ನನ್ನ ಶಿಕ್ಷಕರು

ಹೆಸರಿನಲ್ಲೇ ವಿದ್ಯೆ ಇರುವ ಇವರು
ನಮ್ಮೆಲ್ಲರ ತಾಯಿಯನ್ನು ಹೋಲುವರು
ಕಿರಿಯದಾದ ಮಾತಿನಲ್ಲಿ ಹಿರಿಯದಾದ ವಿಷಯ ತಿಳಿಸುವರು
ತಾಯಿ ಸರಸ್ವತಿ ನಮಗೆ ನೀಡಿದ ವರವೇ ಇವರು
ಮ್ಯಾಥ್ಸ್ ನಲ್ಲಿ ಬೆಸ್ಟು ಇವರ ಮಾತಂತೂ ತುಂಬಾ ಸ್ವೀಟು
ಇವರೇ ನಮ್ಮೆಲ್ಲರ ಪ್ರೀತಿಯ ಟೀಚರ್ ವಿದ್ಯಾ ಟೀಚರ್…

ಸಿಂಹದಂತೆ ಗರ್ಜಿಸುವ ಇವರು
ಮೃದು ಮನಸ್ಸುಳ್ಳವರು
ತಂದೆಯಂತೆ ಪ್ರೀತಿ ತೋರಿಸುವ ಇವರು
ವಿದ್ಯಾರ್ಥಿನಿಯರಿಗೆ ರಕ್ಷಾ ಕವಚದಂತಿರುವರು
ಇವರ ಸಂಸ್ಕಾರ ಇನ್ನೊಂದು ರೂಪ
ನಮ್ಮ ಶಾಲೆಯ ನಂದಾ ದೀಪ
ಇವರ ವರ್ಣಿಸಲು ದೊರೆಯುತ್ತಿಲ್ಲ ಪದವಗಳು
ಸರಳ ಮಾತಿನಲ್ಲಿ ಆಗದು ಇವರ ಬಣ್ಣಿಸಲು
ಇವರೇ ನಮ್ಮೆಲ್ಲರ ನೆಚ್ಚಿನ ಶಿಕ್ಷಕರು ಪೂಜಾರ ಸರ್…

ಇವರು ನೋಡಲು ಪುಲ್ ಸ್ಟ್ರಿಕ್ಟು
ಆದರೆ ಇವರ ಮಾತು ತುಂಬಾ ಸ್ವೀಟು
ಮ್ಯಾಥ್ಸ್ ನಲ್ಲಿ ಪಾಸ್ಟು ಮಾತಲ್ಲಿ ಕ್ಯೂಟು
ನೋಡೋಕೆ ಇವರು ಸಿಂಪಲ್
ಎಲ್ಲರಿಗೂ ಒಂದು ರೋಲ್ ಮಾಡಲ್
ಅವರೇ ನಮ್ಮ ನೆಚ್ಚಿನ ಶಿಕ್ಷಕಿ ಗೌರಿ ಟೀಚರ್…

ಎಲ್ಲರನ್ನೂ ನಗಿಸುವ ಇವರ ಗುಣ
ಎಲ್ಲರ ಮನ ಮುಟ್ಟುವಂತೆ ಬರೆಯುವರು ಕವನ
ಎಲ್ಲರಿಗೂ ಒಳ್ಳೆಯದನ್ನೆ ಬಯಸುವರು ಅನುದಿನ
ಕಠಿಣವಾದ ವಿಷಯದಲ್ಲೂ ಸುಲಭವಾಗಿ ತಿಳಿಸುವರು ವ್ಯಾಕರಣ
ಇವರ ನೆನಪಿನ ಶಕ್ತಿಗೊಂದು ನಮನ
ಇವರ ನಲ್ನುಡಿಯಿಂದ ಸೆಳೆಯುವರು ಎಲ್ಲರ ಗಮನ
ಇವರು ಪಾಠ ಹೇಳುವ ಶೈಲಿ ಎಷ್ಟೊಂದು ಚಂದ
ಇವರು ನಮ್ಮ ಕನ್ನಡದ ಕಂದ
ಇವರೇ ನಮ್ಮೆಲ್ಲರ ಪ್ರೀತಿಯ ಗುರುಗಳು ರಮೇಶ ಸರ್

ತಾಯಿ ಶಾರದೆಯ ಮತ್ತೊಂದು ರೂಪವೇ ಇವರು
ಪಾಠದ ಜೊತೆ ಸಂಗೀತವನ್ನೂ ಸಹ ಕಲಿಸುವರು
ಸರಿಗಮಪ ಎಂಬ ಪದಗಳಲ್ಲಿ ಇವರು
ಗಮನವಹಿಸಿ ಮಕ್ಕಳು ಪಾಠ ಕೇಳಬೇಕು ಎನ್ನುವರು
ಮಕ್ಕಳಲ್ಲಿ ಮಕ್ಕಳಾಗಿ ಬೆರೆಯುವರು
ಪಾಠಕ್ಕೂ ಸೈ ಆಟಕ್ಕೂ ಸೈ ಎನ್ನುವರು
ಇವರ ಕೋಪ ಬೇಸಿಗೆಯ ಬಿರು ಬಿಸಿಲು
ಇವರ ಸಿಹಿ ಮಾತು ಕೇಳಿ ಕರಗುವುದು ಆ ಮುಗಿಲು
ಇವರೇ ನಮ್ಮ ನೆಚ್ಚಿನ ಶಿಕ್ಷಕಿ ಸಂಗೀತಾ ಟೀಚರ್

ಎಲ್ಲರಲ್ಲೂ ಪ್ರೇರಣೆ ತುಂಬುವ ಇವರ ಮಾತುಗಳು
ಇವರ ನುಡಿ ಕೇಳಲು ಹಾತೊರೆಯುವವು ಎಲ್ಲರ ಕಿವಿಗಳು
ಇವರ ಆದರ್ಶಗಳೇ ನಮ್ಮ ಬದುಕಿಗೆ ಪ್ರೇರಣೆ
ಇವರ ಸಿಹಿ ಮಾತಿನಿಂದ ಎಲ್ಲರ ಮನ ಸೆಳೆಯುವರು ಮೆಲ್ಲನೆ
ಡ್ಯಾನ್ಸಿಂಗ್ ಟೀಚರ್ ಡ್ರಾಮಾ ಮಾಸ್ಟರ್
ಇಂಗ್ಲೀಷ್ ಗೆ ಟಾಪರ್ ಗ್ರಾಮರ್ ಗೆ ಸೂಪರ್
ಇವರೇ ನಮ್ಮೆಲ್ಲರ ಮೆಚ್ಚಿನ ಟೀಚರ್ ಸುಮಾ ಟೀಚರ್

ಇವರು ನಮ್ಮ ಶಾಲೆಯ ಶಿಸ್ತಿನ ಮೂರ್ತಿ
ಸತತ ಪ್ರಯತ್ನದಿಂದ ಶಾಲೆಗೆ ತರುವರು ಕೀರ್ತಿ
ಎಲ್ಲಾ ವಿಷಯವನ್ನು ಬೋಧಿಸುವ ಇವರು
ಎಲ್ಲರನ್ನೂ ಸಮನಾಗಿ ಕಾಣುವರು
ಶಾಲೆಯ ಪ್ರಗತಿಗೆ ಹಗಲಿರುಳು ಶ್ರಮಿಸುವರು
ಆ ಶ್ರಮದ ಫಲದಿಂದ ಜಯಗಳಿಸುವರು
ಕಬ್ಬಡ್ಡಿಯಲ್ಲಿ ಫಸ್ಟು ಡ್ಯಾನ್ಸ್ ನಲ್ಲಿ ಬೆಷ್ಟು
ಅವರೇ ನಮ್ಮ ನೆಚ್ಚಿನ ಶಿಕ್ಷಕಿ ಸವಿತಾ ಟೀಚರ್

ಇವರ ಮಾತಂತೂ ಸೂಪರ್
ವರ್ಕ ಮಾಡ್ತಾರೆ ಕಂಪ್ಯೂಟರ್
ಇವರು ಕಂಪ್ಯೂಟರ್ ಮಾಸ್ಟರ್
ಎಷ್ಟೋ ಜನರ ಪ್ಯೂಚರ್
ನಗೊದು ಇವರ ನೇಚರ್
ಇವರು ಎಲ್ಲರ ಪೆವರೆಟ್ ಟೀಚರ್ ಗೋದಿ ಟೀಚರ್

ಇವರು ಬಂದು ಸ್ವಲ್ಪ ದಿನವೇ ಆದರೂ
ಎಲ್ಲರಲ್ಲಿ ಒಂದಾದವರು
ಶಿಷ್ಯರನ್ನೂ ಸ್ನೇಹಿತರಂತೆ ಕಾಣುವರು
ನಗುವುದು ಇವರ ನೇಚರ್
ಇವರೇ ನಮ್ಮ ಕವಿತಾ ಟೀಚರ್

ಇವರು ಕಲಿಸಿದ್ದು ಸ್ವಲ್ಪ ದಿನವೇ ಆದರೂ
ಎಲ್ಲರ ಮನದಲ್ಲಿ ಉಳಿದರು
ಇವರು ಮರಳಿ ಬರಬೇಕು ಎನ್ನುವ ಆಶಯ ನಮ್ಮೆಲ್ಲರಲ್ಲಿದೆ
ಇವರು ಬಾರದೆ ಎಲ್ಲರ ಮನ ನೊಂದಿದೆ
ಇವರು ನಮ್ಮ ವಿದ್ಯಾ ಶಾರದೆ
ಇವರೇ ನಮ್ಮೆಲ್ಲರ ನೆಚ್ಚಿನ ಟೀಚರ್ ಶಾರದಾ

ಎಲ್ಲರಿಗೂ ಗುರು ಬಳಗಕ್ಕೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

  • ಕುಮಾರಿ ವರ್ಷಾ ಕುರಹಟ್ಟಿ
    10 ನೇ ತರಗತಿ ವಿದ್ಯಾರ್ಥಿನಿ
    ಸಿಟಿ ಹೈಸ್ಕೂಲ್ ವಿಜಯನಗರ, ಹುಬ್ಬಳ್ಳಿ.

ಹೆಸರಿನಲ್ಲೇ ವಿದ್ಯೆ ಇರುವ ಇವರು
ನಮ್ಮೆಲ್ಲರ ತಾಯಿಯನ್ನು ಹೋಲುವರು
ಕಿರಿಯದಾದ ಮಾತಿನಲ್ಲಿ ಹಿರಿಯದಾದ ವಿಷಯ ತಿಳಿಸುವರು
ತಾಯಿ ಸರಸ್ವತಿ ನಮಗೆ ನೀಡಿದ ವರವೇ ಇವರು
ಮ್ಯಾಥ್ಸ್ ನಲ್ಲಿ ಬೆಸ್ಟು ಇವರ ಮಾತಂತೂ ತುಂಬಾ ಸ್ವೀಟು
ಇವರೇ ನಮ್ಮೆಲ್ಲರ ಪ್ರೀತಿಯ ಟೀಚರ್ ವಿದ್ಯಾ ಟೀಚರ್…

ಸಿಂಹದಂತೆ ಗರ್ಜಿಸುವ ಇವರು
ಮೃದು ಮನಸ್ಸುಳ್ಳವರು
ತಂದೆಯಂತೆ ಪ್ರೀತಿ ತೋರಿಸುವ ಇವರು
ವಿದ್ಯಾರ್ಥಿನಿಯರಿಗೆ ರಕ್ಷಾ ಕವಚದಂತಿರುವರು
ಇವರ ಸಂಸ್ಕಾರ ಇನ್ನೊಂದು ರೂಪ
ನಮ್ಮ ಶಾಲೆಯ ನಂದಾ ದೀಪ
ಇವರ ವರ್ಣಿಸಲು ದೊರೆಯುತ್ತಿಲ್ಲ ಪದವಗಳು
ಸರಳ ಮಾತಿನಲ್ಲಿ ಆಗದು ಇವರ ಬಣ್ಣಿಸಲು
ಇವರೇ ನಮ್ಮೆಲ್ಲರ ನೆಚ್ಚಿನ ಶಿಕ್ಷಕರು ಪೂಜಾರ ಸರ್…

ಇವರು ನೋಡಲು ಪುಲ್ ಸ್ಟ್ರಿಕ್ಟು
ಆದರೆ ಇವರ ಮಾತು ತುಂಬಾ ಸ್ವೀಟು
ಮ್ಯಾಥ್ಸ್ ನಲ್ಲಿ ಪಾಸ್ಟು ಮಾತಲ್ಲಿ ಕ್ಯೂಟು
ನೋಡೋಕೆ ಇವರು ಸಿಂಪಲ್
ಎಲ್ಲರಿಗೂ ಒಂದು ರೋಲ್ ಮಾಡಲ್
ಅವರೇ ನಮ್ಮ ನೆಚ್ಚಿನ ಶಿಕ್ಷಕಿ ಗೌರಿ ಟೀಚರ್…

ಎಲ್ಲರನ್ನೂ ನಗಿಸುವ ಇವರ ಗುಣ
ಎಲ್ಲರ ಮನ ಮುಟ್ಟುವಂತೆ ಬರೆಯುವರು ಕವನ
ಎಲ್ಲರಿಗೂ ಒಳ್ಳೆಯದನ್ನೆ ಬಯಸುವರು ಅನುದಿನ
ಕಠಿಣವಾದ ವಿಷಯದಲ್ಲೂ ಸುಲಭವಾಗಿ ತಿಳಿಸುವರು ವ್ಯಾಕರಣ
ಇವರ ನೆನಪಿನ ಶಕ್ತಿಗೊಂದು ನಮನ
ಇವರ ನಲ್ನುಡಿಯಿಂದ ಸೆಳೆಯುವರು ಎಲ್ಲರ ಗಮನ
ಇವರು ಪಾಠ ಹೇಳುವ ಶೈಲಿ ಎಷ್ಟೊಂದು ಚಂದ
ಇವರು ನಮ್ಮ ಕನ್ನಡದ ಕಂದ
ಇವರೇ ನಮ್ಮೆಲ್ಲರ ಪ್ರೀತಿಯ ಗುರುಗಳು ರಮೇಶ ಸರ್

ತಾಯಿ ಶಾರದೆಯ ಮತ್ತೊಂದು ರೂಪವೇ ಇವರು
ಪಾಠದ ಜೊತೆ ಸಂಗೀತವನ್ನೂ ಸಹ ಕಲಿಸುವರು
ಸರಿಗಮಪ ಎಂಬ ಪದಗಳಲ್ಲಿ ಇವರು
ಗಮನವಹಿಸಿ ಮಕ್ಕಳು ಪಾಠ ಕೇಳಬೇಕು ಎನ್ನುವರು
ಮಕ್ಕಳಲ್ಲಿ ಮಕ್ಕಳಾಗಿ ಬೆರೆಯುವರು
ಪಾಠಕ್ಕೂ ಸೈ ಆಟಕ್ಕೂ ಸೈ ಎನ್ನುವರು
ಇವರ ಕೋಪ ಬೇಸಿಗೆಯ ಬಿರು ಬಿಸಿಲು
ಇವರ ಸಿಹಿ ಮಾತು ಕೇಳಿ ಕರಗುವುದು ಆ ಮುಗಿಲು
ಇವರೇ ನಮ್ಮ ನೆಚ್ಚಿನ ಶಿಕ್ಷಕಿ ಸಂಗೀತಾ ಟೀಚರ್

ಎಲ್ಲರಲ್ಲೂ ಪ್ರೇರಣೆ ತುಂಬುವ ಇವರ ಮಾತುಗಳು
ಇವರ ನುಡಿ ಕೇಳಲು ಹಾತೊರೆಯುವವು ಎಲ್ಲರ ಕಿವಿಗಳು
ಇವರ ಆದರ್ಶಗಳೇ ನಮ್ಮ ಬದುಕಿಗೆ ಪ್ರೇರಣೆ
ಇವರ ಸಿಹಿ ಮಾತಿನಿಂದ ಎಲ್ಲರ ಮನ ಸೆಳೆಯುವರು ಮೆಲ್ಲನೆ
ಡ್ಯಾನ್ಸಿಂಗ್ ಟೀಚರ್ ಡ್ರಾಮಾ ಮಾಸ್ಟರ್
ಇಂಗ್ಲೀಷ್ ಗೆ ಟಾಪರ್ ಗ್ರಾಮರ್ ಗೆ ಸೂಪರ್
ಇವರೇ ನಮ್ಮೆಲ್ಲರ ಮೆಚ್ಚಿನ ಟೀಚರ್ ಸುಮಾ ಟೀಚರ್

ಇವರು ನಮ್ಮ ಶಾಲೆಯ ಶಿಸ್ತಿನ ಮೂರ್ತಿ
ಸತತ ಪ್ರಯತ್ನದಿಂದ ಶಾಲೆಗೆ ತರುವರು ಕೀರ್ತಿ
ಎಲ್ಲಾ ವಿಷಯವನ್ನು ಬೋಧಿಸುವ ಇವರು
ಎಲ್ಲರನ್ನೂ ಸಮನಾಗಿ ಕಾಣುವರು
ಶಾಲೆಯ ಪ್ರಗತಿಗೆ ಹಗಲಿರುಳು ಶ್ರಮಿಸುವರು
ಆ ಶ್ರಮದ ಫಲದಿಂದ ಜಯಗಳಿಸುವರು
ಕಬ್ಬಡ್ಡಿಯಲ್ಲಿ ಫಸ್ಟು ಡ್ಯಾನ್ಸ್ ನಲ್ಲಿ ಬೆಷ್ಟು
ಅವರೇ ನಮ್ಮ ನೆಚ್ಚಿನ ಶಿಕ್ಷಕಿ ಸವಿತಾ ಟೀಚರ್

ಇವರ ಮಾತಂತೂ ಸೂಪರ್
ವರ್ಕ ಮಾಡ್ತಾರೆ ಕಂಪ್ಯೂಟರ್
ಇವರು ಕಂಪ್ಯೂಟರ್ ಮಾಸ್ಟರ್
ಎಷ್ಟೋ ಜನರ ಪ್ಯೂಚರ್
ನಗೊದು ಇವರ ನೇಚರ್
ಇವರು ಎಲ್ಲರ ಪೆವರೆಟ್ ಟೀಚರ್ ಗೋದಿ ಟೀಚರ್

ಇವರು ಬಂದು ಸ್ವಲ್ಪ ದಿನವೇ ಆದರೂ
ಎಲ್ಲರಲ್ಲಿ ಒಂದಾದವರು
ಶಿಷ್ಯರನ್ನೂ ಸ್ನೇಹಿತರಂತೆ ಕಾಣುವರು
ನಗುವುದು ಇವರ ನೇಚರ್
ಇವರೇ ನಮ್ಮ ಕವಿತಾ ಟೀಚರ್

ಇವರು ಕಲಿಸಿದ್ದು ಸ್ವಲ್ಪ ದಿನವೇ ಆದರೂ
ಎಲ್ಲರ ಮನದಲ್ಲಿ ಉಳಿದರು
ಇವರು ಮರಳಿ ಬರಬೇಕು ಎನ್ನುವ ಆಶಯ ನಮ್ಮೆಲ್ಲರಲ್ಲಿದೆ
ಇವರು ಬಾರದೆ ಎಲ್ಲರ ಮನ ನೊಂದಿದೆ
ಇವರು ನಮ್ಮ ವಿದ್ಯಾ ಶಾರದೆ
ಇವರೇ ನಮ್ಮೆಲ್ಲರ ನೆಚ್ಚಿನ ಟೀಚರ್ ಶಾರದಾ

ಎಲ್ಲರಿಗೂ ಗುರು ಬಳಗಕ್ಕೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

  • ಕುಮಾರಿ ವರ್ಷಾ ಕುರಹಟ್ಟಿ
    10 ನೇ ತರಗತಿ ವಿದ್ಯಾರ್ಥಿನಿ
    ಸಿಟಿ ಹೈಸ್ಕೂಲ್ ವಿಜಯನಗರ, ಹುಬ್ಬಳ್ಳಿ.

Leave a Reply

Your email address will not be published. Required fields are marked *