ಪಬ್ಲಿಕ್ ಪವರ್

: ದಿನಾಂಕ 13-10- 2023 ರ ಶುಕ್ರವಾರದಂದು 10.30 ಗಂಟೆಗೆ ಬಸವ ಸಭಾಂಗಣದಲ್ಲಿ ಪಠ್ಯ ಮತ್ತು ಪಠ್ಯ ಪೂರಕ ಚಟುವಟಿಕೆಗಳ 2023 2024 ನೇ ಶೈಕ್ಷಣಿಕ ಅವಧಿಯ ಉದ್ಘಾಟನಾ ಸಮಾರಂಭ ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು. ಪರಿವರ್ತನ ಗುರು ಲೇಖಕರು – ಸಾಮಾಜಿಕ ಜಾಲತಾಣಪ್ರಭಾವಿ ಶ್ರೀಜಯಪ್ರಕಾಶ ನಾಗತಿಹಳ್ಳಿ ಇವರು ವಿದ್ಯಾರ್ಥಿಗಳಿಗೆ ಗೋಲ್ ಸೆಟ್ಟಿಂಗ್ ನ ಬಗ್ಗೆ ತಿಳಿಸಿದರು. ಶ್ರೀಮತಿ ಸಂಗೀತಾ ಶ್ರೀಕಿಷನ್ ಅವರು ತಮ್ಮ ಸುಶ್ರಾವ್ಯ ಕಂಠದಿಂದ ವಚನ ಭಾವಗೀತೆ, ಜಾನಪದ ಗೀತೆಯನ್ನು ವಿದ್ಯಾರ್ಥಿಗಳನ್ನು ಜೊತೆಗೂಡಿಸಿಕೊಂಡು ಸಮಾರಂಭವನ್ನು ಸಾಂಸ್ಕೃತಿಕವಾಗಿ ಪ್ರತಿ ಬಿಂಬಿಸುವಂತೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀಎಸ್ಎಸ್ ದೊಡ್ಡಣ್ಣನವರ್, ವಿದ್ಯಾರ್ಥಿಗಳು ಭವಿಷ್ಯಕ್ಕಾಗಿ ಕಾಲೇಜಿನ ದಿನಗಳನ್ನು ಜ್ಞಾನಾರ್ಜನೆಡೆಗೆ ತಮ್ಮನ್ನು ತಾವು ನಿಯಂತ್ರಿಸಿಕೊಂಡು ಪದವಿ ಪಡೆದು ಆತ್ಮಸ್ಥೈರ್ಯದಿಂದ ಬದುಕು ನಡೆಸಬೇಕೆಂದು ತಿಳಿಸಿದರು ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳಿಮಠ ಅವರು ವಚನಗಳಲ್ಲಿ ಮಾನವ ಧರ್ಮದತ್ತ ನಾವೆಲ್ಲ ಶ್ರಮಿಸಬೇಕೆಂದು ತಿಳಿಸಿ ಎಲ್ಲರನ್ನೂ ಸ್ವಾಗತಿಸಿದರು – ಶ್ರೀಕಬಾಡಗಿ ನಿವೃತ್ತ ಪ್ರಾಂಶುಪಾಲರು ಆಡಳಿತ ಮಂಡಳಿಯ ನಿರ್ದೇಶಕರುಗಳಾದ – ಶ್ರೀ ಬಸವರಾಜ ಬಿರಾದಾರ್ ಶ್ರೀ ಮಹೇಶ ಸಜ್ಜನರ್- ಶ್ರೀಶಿವಕುಮಾರ ಸರ ಸೆಟ್ಟಿ – ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮಂಜನಾಥ ಹೆಚ್- ನೂತನ ವಿದ್ಯಾರ್ಥಿಗಳು ಬಿಎ ಬಿಕಾಂ ಬಿಎಸ್ಸಿ ವಿದ್ಯಾರ್ಥಿಗಳು ಸಮಾರಂಭದಲ್ಲಿದ್ದು ಸಮಾರಂಭವನ್ನು ಯಶಸ್ವಿಗೊಳಿಸಿದರು. ಬೋಧಕ-ಬೋಧಕೇತರ ವರ್ಗ ಹಾಗೂ ವಿವಿಧ ಸಮಿತಿಗಳ ಸಂಚಾಲಕರು – ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *