
ಕೋಲಾರ ನಗರ ಪೋಲಿಸ್ ಠಾಣೆಗೆ
ನೂತನವಾಗಿ ಸಬ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಸೈಯದ್ ಖಾಸಿಂ ರವರಿಗೆ ನಗರದ
ಎಲ್.ಎಫ್.ಸಿ ಗ್ರೂಪ್ ಸದಸ್ಯರು ಸ್ವಾಗತಿಸಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ನೂತನ ಸಬ್ ಇನ್ಸ್ಪೆಕ್ಟರ್ ಸೈಯದ್ ಖಾಸಿಂ ರವರು ನಗರದಲ್ಲಿ ಉತ್ತಮ ಕೆಲಸ ನಿರ್ವಹಿಸಲು ಎಲ್ಲರೂ ಸಹಕಾರ ನೀಡ ಬೇಕೆಂದರು.
ಮುಸ್ಲಿಂ ಮುಖಂಡ ಸೀಪೂರ್ ಅಕ್ರಂ ಮಾತನಾಡಿ ಉತ್ತಮ ಅಧಿಕಾರಗಳು ನಗರ ಠಾಣೆಗೆ ಆಗಮಿಸಿದ್ದು,ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡುವುದಾಗಿ ಹೇಳಿದರು.
ಈ ಸಂಧರ್ಭದಲ್ಲಿ ಮುಸ್ಲಿಂ ಮುಖಂಡರುಗಳಾದ ನಗರ ಸಭೆ ಮಾಜಿ ಅಧ್ಯಕ್ಷ ಅಪ್ರೋಜ್ ಪಾಷ,ಇಲಿಯಾಸ್,ಮೋದ್ದೀನ್,
ಇಮ್ರಾನ್ ಪಾಷ,ನಜೀರ್ ಪಾಷ,ನಜೀರ್,ಟಿಂಬರ್ ನಯಾಜ್,ಮಹಮ್ಮದ್ ಶರೀಫ್, ಮತ್ತಿತರರು ಉಪಸ್ಥಿತರಿದ್ದರು.