
ಫಾರ್ಮುಲಾ 1 ನ್ಯೂಟ್ರಿಷನಲ್ ಶೇಕ್ ಸರಣಿಯಲ್ಲಿ ಡೇಟ್ಸ್ ಕ್ಯಾರಮೆಲ್ ಫ್ಲೇವರ್ ಬಿಡುಗಡೆ ಮಾಡಿದ ಹರ್ಬಲೈಫ್ ಇಂಡಿಯಾ
ಬೆಂಗಳೂರು, 07 ಜುಲೈ 2026 – ದೇಶದ ಪ್ರಮುಖ ಆರೋಗ್ಯ ಮತ್ತು ವೆಲ್ನೆಸ್ ಕಂಪನಿಯಾದ ಹರ್ಬಲೈಫ್ ಇಂಡಿಯಾ, ತನ್ನ ಜನಪ್ರಿಯ ಫಾರ್ಮುಲಾ 1 ನ್ಯೂಟ್ರಿಷನಲ್ ಶೇಕ್ ಮಿಕ್ಸ್ ಸರಣಿಯಲ್ಲಿ ಹೊಸ ಡೇಟ್ಸ್ ಕ್ಯಾರಮೆಲ್ ಫ್ಲೇವರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಕ್ಯಾರಮೆಲ್ ಮತ್ತು ಖರ್ಜೂರದ ಅದ್ಭುತ ರುಚಿಯ ಮಿಶ್ರಣ ಹೊಂದಿರುವ ಈ ಹೊಸ ಶೇಕ್ ನಲ್ಲಿ, ಗಟ್ಟಿಗೊಳಿಸಿದ ಖರ್ಜೂರದ ರಸದಿಂದ ತಯಾರಿಸಿದ ಕರುಂ ಕುರುಂ ತುಣುಕುಗಳನ್ನು (ಡೇಟ್ ಕ್ರಂಚಸ್) ಬಳಸಲಾಗಿದೆ. ಇದು ಗ್ರಾಹಕರಿಗೆ ನಾಲಿಗೆಗೆ ಸವಿರುಚಿ ನೀಡುವುದರ ಜೊತೆಗೆ, ದೈನಂದಿನ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶದ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗಲಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಹಕರು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ರುಚಿ, ಸುಲಭ ಬಳಕೆ ಹಾಗೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ಫ್ಲೇವರ್ ಅನ್ನು ಸಿದ್ಧಪಡಿಸಲಾಗಿದೆ.
ಹರ್ಬಲೈಫ್ ಕಂಪನಿಯು ಈಗಾಗಲೇ ಮಾರುಕಟ್ಟೆಯಲ್ಲಿ ವೆನಿಲ್ಲಾ, ಡಚ್ ಚಾಕೊಲೇಟ್, ಮ್ಯಾಂಗೋ, ಕುಲ್ಫಿ ಮತ್ತು ರೋಸ್ ಖೀರ್ ಫ್ಲೇವರ್ ಗಳ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿದೆ. ಇದೀಗ ಬಿಡುಗಡೆಯಾಗಿರುವ ಡೇಟ್ಸ್ ಕ್ಯಾರಮೆಲ್ ಫ್ಲೇವರ್, ಗ್ರಾಹಕರು ತಾವು ಈಗಾಗಲೇ ನಂಬಿರುವ ಬ್ರ್ಯಾಂಡ್ ನಲ್ಲಿಯೇ ಮತ್ತೊಂದು ಹೊಸ ರುಚಿಯನ್ನು ಆಯ್ಕೆ ಮಾಡಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ.
ಉತ್ಪನ್ನ ಮತ್ತು ಥೀಮ್ ಆಧಾರಿತ ವೀಡಿಯೋಗಳ ಲಿಂಕ್ ಗಳು:
ಥೀಮ್ ಫಿಲ್ಮ್: https://youtu.be/zwBcXgT3Nj4?si=ApUAK2pJPKu-3GZ0
ಉತ್ಪನ್ನದ ಫಿಲ್ಮ್: https://youtu.be/X9txdkXZUSo?si=aFJ5ggWn0s8cVVy7
ಹೊಸ ಉತ್ಪನ್ನದ ಬಿಡುಗಡೆ ಕುರಿತು ಮಾತನಾಡಿದ ಹರ್ಬಲೈಫ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಅವರು, “ಇತ್ತೀಚಿನ ದಿನಗಳಲ್ಲಿ ಜನರ ಆಲೋಚನಾ ಶೈಲಿಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ದೈನಂದಿನ ಜೀವನಶೈಲಿಗೆ ಸಹಜವಾಗಿ ಹೊಂದುವ ಹಾಗೂ ಯಾವುದೇ ರಾಜಿ ಇಲ್ಲದೆ ದೇಹಕ್ಕೆ ಪೌಷ್ಟಿಕಾಂಶ ನೀಡುವ ಆಹಾರ ಉತ್ಪನ್ನಗಳನ್ನು ಜನರು ಬಯಸುತ್ತಿದ್ದಾರೆ. ಸುಲಭವಾಗಿ ಬಳಸಬಹುದಾದ, ಆನಂದಿಸಬಹುದಾದ ಮತ್ತು ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುವ ಸರಳ ಉತ್ಪನ್ನಗಳ ನಿರೀಕ್ಷೆ ಗ್ರಾಹಕರದ್ದಾಗಿದೆ. ಗ್ರಾಹಕರ ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ನಮ್ಮ ಉತ್ಪನ್ನಗಳಲ್ಲಿ ಹೊಸತನ ತರುವುದು ಹಾಗೂ ಫಾರ್ಮುಲಾ 1 ಸರಣಿಯ ಸಮತೋಲಿತ ಪೌಷ್ಟಿಕಾಂಶದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ಡೇಟ್ಸ್ ಕ್ಯಾರಮೆಲ್ ಫ್ಲೇವರ್ ಪರಿಚಯಿಸಲಾಗಿದೆ. ಇದು ಜನರು ತಮ್ಮ ದೈನಂದಿನ ಆರೋಗ್ಯದ ದಿನಚರಿಯನ್ನು ನಿಯಮಿತವಾಗಿ ಮುಂದುವರಿಸಲು ನೆರವಾಗಲಿದೆ. ಭಾರತೀಯ ಗ್ರಾಹಕರಿಗೆ ಸೂಕ್ತವಾದ ಹಾಗೂ ಅವರು ಆರೋಗ್ಯಕರ ಮತ್ತು ಸಕ್ರಿಯ ಜೀವನ ನಡೆಸಲು ಪೂರಕವಾದ ವೈಜ್ಞಾನಿಕ ಆಧಾರಿತ ಉತ್ಪನ್ನಗಳನ್ನು ಒದಗಿಸುವುದೇ ಹರ್ಬಲೈಫ್‌ನ ಪ್ರಮುಖ ಗುರಿಯಾಗಿದೆ” ಎಂದು ಅವರು ತಿಳಿಸಿದರು.
ನೂತನ ಫಾರ್ಮುಲಾ 1 ನ್ಯೂಟ್ರಿಷನಲ್ ಶೇಕ್ ಮಿಕ್ಸ್ – ಡೇಟ್ಸ್ ಕ್ಯಾರಮೆಲ್, ದೇಹಕ್ಕೆ ಅಗತ್ಯವಿರುವ ಪ್ರೊಟೀನ್, ಕಾರ್ಬೋಹೈಡ್ರೇಟ್ಸ್, ವಿಟಮಿನ್ ಮತ್ತು ಮಿನರಲ್ಸ್ ಸೇರಿದಂತೆ ಪ್ರಮುಖ ಪೌಷ್ಟಿಕಾಂಶಗಳ ಸಮತೋಲಿತ ಮಿಶ್ರಣವನ್ನು ಹೊಂದಿದೆ. ಇದು ಗ್ರಾಹಕರ ದೈನಂದಿನ ಪೌಷ್ಟಿಕಾಂಶದ ಅಗತ್ಯತೆಗಳನ್ನು ಪೂರೈಸಲು ಮಾರುಕಟ್ಟೆಯಲ್ಲಿ ನೆರವಾಗಲಿದೆ.
ಉತ್ಪನ್ನದ ಲೇಬಲ್ ನಲ್ಲಿ ಸೂಚಿಸಲಾದ ಪ್ರಮಾಣದಂತೆ ಸೇವಿಸಿದರೆ, ಇದರ ಪ್ರತಿ ಸರ್ವಿಂಗ್ ದೇಹಕ್ಕೆ 9 ಗ್ರಾಂ ಉತ್ತಮ ಗುಣಮಟ್ಟದ ಪ್ರೊಟೀನ್, 3 ಗ್ರಾಂ ಫೈಬರ್ ಹಾಗೂ 19 ಅಗತ್ಯ ವಿಟಮಿನ್ ಗಳು ಮತ್ತು ಮಿನರಲ್ ಗಳನ್ನು ಒದಗಿಸುತ್ತದೆ. ಹೀಗಾಗಿ ಇದನ್ನು ಸಮತೋಲಿತ ಆಹಾರದ ಭಾಗವಾಗಿ ಮತ್ತು ಪರ್ಯಾಯ ಆಹಾರವಾಗಿಯೂ ಬಳಸಬಹುದಾಗಿದೆ. ಇದರೊಂದಿಗೆ, ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವಾಗಿದ್ದು, ದಿನವಿಡೀ ದೇಹದಲ್ಲಿ ನಿರಂತರವಾಗಿ ಎನರ್ಜಿ ಹೊಂದಲು ನೆರವಾಗುತ್ತದೆ.
ಬಳಕೆದಾರರ ಸುಲಭ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಸಿದ್ಧಪಡಿಸಲಾಗಿದ್ದು, ಅತ್ಯಂತ ವೇಗವಾಗಿ ಮತ್ತು ತಮಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಳ್ಳಬಹುದು. ಹೀಗಾಗಿ ನಿರಂತರ ಕೆಲಸದ ಒತ್ತಡ ಹಾಗೂ ಸಕ್ರಿಯ ಜೀವನಶೈಲಿ ಹೊಂದಿರುವ ಜನರಿಗೆ ಇದು ಹೆಚ್ಚು ಸೂಕ್ತವಾಗಿದೆ. ಕಡಿಮೆ ಕ್ಯಾಲೊರಿ ಹೊಂದಿರುವ ಆಹಾರ ಪದ್ಧತಿ ಹಾಗೂ ನಿಯಮಿತ ದೈಹಿಕ ವ್ಯಾಯಾಮದ ಜೊತೆಗೆ, ದಿನದ ಒಂದು ಅಥವಾ ಎರಡು ಹೊತ್ತಿನ ಊಟಕ್ಕೆ ಪರ್ಯಾಯವಾಗಿ ಈ ಪೌಷ್ಟಿಕಾಂಶದ ಶೇಕ್ ಅನ್ನು ಸೇವಿಸಬಹುದಾಗಿದೆ.
ಹೊಸ ಹೊಸ ಫ್ಲೇವರ್ ಗಳ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸುತ್ತಿರುವ ಫಾರ್ಮುಲಾ 1 ನ್ಯೂಟ್ರಿಷನಲ್ ಶೇಕ್ ಮಿಕ್ಸ್, ಗ್ರಾಹಕರು ತಮ್ಮ ದೈನಂದಿನ ಪೌಷ್ಟಿಕಾಂಶದ ದಿನಚರಿಯನ್ನು ನಿಯಮಿತವಾಗಿ ಕಾಯ್ದುಕೊಳ್ಳುವುದರ ಜೊತೆಗೆ ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ರುಚಿಗಳನ್ನು ನೀಡುತ್ತಾ ಬಂದಿದೆ.
