ಕೋಲಾರ,ಸೆ.06.ನಗರ ಹೊರವಲಯದ
ಗುಪ್ತ ಇಂಟರ್ ರ್ನ್ಯಾಷನಲ್ ಶಾಲೆಯಲ್ಲಿ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ
ಹಬ್ಬವನ್ನು ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಶಾಲೆಗೆ ಭೇಟಿ ನೀಡಿದ್ದ ಮಾಧ್ಯಮದವರೊಂದಿಗೆ ಶಾಲೆಯ ಪ್ರಾಂಶುಪಾಲೆ ಜಯರವರು ಮಾತನಾಡಿ ಶಾಲೆ ಪ್ರಾರಂಭದಿಂದಲ್ಲೂ ಪ್ರತಿವರ್ಷ
ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮಾತೃವಂದನೆ ಕಾರ್ಯಕ್ರಮ ನಡೆಸುತ್ತಾ ಬರುತ್ತಿದ್ದು,ಈ ವರ್ಷ ಸಹ
ಮಕ್ಕಳು ಶ್ರೀ ಕೃಷ್ಣನ ಹಾಗೂ ರಾಧೆಯ ವೇಷ ಧರಿಸಿ ಸಂಭ್ರಮಿಸಿದರು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶ್ರೀ ಕೃಷ್ಣನ ಲೀಲೆಗಳ ಹಾಗೂ ಬಾಲ್ಯದ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರಲ್ಲದೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲಾಗಿತ್ತು.

ಮಕ್ಕಳು ನೃತ್ಯರೂಪಕದ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿದ್ದ ಗಣ್ಯರ ಗಮನ
ಸೆಳೆದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿಮಕ್ಕಳಿಗೆ ಸಿಹಿ ಹಂಚಲಾಯಿತು.

ಈ ಸಂಧರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಮೋಹನ್,ಅಧ್ಯಾಪಕರುಗಳಾದ ಹರ್ಷ,
ಚಂದ್ರಕಲಾ,ಜಯಶ್ರೀ, ಪಾರ್ವತಮ್ಮ,ದಿವ್ಯ,
ತಾಹಸೀನಂ,ಪ್ರಭಾವತಿ,ಕಮಲೇಶ್ವರಿ,ಶಾಲಿನಿ,ಸುಷ್ಮಿತ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *