ಬೆಟ್ಟಹಲಸೂರು ವೀರಶೈವ ಲಿಂಗಾಯತ ಸಂಘದಿಂದ ವಿಜೃಂಭಣೆಯ ಬಸವ ಜಯಂತಿ :
ಬ್ಯಾಟರಾಯನಪುರ : ಕ್ಷೇತ್ರದ ಬೆಟ್ಟಹಲಸೂರು ಗ್ರಾಮದ ವೀರಶೈವ ಲಿಂಗಾಯತ ಸಂಘದ ವತಿಯಿಂದ ಬಸವ ಜಯಂತಿ ಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬಸವ ಜಯಂತಿಯ ಅಂಗವಾಗಿ ಗ್ರಾಮದ ಶ್ರೀಮಲ್ಲೇಶ್ವರಸ್ವಾಮಿ ಮತ್ತು ಬಸವಣ್ಣ ದೇವರ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ, ಮಧ್ಯಾಹ್ನ ಫಲಾಹಾರ ವಿತರಣೆ, ತೀರ್ಥ ಪ್ರಸಾದ ವಿನಿಯೋಗ ಮುಂತಾದ ಸೇವಾ ಕಾರ್ಯಗಳು ಜರುಗಿದವು.
ಸಂಜೆ ವೀರಗಾಸೆ, ಕೀಲು ಕುದುರೆ, ಬೊಂಬೆಗಳ ಕುಣಿತ ಮುಂತಾದ ವಿವಿಧ ಜಾನಪದ ಕಲಾತಂಡಗಳ ಕಲಾ ಪ್ರದರ್ಶನದ ನಡುವೆ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಮಲ್ಲಿಗೆ ಹೂವಿನ ಪಲ್ಲಕ್ಕಿಯಲ್ಲಿ ಅಶ್ವಾರೂಢ ಬಸವೇಶ್ವರರ ಪುತ್ಥಳಿಯ ಬೃಹತ್ ಮೆರವಣಿಗೆ, ಅನ್ನ ಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ವಿಜೃಂಭಣೆಯ ಬಸವ ಜಯಂತಿಯ ಈ ಉತ್ಸವದಲ್ಲಿ ಬೆಟ್ಟಹಲಸೂರು ಗ್ರಾಪಂ ಅಧ್ಯಕ್ಷ ಹೇಮಾವತಿ ನಾಗರಾಜ್ ಬಾಬು, ಬೆಟ್ಟಹಲಸೂರು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಎಲ್‌.ಪಿ. ಉಮೇಶ್, ಗೌರವಾಧ್ಯಕ್ಷರಾದ ಬಿ.ನಾಗರಾಜ್ ಬಾಬು, ಬಿ.ಎಂ.ಉಮೇಶ್, ಉಪಾಧ್ಯಕ್ಷರು, ಅ.ಭಾ.ವೀ.ಮಹಾಸಭಾ ಬ್ಯಾಟರಾಯನಪುರ ಕ್ಷೇತ್ರ ಘಟಕದ ಅಧ್ಯಕ್ಷ ಬಿ.ಎಸ್. ಅನಿಲ್ ಕುಮಾರ್, ಮಾಜಿ ಅಧ್ಯಕ್ಷ ಬಿ.ವಿ.ನಾಗರಾಜ್, ವೀರಶೈವ ಸಮುದಾಯದ ಮುಖಂಡರಾದ ಶರಣಬಸಪ್ಪ ಗಡಗಿ, ಬಿ.ಬಸವರಾಜು, ಶಶಿಧರ್ ಗಡಗಿ, ಮಹಿಳಾ ಮುಖಂಡರಾದ ರಾಧಿಕಾ ಉಮೇಶ್, ಗಿರಿಜಾ ಉಮೇಶ್, ಡಾ.ಹೇಮಲತಾ, ಅನಿತಾ ಮಂಜುನಾಥ್, ಅಂಬಿಕಾ ಸತೀಶ್, ಯುವ ಮುಖಂಡರಾದ ವೈಭವ್, ಮಲ್ಲೇಶ್, ಗಂಗಾಧರ್, ನಂದೀಶ್, ಚರಣ್ ರಾಜ್ ಸೇರಿದಂತೆ ಗ್ರಾಮಸ್ಥರು ಹಾಗೂ ಶ್ರೀಮಲ್ಲೇಶ್ವರಸ್ವಾಮಿ, ಶ್ರೀ ಬಸವಣ್ಣ ದೇವರ ಅಪಾರ ಸಂಖ್ಯೆಯ ಭಕ್ತರಿದ್ದರು.

Leave a Reply

Your email address will not be published. Required fields are marked *