ಕೋಲಾರ : ತಾಲೂಕಿನ ನರಸಾಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಸತ್ಯಾಂಬಿಕಾ ಮತ್ತು ಶ್ರೀ ವೇದಾಂಬಿಕಾ ದೇವಾಲಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು.
ನವರಾತ್ರಿ ಉತ್ಸವದ ಪ್ರಯುಕ್ತ ಮೊದಲ ದಿನದ ಶ್ರೀ ಸತ್ಯಾಂಬಿಕಾ ಮತ್ತು ವೇದಾಂಬಿಕಾ ದೇವಾಲಯದಲ್ಲಿ ದೇವರುಗಳಿಗೆ ಅರಿಶಿನ ಕುಂಕುಮ ಅಲಂಕಾರ ಮಾಡಿದ್ದು ಭಕ್ತಾದಿಗಳಿಗೆ ಕಣ್ಮಣಿಯಾಗಿ ಕಾಣುತ್ತಿತ್ತು.
ದೇವರಿಗೆ ವಿಶೇಷ ಪೂಜೆ ಕೈಂಕರ್ಯಗಳು, ಹೂವಿನ ಅಲಂಕಾರ, ಮಹಾ ಮಂಗಳಾರತಿ, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.
