ಯಲಹಂಕ ಮಾರುತಿ ನಗರ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜಾಲಿ ಕಿಡ್ಸ್ ಮೊಂಟೆಸೆರಿ ಯಲ್ಲಿ
ಸತತವಾಗಿ ಮೂರು ದಿನಗಳ ಕಾಲ (06-09-23 ರಿಂದ 08-09-23) ಬಹಳ ವಿಜೃಂಭಣೆಯಿಂದ ನಡೆಸಲಾಗಿತ್ತು. ಈ ಸಂದರ್ಭದಲ್ಲಿ
ಪೋಷಕರು ಯಶೋಧೆಯಾಗಿ, ಮಕ್ಕಳು ರಾಧೆ, ಕೃಷ್ಣ ವೇಶ ಭೂಷಣ ಧರಿಸಿದ್ದರು. ಪೋಷಕರು ಮಕ್ಕಳು ಸೇರಿ ನೃತ್ಯವನ್ನು ಮಾಡಿ ಆನಂದಿಸಿದರು. ಭಾಗವಸಿದ ಎಲ್ಲಾ ಮಕ್ಕಳಿಗೂ ಜಾಲಿ ಕಿಡ್ಸ್ ಸಂಸ್ಥಾಪಕರು ಪ್ರಮಾಣ ಪತ್ರ ವಿತರಿಸಿದರು ಹಾಗೂ ಕೊನೆಯಲ್ಲಿ ಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಗಿತು. ನಮ್ಮ
ಶಾಲೆಯ ಶಿಕ್ಷಕರು ಹಾಗೂ ಸಹ ಸಂಯೋಜಕರು ಕಾರ್ಯಕ್ರಮ ಯಶಸ್ವೀಗೊಳಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು.







