ಡಾ. ಎ.ಪಿ.ಜೆ ಅಬ್ದುಲ್ ಕಲಂ ರವರ 92ನೇ ಜನ್ಮದಿನದ ನಿಮಿತ್ಯ ದಿನಾಂಕ:13/10/2023 ರಂದು ನಗರದಲ್ಲಿರುವ ಎಡಿಫೈ ಶಾಲೆಯ ಮಕ್ಕಳಿಂದ ಅಬ್ದುಲ್ ಕಲಂ ರವರ 1512 ಅಡಿಯ ಭಾವಚಿತ್ರವನ್ನು ಮಕ್ಕಳಿಂದ ಚಿತ್ರಿಸಿ, ಇದರ ಮಾರ್ಗದರ್ಶಕರಾದ ಜಾಶ್ವಾ ಅಜಯ ರವರು ಮಾರ್ಗದರ್ಶನ ನೀಡಿ ಈ ಒಂದು ಭಾವಚಿತ್ರ ಒosಚಿiಛಿ ಂಡಿಣ ಮಾಡಿ ಸುಮಾರು 30 ಮಕ್ಕಳು ಪಾಲ್ಗೊಂಡಿದ್ದು, ಈ ರೀತಿ ಚಿತ್ರಕಲೆಯನ್ನು ಒಂದು ಮಕ್ಕಳ ಒಂದು ಪೇಜ್ ಅಂದರೆ 30 ಮಕ್ಕಳ 30 ಡ್ರಾಯಿಂಗ್ ಪುಸ್ತಕ ಮೂಲಕ 1512 ಅಡಿ ಇರುವ ಭಾವಚಿತ್ರ ಮಾಡಿ ಡಾ. ಎ.ಪಿ.ಜೆ ಅಬ್ದುಲ್ ಕಲಂ ರವರ ಜನ್ಮ ದಿನದಂದು ಅವರ ಸ್ಮರಣಾರ್ಥ ಈ ಕಾರ್ಯಕ್ರಮ ಜರುಗಲಾಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿರವರು, ಶಾಲಾ ಶಿಕ್ಷಕರು ಮತ್ತು ಮುಖ್ಯೋಪಾಧ್ಯಯರು, ಈ ಕಲೆಯನ್ನು ಕಂಡು ಅವರು ಈ ಒಬ್ಬ ರಾಷ್ಟçಪತಿ, ಒಬ್ಬ ವಿಜ್ಞಾನಿ, ಒಬ್ಬ ಚಿತಂಕ, ಮತ್ತು ವಿದ್ಯಾರ್ಥಿಗಳ ಮಿತ್ರ ಆಗಿದ್ದರು. ಇವರು ತಮ್ಮ ಜೀವನದಲ್ಲಿ ಅನೇಕ ಸಾಧನೆ ಮಾಡಿದ್ದಾರೆ. ಎಂದು ಹೇಳಿದರು. ಹಾಗೂ ಈ ಮಕ್ಕಳ ,ಮಾರ್ಗದರ್ಶಕರ ಈ ಕಲೆಯನ್ನು ಕಂಡು ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇದು ಮಕ್ಕಳಲ್ಲಿ ಪ್ರತಿಭೆ ಹೊರತರುವ ಜೊತೆಗೆ ಇಂತಹ ವ್ಯಕ್ತಿಯ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ಕಂಡುಕೊಳ್ಳಬಹುದಾಗಿದೆ ಹಾಗಾಗಿ ಕಲೆಯನ್ನು ಬೆಳೆಸಬೇಕು ಎಂದು ಹೇಳಿದರು.
