ದಿನಾಂಕ 23 9 2023 ಬೆಂಗಳೂರು ಉತ್ತರ ವಲಯ- 4 17 ವರ್ಷದ ಒಳಗಿನ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಕರಾಟೆ ಸ್ಪರ್ಧೆಯು ಸೆಂಟ್ ಆಲ್ಫನ್ಸ ಪ್ರೌಢಶಾಲೆಯಲ್ಲಿ ನಡೆಸಲಾಯಿತು.
ಆಕ್ಸ್ಫರ್ಡ್ ಶಾಲೆಯ 16 ವಿದ್ಯಾರ್ಥಿಗಳು 17 ವರ್ಷಗಳ ಒಳಗಿನ ಕರಾಟೆ ಸ್ಪರ್ಧೆ ಭಾಗವಹಿಸಿದ್ದರು .ಶಾಲೆಯ ಕರಾಟೆ ಮಾಸ್ಟರ್ ಜಾನ್ಸನ್ ಅವರ ತರಬೇತಿಯೊಂದಿಗೆ 17 ವರ್ಷದ ಬಾಲಕರ ವಿಭಾಗದಲ್ಲಿ ಮೊಹಮ್ಮದ್ ಅಯಾನ್ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ದ್ವಿತೀಯ ಬಹುಮಾನ ಬೆಳ್ಳಿ ಪದಕವನ್ನು ಪಡೆದರೆ; ಬಾಲಕಿಯರಾದ ತನುಶ್ರೀ ಬೆಳ್ಳಿ ಪದಕ ಸೋನಿಯಾ ಪ್ರಜಾಪತಿ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಆಕ್ಸ್ಫರ್ಡ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳ ರಾಜೇಶ್ ಅವರು ಪಂದ್ಯದ ವಿಜೇತ ಮಕ್ಕಳಿಗೆ ಶುಭ ಕೋರಿದರು.

