ಬೆಂಗಳೂರು, 13 ಸೆಪ್ಟೆಂಬರ್ 2023: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ಉತ್ಪಾದಕ ಟಾಟಾ ಮೋಟಾರ್ಸ್‌ ವಿಶಿಷ್ಟವಾದ ಗ್ರಾಹಕರ ತೊಡಗಿಸಿಕೊಳ್ಳುವಿಕೆ ಉಪಕ್ರಮವಾದ ಟ್ರಕ್ ಉತ್ಸವ್ ಅನ್ನು ಆರಂಭಿಸಿದೆ. ಇತ್ತೀಚಿನ ವಾಹನಗಳು ಮತ್ತು ಸಂಚಾರ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಟ್ರಕ್ ಉತ್ಸವ್ ಹೊಂದಿದೆ. ಇದರಲ್ಲಿ ನವೀನವಾದ ಮತ್ತು ತಾಂತ್ರಿಕವಾಗಿ ಸುಧಾರಿತ ಟ್ರಕ್‌ಗಳನ್ನು ವಿಶಿಷ್ಟ ಮೌಲ್ಯ ವರ್ಧಿತ ಸೇವೆಗಳೊಂದಿಗೆ ಪ್ರದರ್ಶಿಸಲಾಗುತ್ತದೆ. ಟಾಟಾ ಮೋಟಾರ್ಸ್ ತನ್ನ ಹೊಚ್ಚ ಹೊಸ ಎಲ್‌ಪಿಟಿ 1916 ವರ್ಗದಲ್ಲೇ ಪ್ರಮುಖವಾದ ಸೇರ್ಪಡೆಯನ್ನು ಪ್ರಕಟಿಸಿದ್ದು, ಗ್ರಾಹಕರ ಲಾಭಾಂಶದಲ್ಲಿ ಹೊಸ ಮಾನದಮಡವನ್ನು ಸೃಷ್ಟಿಸಲು ಇದನ್ನು ಊಪಿಸಲಾಗಿದೆ. ಟ್ರಕ್ ಉತ್ಸವ್ ಮೂಲಕ ಟಾಟಾ ಮೋಟಾರ್ಸ್‌ನ ಸುಧಾರಿತ ಸಂಚಾರ ಸೌಲಭ್ಯಗಳಿಂದ ಗ್ರಾಹಕರು ಪ್ರಯೋಜನ ಪಡೆಯುತ್ತಾರೆ. ಗ್ರಾಹಕರ ನಿರ್ದಿಷ್ಟ ಅಗತ್ಯಗಳಿಗೆ ಇದನ್ನು ರೂಪಿಸಲಾಗಿದೆ ಮತ್ತು ಸುಲಭ ಮತ್ತು ಅನುಕೂಲಕರ ಹಣಕಾಸು ಸೌಲಭ್ಯಕ್ಕಾಗಿ ಹಣಕಾಸು ಪಾಲುದಾರರ ಜೊತೆಗೆ ತೊಡಗಿಸಿಕೊಳ್ಳುವ ಅವಕಾಶವೂ ಇದರಲ್ಲಿ ಇರುತ್ತದೆ. ಟ್ರಕ್ ಉತ್ಸವ್ ಅನ್ನು ದೆಹಲಿ, ಫರೀದಾಬಾದ್, ಗುರುಗ್ರಾಮ, ಬೆಂಗಳೂರು, ಜೈಪುರ ಮತ್ತು ಚೆನ್ನೈ ಸೇರಿದಂತೆ ಇತರ ನಗರಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ.

ಟ್ರಕ್ ಉತ್ಸವ್‌ನಲ್ಲಿ ಅನಾವರಣಗೊಳಿಸಿರುವ ಟಾಟಾ ಎಲ್‌ಪಿಟಿ 1916 ಈ ಸೆಗ್ಮೆಂಟ್‌ನಲ್ಲಿ ಅತ್ಯಧಿಕ ಪೇಲೋಡ್ ಅನ್ನು ಒದಗಿಸುತ್ತದೆ. ಇದರಿಂದಾಗಿ ವಾಹನ ಮಾಲೀಕರಿಗೆ ಹೆಚ್ಚಿನ ಆದಾಯ ಮತ್ತು ಲಾಭಾಂಶವನ್ನು ಒದಗಿಸುತ್ತದೆ. ಸಾಬೀತಾದ ಮತ್ತು ಇಂಧನ ದಕ್ಷ 3.3 ಲೀಟರ್ ಡೀಸೆಲ್ ಇಂಜಿನ್ ಅನ್ನು ಇದು ಹೊಂದಿದೆ ಮತ್ತು ಚಾಲಕರ ಅನುಕೂಲಕ್ಕೆ, ಸ್ಲೀಪರ್ ಕಾನ್ಫಿಗರೇಶನ್‌ಗಳೊಂದಿಗೆ ವಾಕ್‌ಥ್ರೂ ಎಲ್‌ಪಿಟಿ ಕ್ಯಾಬಿನ್‌ ಅನ್ನು ಹೊಂದಿದೆ. ಅತ್ಯಧಿಕ ಲಾಭಾಂಶ ಮತ್ತು ವಿಶ್ವಾಸಾರ್ಹತೆಗಾಗಿ ಎಲ್‌ಪಿಟಿ 1916 ಅನ್ನು ಇಂಜಿನಿಯರ್ ಮಾಡಲಾಗಿದೆ ಮತ್ತು ಕ್ರೂಸ್ ಕಂಟ್ರೋಲ್, ಗಿಯರ್ ಶಿಫ್ಟ್ ಅಡ್ವೈಸರ್‌, ಡ್ಯೂಯೆಲ್ ಮೋಡ್ ಫ್ಯೂಯೆಲ್ ಎಕಾನಮಿ ಸ್ವಿಚ್‌, ಲೋ ರೋಲಿಂಗ್‌ ರೆಸಿಸ್ಟೆನ್ಸ್‌ ಟೈರ್‌ಗಳು ಮತ್ತು ಎಂಜಿನ್ ಬ್ರೇಕ್‌ನಂತಹ ಇತ್ತೀಚಿನ ವೈಶಿಷ್ಟ್ಯಗಳನ್ನು ಇದು ಹೊಂದಿದೆ.

ಈ ಸಂದರ್ಭದ ಬಗ್ಗೆ ಮಾತನಾಡಿದ ಟಾಟಾ ಮೋಟಾರ್ಸ್‌ನ ಟ್ರಕ್‌ ವಿಭಾಗದ ಬ್ಯುಸಿನೆಸ್‌ ಮುಖ್ಯಸ್ಥ ರಾಜೇಶ್‌ ಕೌಲ್‌ “ಗ್ರಾಹಕ ಕೇಂದ್ರಿತ ಸಂಚಾರ ವ್ಯವಸ್ಥೆಯನ್ನು ಒದಗಿಸುವುದಕ್ಕೆ ಟಾಟಾ ಮೋಟಾರ್ಸ್‌ ಹೊಂದಿರುವ ಬದ್ಧತೆಯು ನಾವು ಮಾಡುವ ಎಲ್ಲ ಕೆಲಸದಲ್ಲೂ ಅಡಕವಾಗಿದೆ. ನಮ್ಮ ಇತ್ತೀಚಿನ ಕಾರ್ಯಕ್ರಮ ಟ್ರಕ್ ಉತ್ಸವ್‌ ನಮ್ಮ ಮೌಲ್ಯಯುತ ಗ್ರಾಹಕರು ಮತ್ತು ಪಾಲುದಾರರೊಂದಿಗೆ ತೊಡಗಿಸಿಕೊಳ್ಳುವ ನಮ್ಮ ಬದ್ಧತೆಯ ದ್ಯೋತಕವಾಗಿದೆ. ಈ ಶೋದ ಮುಖ್ಯ ಅಂಶವೆಂದರೆ ಹೊಚ್ಚ ಹೊಸ ಟಾಟಾ ಎಲ್‌ಪಿಟಿ 1916 ಆಗಿದ್ದು, ಗ್ರಾಹಕರ ಲಾಭಾಂಶಕ್ಕೆ ಸೆಗ್ಮೆಂಟ್‌ನಲ್ಲೇ ಅತ್ಯುನ್ನತ ಮಾನದಂಡವನ್ನು ಹೊಂದಿರುತ್ತದೆ. ಇಂಧನ ದಕ್ಷ ಪವರ್‌ಟ್ರೇನ್‌ ಮತ್ತು ಈ ವರ್ಗದಲ್ಲೇ ಉತ್ತಮ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಟ್ರಕ್ ಉತ್ಸವ್‌ ನಮ್ಮ ಗ್ರಾಹಕರ ಜೊತೆಗೆ ತೊಡಗಿಸಿಕೊಳ್ಳುವುದಕ್ಕೆ ಪರಿಪೂರ್ಣವಾದ ಪ್ಲಾಟ್‌ಫಾರಂ ಅನ್ನು ಒದಗಿಸುತ್ತದೆ. ಅಮೂಲ್ಯವಾದ ಒಳನೋಟಗಳು ಮತ್ತು ಪಾಲುದಾರಿಕೆಯನ್ನೂ ಇದು ಪ್ರೋತ್ಸಾಹಿಸುತ್ತದೆ. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಸಂವಾದ ನಡೆಸಲು ನಮ್ಮ ಗ್ರಾಹಕರನ್ನು ನಾವು ಸ್ವಾಗತಿಸುತ್ತಿದ್ದೇವೆ.”

ಟಾಟಾ ಮೋಟಾರ್ಸ್ ಟ್ರಕ್‌ಗಳ ಶ್ರೇಣಿಯು ಏಳು ದಶಕಗಳಿಂದಲು ದೇಶ ನಿರ್ಮಾಣದಲ್ಲಿ ಸಹಾಯ ಮಾಡುತ್ತಿವೆ. ಕಂಪನಿಯು ಬಿಎಸ್‌6 ಹಂತ 2 ರ ಕಡ್ಡಾಯ ನಿಯಮಾವಳಿಗಳನ್ನೂ ಮೀರಿ ವಾಹನವನ್ನು ಅಪ್‌ಗ್ರೇಡ್‌ ಮಾಡಲಾಗಿದ್ದು, ಇದರಲ್ಲಿ ಹೆಚ್ಚು ವೈಶಿಷ್ಟ್ಯಗಳು, ದಕ್ಷ ಪವರ್‌ಟ್ರೇನ್‌ಗಳು ಮತ್ತು ಅತ್ಯುತ್ತಮ ಮೌಲ್ಯವರ್ಧನೆಗಳಿವೆ. ವರಗದಲ್ಲೇ ಉತ್ತಮ ವಾಹನವನ್ನು ಖರೀದಿ ಮಾಡುವುದರ ಹೊರತಾಗಿ, ವಾಹನ ಮಾಲೀಕರಿಗೆ ಉತ್ತಮ ಇಂಧನ ದಕ್ಷತೆ, ಕಡಿಮೆ ಕಾರ್ಯನಿರ್ವಹಣೆ ವೆಚ್ಚ, ಅಧಿಕ ವಾಹನ ಚಾಲನೆ ಸಮಯ, ನೈಜ ಸಮಯದ ವಾಹನ ಟ್ರ್ಯಾಕಿಂಗ್‌ ಮತ್ತು ಫ್ಲೀಟ್‌ ಅನ್ನು ದಕ್ಷವಾಗಿ ನಿರ್ವಹಿಸುವುದಕ್ಕೆ ವಿಶ್ಲೇಷಣೆ ಲಭ್ಯವಾಗುತ್ತದೆ.

ಕಂಪನಿಯು ಉದ್ಯಮದಲ್ಲೇ ಪ್ರಥಮ ಸೌಲಭ್ಯಗಳನ್ನು ಪರಿಚಯಿಸಿದೆ. ವಿಶ್ವದರ್ಜೆಯ ಕ್ಯಾಬನ್‌ಗಳು, ಅತ್ಯಧಿಕ ಲೋಡ್‌ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ವಾಹನಗಳು, ಸೂಕ್ತ ಬಾಡಿ ಶೈಲಿಗಳು, ದೀರ್ಘ ಡೆಕ್‌ಗಳು, ಇತ್ತೀಚಿನ ವೈಶಿಷ್ಟ್ಯಗಳು ಮತ್ತು ಹಲವು ಪವರ್‌ಟ್ರೇನ್‌ಗಳು ಇವೆ. ವಾಹನವು ಶ್ರೇಣಿಯಲ್ಲೇ ಉತ್ತಮ ಇಂಧನ ದಕ್ಷತೆ, ಪರ್ಫಾರ್ಮೆನ್ಸ್‌ ಮತ್ತು ವಾಹನ ಚಾಲನೆ ಸಾಮರ್ಥ್ಯ, ಚಾಲಕರ ಅನುಕೂಲ ಹೆಚ್ಚಳ, ಸರ್ವೀಸ್‌ ಮಧ್ಯಂತರದಲ್ಲಿ ಸುಧಾರಣೆ, ಪ್ಲೂಯಿಡ್‌ ಬದಲಾವಣೆ ಆವರ್ತನದಲ್ಲಿ ಮಹತ್ವದ ಬದಲಾವಣೆ ಮಾಡಿದೆ. 4ಜಿ ಕನೆಕ್ಟಿವಿಟಿ ಮತ್ತು ಓವರ್‌ ದಿ ಏರ್‌ ಫರ್ಮ್‌ವೇರ್‌ ಸಾಮರ್ಥ್ಯವನ್ನು ಹೊಂದಿದ್ದು, ಸಂಪರ್ಕವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಾಗಿದೆ. ಇವೆಲ್ಲಕ್ಕೂ ಭಾರತದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಸೇಲ್ಸ್‌ ಮತ್ತು ಸರ್ವೀಸ್‌ ನೆಟ್‌ವರ್ಕ್‌ನ ಬೆಂಬಲವಿದೆ. ತರಬೇತಿ ಹೊಂದಿರುವ ಪರಿಣಿತರು ಇದರಲ್ಲಿದ್ದು, ಟಾಟಾ ಅಸಲಿ ಬಿಡಿಭಾಗಗಳು ಸುಲಭವಾಗಿ ಇಲ್ಲಿ ಲಭ್ಯವಾಗುತ್ತವೆ.

Leave a Reply

Your email address will not be published. Required fields are marked *