ಸೇಂಟ್ ಪೌಲ್ ಮೇತೋಡಿಸ್ಟ್ ಚರ್ಚ್ ಶಹಗoಜ ಕಮಿಟಿ ವತಿಯಿಂದ ಸಚಿವರಿಗೆ ಸನ್ಮಾನ ಕಾರ್ಯಕ್ರಮ,
ಬೀದರ್ ನಗರದ ಶಹಾಗoಜ ಸೇಂಟ್ ಪೌಲ್ ಮೇತೋಡಿಸ್ಟ್ ಚರ್ಚ್ ಕಮಿಟಿ ಹಾಗೂ ಸಭೆಯ ಸದಸ್ಯರಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದರು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಈಶ್ವರ್ ಖಂಡ್ರೆ ಸನ್ಮಾನ್ಯ ಅರಣ್ಯ ಮತ್ತು ಜೈವಿಕ ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ, ಮತ್ತು ರಹೀಂ ಖಾನ್ ಸನ್ಮಾನ್ಯ ಪೌರಾಡಳಿತ ಹಜ್ ಖಾತೆ ಸಚಿವರು ಕರ್ನಾಟಕ ಸರ್ಕಾರ. ಮಾನ್ಯ ಈಶ್ವರ ಖಂಡ್ರೆ ಅವರಿಗೆ ಕಮಿಟಿಯ ಅಧ್ಯಕ್ಷರಾದ ಕೆ ರಾಮದಾಸ್ ಹಾಗೂ ಸದಸ್ಯರಾದ ರಮೇಶ್ ಧೋನೆ ಹಾಗೂ ಅಶೋಕ ದಾದಾನೂರ್ ಅವರು ಸನ್ಮಾನ ಮಾಡಿ ನೆನಪಿನ ಉಡುಗೊರೆ ನೀಡಿದರು, ಮತ್ತು ಇದೆ ವೇಳೆ ರಹೀಂ ಖಾನ್ ಅವರಿಗೆ ಕಮಿಟಿಯ ಕಾರ್ಯದರ್ಶಿಗಳಾದ ಶಲಹಾನ್ ಬಾoಗ್ಲೆ ಹಾಗೂ ಎಸ್ಪಿ ರಾಜಶೇಖರ್ ಮತ್ತು ಶ್ರೀಧರ್ ಬಾoಗ್ಲೆ ಅವರು ಸನ್ಮಾನ ಮಾಡಿ ನೇನಪಿನ ಉಡುಗೊರೆ ನೀಡಿದರು,ಇದೆ ಸಂಧರ್ಬದಲ್ಲಿ ಕಮಿಟಿಯ ಅಧ್ಯಕ್ಷರಾದ ಕೆ.ರಾಮದಾಸ ಅವರು ಮಾತನಾಡಿ ಸನ್ಮಾನ್ಯ ಈಶ್ವರ್ ಖಂಡ್ರೆಯವರು ಹಾಗೂ ರಹೀಂ ಖಾನ್ ಅವರು ನಮ್ಮ ಪ್ರತಿ ಕರೆಗು ಅವರು ಆಹ್ವಾನಿತರಾಗಿ ಸಮಯ ಕೊಟ್ಟ ಬಂದು ನಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ ನಮ್ಮ ಸಮಸ್ಯೆಗಳು ಏನೆ ಇರಲಿ ಅದನ್ನ ಸ್ವೀಕಾರ ಮಾಡಿ ಸಮಾಜದ ಕಾಳಜಿ ವಹಿಸಿ ಸಮುದಾಯ ಬೆಳವಣಿಗೆಗೆ ಎಳಿಗೆಗೆ,ನಾವು ಮನವಿ ತೆಗೆದುಕೊಂಡು ಹೋದಾಗ ಅವರು ಅದನ್ನ ಸ್ವಕರಿಸಿ ಸರ್ಕಾರದ ನಿಯಮ ಹಾಗೂ ಕಾನೂನು ರೀತಿಯಲ್ಲಿ ಸಮಸ್ಯೆನಾ ಬಗೆ ಹರಿಸಿಕೊಟ್ಟಿದರೆ ಇಂದು ಅವರಿಗೆ ದೊಡ್ಡ ಸ್ಥಾನ ಸಿಕ್ಕಿದೆ ನಮಗೆಲ್ಲ ಬಹಳ ಸಂತೋಷದವಾಗಿದೆ ಮತ್ತು ನಮ್ಮ ಓಣಿಯ ಹಾಗೂ ಕ್ರೈಸ್ತರ ಬೆಂಬಲ ಸದಾ ಅವರಿಗೆ ಇರುತ್ತದೆ. ಅವರಿಗೋಸ್ಕರ ದೇವರಲ್ಲಿ ನಮ್ಮ ಪ್ರಾರ್ಥನೆ ನಿರಂತರ ಇರುತ್ತದೆ ಮತ್ತು ಇದೆ ಸಂಧರ್ಬದಲ್ಲಿ ನಮ್ಮ ಓಣಿಯ ಪರವಾಗಿ ಹಾಗೂ ಕಮಿಟಿಯ ಸದಸ್ಯರು ಪರವಾಗಿ ಅವರಿಗೆ ಕೇಳಿಕೊಳ್ಳುವುದುದೆನಂದರೆ ಅವರ ಪ್ರೀತಿ ಕೂಡ ನಮ್ಮ ಮೇಲೆ ಹೀಗೆ ಇರಲಿ ಅಂತ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು, ಇದೆ ಸಂಧರ್ಬದಲ್ಲಿ ಮಾತನಾಡಿದ ಈಶ್ವರ್ ಖಂಡ್ರೆಯವರು ಕ್ರೈಸ್ತರು ಅಂದರೆ ಶಾಂತಿ ಪ್ರಿಯರು ಈ ದೇವಾಲಯದ ಒಳಗಡೆ ಬಂದರೆ ಬಹಳ ಸಮಾಧಾನ ಶಾಂತಿ ಸಿಗುತ್ತದೆ ಸಮಾಜದಲ್ಲಿ ಶಾಂತಿ ಎಲ್ಲರಿಗೂ ಬೇಕು ಆದರೆ ನಮ್ಮ ಜೀವನದಲ್ಲಿ ನಾವು ಕೆಲಸ ಕಾರ್ಯಗಳಲ್ಲಿ ಬಿಜಿ ಆದಾಗ ದೇವರಿಗೆ ಸಮಯ ಕೂಡುವುದು ಮರೆತು ಹೋಗುತ್ತವೆ ಅದರಿಂದ ನಮಗೆ ಅಶಾಂತಿ ಉಂಟಾಗೋದು ಗೊಂದಲಗಳು ಬರುವುದು, ನೀವೆಲ್ಲ ದೇವರಿಗೆ ಸಮಯ ಕೊಟ್ಟ ಕುಳುತಿದಿರ ಅಂದ್ರೆ ನನಗೆ ಬಹಳ ಸಂತೋಷವಾಯಿತು, ಈ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿ ನಮಗೆ ಸನ್ಮಾನ ಮಾಡಿದ ನಿಮಗೆ ತುಂಬಾ ಧನ್ಯವಾದಗಳು ತಿಳಿಸುತ್ತೇನೆ,ಮತ್ತು ನಿಮ್ಮ ಪ್ರಾರ್ಥನೆಯಲ್ಲಿ ನಮಗೂ ಕೂಡ ನೆನೆಸಿಕೊಳ್ಳಿ ಎಂದು ತಿಳಿಸಿದರು,ಮತ್ತು ಸಭೆಯ ಸಭಪಲಕರಾದ ಪುನೀತ್ ಅವರನ್ನು ಕಮಿಟಿವತಿಯಿoದ ಸನ್ಮಾನ ಮಾಡಿ, ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಹಜ್ ಖಾತೆಯ ಸಚಿವರಾದ ರಹೀಂ ಖಾನ್ ಮತ್ತು ಅವರ ಕುಟುಂಬದವರಿಗೆ ರಾಜ್ಯದ ನಾಯಕರಿಗೆ ದೇಶದ ಜನರಿಗೆ ಹಾಗೂ ಮಳೆ ಬೆಳೆ ರೈತರಿಗೆ ಹೀಗೆ ಎಲ್ಲರಿಗೋಸ್ಕರ ಪ್ರಾರ್ಥನೆ ಮಾಡಿ ಕಾರ್ಯಕ್ರಮನ ಮೊಂದೊರಿಸಿದರು, ಪೌರಾಡಳಿತ ಸಚಿವರಾದ ರಹೀಂ ಖಾನ್ ಅವರು ಮಾತನಾಡಿ ನಮ್ಮ ಸರ್ಕಾರ ಉನ್ನತ ರೀತಿಯಲ್ಲಿ ಕೆಲಸ ಮಾಡುತ್ತಾ ಇದೆ ನುಡದಂತೆ ನಡೆಯುತ್ತಾ ಇದ್ದೇವೆ ಇದು ನನ್ನ ಕ್ಷೇತ್ರದ ಜೈಯ ಇಲ್ಲ ನಿಮ್ಮಲ್ಲರ ಜಯ ಇದೆ ನೀವು ನನಗೆ ತಂದು ಕೊಟ್ಟ ಜಯ ಮುಂದೇನು ಕೂಡ ಉನ್ನತ ರೀತಿಯಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತೆ ಮತ್ತು ನೀವೆಲ್ಲ ನಮ್ಮ ಜೊತೆ ಇರಬೇಕು ನಮಗೆ ಸನ್ಮಾನ ಮಾಡಿ ಪ್ರಾರ್ಥನೆ ಮಾಡಿದಿರಿ ನಮ್ಮ ಪರವಾಗಿ ಈಶ್ವರ್ ಖಂಡ್ರೆ ಅವರ ಪರವಾಗಿ ಸೇಂಟ್ ಪೌಲ್ ಮೇತೋಡಿಸ್ಟ ಚರ್ಚ್ ಶಹಗಂಜ ಕಮಿಟಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಮತ್ತು ಇಲ್ಲಿ ಬಂದಿರುವಂತಹ ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು ಹೇಳುತ್ತೇನೆ ಎಂದು ತಿಳಿಸಿದರು, ಇದೆ ವೇಳೆ ಕಮಿಟಿಯ ಸಭೆಯವರು ಕ್ರೈಸ್ತ ಸಮುದಾಯ ಭವನ ನಿರ್ಮಾಣಕಾಗಿ ಭೂಮಿ ಕೊರತೆ ಇರುವುದರಿಂದ ಅದರ ಕುರಿತು ಮನವಿ ಮಾಡಿಕೊಂಡು ಸ್ವೀಕೃತಿ ಮನವಿ ಪತ್ರ ಸಲ್ಲಿಸಿದರು, ಕಾರ್ಯಕ್ರಮದಲ್ಲಿ ಸ್ಥಳೀಯ ನಗರ ಸಭೆ ಸದಸ್ಯರು ದ್ರೋಪತಿ ಕಾಳೇನೂರ್ ಹಾಗೂ ಎಮ್ ಡಿ ಗೌಸ್ ಅವರನ್ನು ಕಮಿಟಿವತಿಯಿಂದ ಸನ್ಮಾನ ಮಾಡಿ ಶುಭ ಕೋರಿದರು,ಕಾರ್ಯಕ್ರಮದಲ್ಲಿ ಕಮಿಟಿಯ ಸದಸ್ಯರು ಡೇವಿಡ್ ದನ್ನುರಕರ್,ಅಭಿ ಕಾಳೆ,ರವಿ ವಾಡೇಕರ್,ಹರೀಶ್ ಬಂಡಿ,ಕ್ರಿಷ್ಟ ಫಾರ್, ಬಾಬು ಭೂರೇಶ್, ಕಂಟೆಪ್ಪ,ಪ್ರದೀಪ್ ದಾದಾನೂರ್, ಅಭ್ರಹಮ್, ರಾಕೇಶ್, ದಾವಿದ, ಭಾರತ,ನವೀನ್, ಮೈಕೆಲ್,ಸದಸ್ಯರು ಹಾಗೂ ಸಭೆಯ ಹಿರಿಯರು ಮುಖ್ಯಸ್ಥರು,ಸಭೆಗೆ ಆಗಮಿಸಿದ ಅನೇಕರು ಉಪಸ್ಥಿರಿದ್ದರು.