ಮೂಡಲಗಿ: ಲೆಬೆನಾನದಲ್ಲಿ ದೇಶದಲ್ಲಿ ಸೆ.8 ರಿಂದ 11 ರವರಿಗೆ ಜರುಗಲಿರುವ ಅಂತರ್‌ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಪ್ಯಾರಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಮೂಡಲಗಿಯ ಲಕ್ಷ್ಮೀ ಮಲ್ಲಪ್ಪ ರಡರಟ್ಟಿಯನ್ನು ಪಟ್ಟಣದ ಲಕ್ಷ್ಮೀ ನಗರದ ಪಕ್ಷ ಮಹಿಳಾ ಸಂಘದವರು ಸತ್ಕರಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ಸುಧಾ ಕೊಕಟನೂರ ಮಾತನಾಡಿ, ಲಕ್ಷ್ಮೀ ರಡೇರಟ್ಟಿ ಟೇಕ್ವಾಂಡೋ ಪ್ಯಾರಾ ಸ್ಪರ್ಧೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿವಿಧ ಪದಕಗಳನ್ನು ಪಡೆದು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸುತ್ತಿರುವದರಿಂದ ರಾಜ್ಯ ಮತ್ತು ಜಿಲ್ಲೆಯ ಹಾಗೂ ಮೂಡಲಗಿ ಪಟ್ಟಣದ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಎಂದರು.
ಲಕ್ಷ್ಮೀ ರಡರಟ್ಟೆಯನ್ನು ಮಹಿಳಾ ಸಂಘದ ಸದಸ್ಯರು ಸತ್ಕರಿಸಿ ಅಂತರಾಷ್ಟ್ರೀಯ ಕ್ರೀಡೆಯಲ್ಲಿಯೂ ಸಹ ಜಯಶಾಲಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಮಾದೇವಿ ಹಿರೇಮಠ, ವಿದ್ಯಾ ಗುಡಗುಡಿ, ರತ್ನಾ ಲಂಕೆಪ್ಪನವರ, ಸುನೀತಾ ಗುಡಗುಡಿ, ರಾಜೇಶ್ವರಿ ಪಾಸಲಕರ, ರೂಪಾ ಕೌಜಲಗಿ, ಮಹಾದೇವಿ ಅಡಿಬಟ್ಟಿ, ಶ್ರೀದೇವಿ ಕೌಜಲಗಿ, ಸವಿತಾ ಪಾಟೀಲ, ರಾಜಶ್ರೀ ಅಡಿಬಟ್ಟಿ, ಸುವರ್ಣಗೌರಿ ಹಿರೇಮಠ, ತೇಜಶ್ವಿನಿ ಹಿರೇಮಠ, ಗೀರಿಜಾ ರಡರಟ್ಟಿ, ಮಲ್ಲಪ್ಪ ರಡರಟ್ಟಿ, ಬಸಯ್ಯಾ ಹಿರೇಮಠ ಮತ್ತಿತರರು ಇದ್ದರು.
