರಿ ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ ರಾಜ್ಯ ಸಂಯೋಜಕ ಡಾ.ಆರ್.ಅಶ್ವಥ್ ಅಂತ್ಯಜ ಅವರ ನೇತೃತ್ವದಲ್ಲಿ ಸಂಘಟನೆಯ ನೂರಾರು ಕಾರ್ಯಕರ್ತರು ಶಾಸಕ ಎಸ್ ಆರ್ ವಿಶ್ವನಾಥ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಇದೇ ವೇಳೆ ಶಾಸಕರಿಗೆ ಮಾಹಿತಿ ನೀಡಿ ಮಾತನಾಡಿ ಡಾ.ಅಶ್ವಥ್ ಅಂತ್ಯಜ ಅವರು ‘ಯಲಹಂಕ ಕ್ಷೇತ್ರ ವ್ಯಾಪ್ತಿಯ ವೀರಸಾಗರ ಗ್ರಾಮದ ಸರ್ವೆ.ನಂ.40ರಲ್ಲಿನ 12 ಎಕರೆ ಜಾಗವನ್ನು ಆಶ್ರಯ ಸಮಿತಿಗೆ ನೀಡಿ, ಸದರಿ ಜಾಗದಲ್ಲಿ ದ.ಸಂ.ಸ.ಸಲ್ಲಿಸಿದ್ದ 307 ನಿವೇಶನ ರಹಿತ ಸ್ಥಳೀಯ ಬಡವರಿಗೆ ನಿವೇಶನ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ, ವಸತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿತ್ತ, ಆದರೆ ಯಲಹಂಕ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ವಂಚಸಿದ್ದು, ಬಡವರಿಗೆ ನಿವೇಶನ ನೀಡುವಲ್ಲಿ ವಿಫಲರಾಗಿದ್ದಾರೆ ಈ ಹಿನ್ನೆಲೆಯಲ್ಲಿ‌ ಮುಖ್ಯಮಂತ್ರಿಗಳ ವಸತಿ‌ ಯೋಜನೆ ಅಡಿಯಲ್ಲಿ ‌ಬಡವರಿಗೆ ನಡುವೆ ನಿವೇಶನ ನೀಡುವಂತೆ ಕೋರಿ ಇಂದು ಮನವಿ ಸಲ್ಲಿಸಿದ್ದೇವೆ ಎಂದರು.

ಮನವಿ ಸ್ವೀಕರಿಸಿದ ಶಾಸಕರು‌‌‌ ಸಂಘಟನೆಯ ಮನವಿಯನ್ನು‌ ಪರಿಶೀಲಿಸಿ ಯಲಹಂಕ ಕ್ಷೇತ್ರದಲ್ಲಿ ಜಾಗದ ಲಭ್ಯತೆಯನ್ನು ಪರಿಶೀಲಿಸಿ ‌5 ಎಕರೆ ಜಾಗ ನೀಡುವ ಭರವಸೆ ನೀಡಿದರು.

ಇದೇ‌ ಸಂದರ್ಭದಲ್ಲಿ ಕರ್ನಾಟಕ ದ.ಸಂ.ಸ.ರಾಜ್ಯ ಉಪ ಸಂಯೋಜಕ ಅಬ್ಬಿಗೆರೆ ರಾಜಣ್ಣ, ಜಿಲ್ಲಾ ಸಂಯೋಜಕ ಕಾಡನೂರು ಲಕ್ಕಪ್ಪ, ರಾಜ್ಯ ಸಮಿತಿ‌ ಸದಸ್ಯರಾದ ಗಂಗನಬೀಡು ರವಿಕುಮಾರ್, ಅಟ್ಟೂರು ವಿಶ್ವ, ವೆಂಕಟಾಲ ಮುನಿರಾಜು, ಅ.ನಾ.ಪ್ರಸಾದ್, ಕನ್ಯಾಕುಮಾರಿ, ಗಿರಿಜಮ್ಮ, ನೇತ್ರಾವತಿ, ಪ್ರಕಾಶ್, ನಾಗರಾಜ್, ಕೃಷ್ಣಪ್ಪ, ಉಮೇಶ್, ಮಂಜುನಾಥ್ ನಾರಾಯಣಪ್ಪ, ವಾರಿಯರ್ ಸೇರಿದಂತೆ ಇನ್ನಿತರರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout 

Yelahanka Bangalore

9845085793

7349337989

Leave a Reply

Your email address will not be published. Required fields are marked *