


ಯಲಹಂಕ : ಯಲಹಂಕ ಕ್ಷೇತ್ರದ ಮಾಚೋಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಶುಕ್ರವಾರ ಆಯುಧಪೂಜೆ ಪ್ರಯುಕ್ತ ಮಹಿಳಾ ಸದಸ್ಯರಿಗೆ ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ ಮಾಯಣ್ಣ ಹಸಿರು ಸೀರೆಯೊಂದಿಗೆ, ಅರಿಶಿಣ, ಕುಂಕುಮ ಸಮೇತ ಬಾಗಿನ ಅರ್ಪಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಯುಧಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಲಕ್ಷ್ಮೀದೇವಿ, ಮಾಜಿ ಅಧ್ಯಕ್ಷರಾದ ರಾಮಕೃಷ್ಣಯ್ಯ, ನರಸಿಂಹಮೂರ್ತಿ, ಸದಸ್ಯರಾದ ತಿಮ್ಮಕ್ಕ ಉದ್ದಂಡಯ್ಯ, ಪ್ರಕಾಶ್ ಗೌಡ, ಸತೀಶ್ ಕುಮಾರ್, ಆನಂದ್, ಮಹೇಶ್, ಪವಿತ್ರ, ದಿವ್ಯ, ಶಾಂತ, ಹನುಮಂತಯ್ಯ, ಮಂಜುನಾಥ್, ಸೀನಮ್ಮ, ರಂಜಿನಿ, ಲೀಲಾವತಿ, ಸುಜಾತ, ಜಾನಕಮ್ಮ, ಸೌಮ್ಯಶ್ರೀ, ಕಾರ್ಯದರ್ಶಿ ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರಿದ್ದರು.