ಬಿಬಿಎಂಪಿ ಮತ್ತಿಕೆರೆ ಪದವಿ ಪೂರ್ವ ಕಾಲೇಜಿನಲ್ಲಿ ವಿಐಟಿಯು ಮತ್ತು ಇಸ್ರೋ ವತಿಯಿಂದ “ಸಂಚಾರಿ ವಿಜ್ಞಾನ ಪ್ರದರ್ಶನ”:

ಸ್ವಾತಂತ್ರೋತ್ಸವದ ಅಂಗವಾಗಿ ಪಾಲಿಕೆಯ ಮತ್ತಿಕೆರೆ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯ(VITU) ಹಾಗೂ ಬಾಹ್ಯಾಕಾಶ ಇಲಾಖೆ(ISRO) ವತಿಯಿಂದ ಏರ್ಪಡಿಸಿದ್ದ “ಸಂಚಾರಿ ವಿಜ್ಞಾನ ಪ್ರದರ್ಶನ”ಕ್ಕೆ ಪ್ರಾಂಶುಪಾಲರಾದ ಜಿ.ಎನ್ ಆನಂದ್ ರವರು ಚಾಲನೆ ನೀಡಿದರು.

ಪಾಲಿಕೆ ಮತ್ತಿಕೆರೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು 2 ಸಂಚಾರಿ ವಿಜ್ಞಾನ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭೇಟಿ ನೀಡಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ನಾಳೆಯೂ ವಿಜ್ಞಾನ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ISRO ಸಂಸ್ಥೆಯ ಸಾಧನೆಯಾದ ಆರ್ಯಭಟದಿಂದ ಚಂದ್ರಯಾನ -2 ರವರೆಗಿನ ಎಲ್ಲಾ ROCKET, SATELLITE ಮಾದರಿಗಳನ್ನು ಸಂಚಾರಿ ಬಸ್ಸಿನಲ್ಲಿ ಇರಿಸಲಾಗಿದೆ. ISRO ಭಾರತದ ಹೆಮ್ಮೆ, ಇದರ ಸಾಧನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದೇ ಇದರ ಮುಖ್ಯ ಉದ್ದೇಶವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಜ್ಞಾನವನ್ನು ಹೆಚ್ಚಿಸಲಿದೆ.

ಎಲ್ಲಾ ವಿದ್ಯಾರ್ಥಿಗಳು ISRO ಮತ್ತು VITMಗೆ ಹೋಗಲು ಸಾಧ್ಯವಾಗುವುದಿಲ್ಲ ಹಾಗಾಗಿ ವಿದ್ಯಾರ್ಥಿಗಳಿದ್ದಲ್ಲಿಗೆ ಸಂಚಾರಿ ವಾಹನದ ಮೂಲಕ ವಿಜ್ಞಾನ ಜ್ಞಾನವನ್ನು ಮೂಡಿಸುವುದು ಇದರ ಉದ್ದೇಶವಾಗಿದೆ. VITM ಸಂಸ್ಥೆಯ ಸಂಚಾರಿ ವಾಹನದಲ್ಲಿ ವಿದ್ಯುತ್‌ ಮತ್ತು ಕಾಂತತ್ವದ ಕುರಿತಾದ ಸುಮಾರು 20 ವರ್ಕಿಂಗ್ ಮಾಡಲ್ ಗಳನ್ನು ಇಡಲಾಗಿದೆ.

ISRO ಸಂಸ್ಥೆಯಿಂದ ವಿಜ್ಞಾನಿಯಾದ ಹೆಚ್ ಎಲ್ ಶ್ರೀನಿವಾಸ್ ಹಾಗೂ VITM ಸಂಸ್ಥೆಯ ಶಿಕ್ಷಣಾಧಿಕಾರಿಯಾದ ಪ್ರಶಾಂತ್ ಕುಮಾರ್ ಬಿಸ್ವಾಲ್‌ ವಿಜ್ಞಾನ ಪ್ರದರ್ಶನದ ಮೇಲುಸ್ತುವಾರಿಯನ್ನು ವಹಿಸಿದ್ದರು.

ಹೆಚ್ಚಿನ ಮಾಹಿತಿಗಾಗಿ:
ಶ್ರೀ ಆನಂದ್, ಪ್ರಾಂಶುಪಾಲರು, ಮತ್ತಿಕೆರೆ ಕಾಲೇಜು, ಬೆಂಗಳೂರು.
ಮೊ.ಸಂ: +91 94486 06513

ಮಾಧ್ಯಮ ಮಾಹಿತಿ:

Leave a Reply

Your email address will not be published. Required fields are marked *