ಬೆಂಗಳೂರು, ಸೆಪ್ಟೆಂಬರ್ 17, 2023: ನೀಲೇಶ್ ಛಡ್ವಾ ಮತ್ತು ಮಿತೇಶ್ ಸುಂಬದ್ ಅವರ ಸೃಷ್ಟಿಯಾದ ಕೊರಾ ಸೆಪ್ಟೆಂಬರ್ 17ರಂದು ತನ್ನ 18ನೇ ಮಳಿಗೆ ಪ್ರಾರಂಭಿಸುವ ಮೂಲಕ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಹಿಂದೆಂದೂ ಕಾಣದಂತೆ ಸಂಪ್ರದಾಯ ಮತ್ತು ಆಧುನಿಕತೆಯ ಸಂಯೋಜನೆಯಾದ ಕೊರಾ ಬೈ ನೀಲೇಶ್ ಮಿತೇಶ್ ವಿಶ್ವಕ್ಕೆ ತನ್ನ ಅಸಾಧಾರಣ ಸಂಗ್ರಹವನ್ನು ಅನಾವರಣಗೊಳಿಸುತ್ತಿದೆ.
ಕರ್ನಾಟಕದ ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಈ ಮಳಿಗೆಯನ್ನು ಉದ್ಘಾಟಿಸಲಿದ್ದು ಈ ಕಾರ್ಯಕ್ರಮಕ್ಕೆ ಮಹತ್ತರ ಪ್ರಾಮುಖ್ಯತೆ ತಂದಿದೆ. ರಾಜ್ಯಪಾಲರ ಉಪಸ್ಥಿತಿಯು ಕೊರಾದ ಸಾಂಸ್ಕೃತಿಕ ಮತ್ತು ಫ್ಯಾಷನ್ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲಿದೆ.
ಕೊರಾ ಬೈ ನಿತೇಶ್ ನ ನಿರ್ದೇಶಕ ಮಿತೇಶ್ ಸುಂಬದ್ ಈ ಬ್ರಾಂಡ್ ನ ತತ್ವವನ್ನು ಹೀಗೆ ಹೇಳಿದರು, “ಇಂದು ಕೊರಾ ಬೈ ಎನ್ಎಂ ವಿಶೇಷ ವಿನ್ಯಾಸಗಳನ್ನು ಮಾತ್ರ ಸೃಷ್ಟಿಸುತ್ತಿಲ್ಲ; ಇದು ಉಡುಪಿನ ಮೂಲಕ ಜನರ ಭಾವನೆಗಳನ್ನು ವಿನ್ಯಾಸಗೊಳಿಸುವುದು ಮತ್ತು ನಮ್ಮ ಉದ್ಯಮದ ಒಟ್ಟಾರೆ ಪ್ರಗತಿಯನ್ನು ಉತ್ತೇಜಿಸುವುದು” ಎಂದರು.
ಈ ಡೈನಮಿಕ್ ಜೋಡಿಯ ಮತ್ತೊಬ್ಬರಾದ ನೀಲೇಶ್ ಛಾಡ್ವಾ, “ನಮ್ಮ ಗ್ರಾಹಕರು ಕೊರಾ ಉಡುಪುಗಳನ್ನು ಧರಿಸಿದಾಗ ಅವರು ಐಷಾರಾಮದ ಶಕ್ತಿ ಅನುಭವಿಸುತ್ತಾರೆ. ಅವರು ನಮ್ಮ ದೊಡ್ಡ, ಅದ್ಭುತ ಕುಟುಂಬದ ಭಾಗವಾಗುತ್ತಾರೆ ಮತ್ತು ನಮ್ಮ ಉತ್ಪನ್ನ ಶ್ರೇಣಿಯ ಪ್ರಗತಿಗೆ ಕೊಡುಗೆ ನೀಡುತ್ತಾರೆ”ಎಂದರು.
ನೀಲೇಶ್ ಮತ್ತು ಮಿತೇಶ್ 2011ರಲ್ಲಿ ಕೊರಾವನ್ನು ಒಂದು ಕಂಪನಿಯಾಗಿ ಪ್ರಾರಂಭಿಸಿದ್ದು ಅದು ಎಲ್ಲ ಫ್ಯಾಷನ್ ಮೌಲ್ಯಗಳ ಅಂತರ್ಯದಲ್ಲಿರುವ ಮೂಲಭೂತ ತತ್ವಗಳಿಗೆ ಆದ್ಯತೆ ನೀಡುತ್ತದೆ. ಪುರುಷರು ಮತ್ತು ಬಾಲಕರಿಗೆ ಈ ಒನ್-ಸ್ಟಾಪ್ –ಶಾಪ್ ಅತ್ಯುತ್ತಮ ಸಾಂಪ್ರದಾಯಿಕ ಉಡುಪುಗಳನ್ನು ನೀಡುತ್ತದೆ.
ವಿನ್ಯಾಸಕರು, ಮಾಸ್ಟರ್ ಗಳು ಮತ್ತು ಕರಕುಶಲಿಗರ ಆಂತರಿಕ ತಂಡವನ್ನು ಹೊಂದಿರುವ ಕೊರಾ ವರ್ಷದಿಂದ ವರ್ಷಕ್ಕೆ ಹಲವಾರು ಸ್ಥಳಗಳಿಗೆ ವಿಸ್ತರಿಸುತ್ತಿದ್ದು ಮುಂಬೈನಲ್ಲಿ ಸಿಟಿ ಆಫ್ ಡ್ರೀಮ್ಸ್(ಬೊರಿವಿಲಿ, ಸಾಂತಾ ಕ್ರೂಜ್ ಮತ್ತು ಹ್ಯೂಸ್ ರೋಡ್) ದುಬೈನ ಇಂಟರ್ ನ್ಯಾಷನಲ್ ಫ್ಯಾಷನ್ ಹಬ್(ಮೀನಾ ಬಜಾರ್)ಗೆ ಚಲಿಸಿದೆ.
ಈ ಬ್ರಾಂಡ್ ಫ್ಯಾಷನ್ ಆಸಕ್ತಿಯ ಪುರುಷರಿಗೆ ಗುಣಮಟ್ಟದ ಸಾಂಪ್ರದಾಯಿಕ ಆದರೆ ಸಂಸ್ಕೃತಿಯಲ್ಲಿ ಬೇರೂರಿದ ಉಡುಪನ್ನು ಒದಗಿಸುತ್ತದೆ. ಈ ಗುಣಗಳು ಪುರುಷರು ಮತ್ತು ಬಾಲಕರ ಶೆರ್ವಾನಿಗಳು, ಬಂದ್ ಗಾಲಾಗಳು, ಕುರ್ತಾಗಳು ಮತ್ತು ಟಕ್ಸೆಡೊಗಳಲ್ಲಿ ಪ್ರತಿಫಲಿಸುತ್ತವೆ. ಕೊರಾ ಬೈ ನೀಲೇಶ್ ಮಿತೇಶ್ ನ ಹೊಸ ಮಳಿಗೆಯಲ್ಲಿ ವಿಸ್ತಾರ ಶ್ರೇಣಿಯ ಸಂಗ್ರಹವಿದ್ದು ಅವು ಆವಿಷ್ಕಾರವನ್ನು ಅಪ್ಪಿಕೊಂಡೇ ಸಂಪ್ರದಾಯವನ್ನು ಉಳಿಸುವ ಬ್ರಾಂಡ್ ನ ಬದ್ಧತೆಯನ್ನು ಪ್ರದರ್ಶಿಸುತ್ತದೆ.


