.





BMSIT&M ನಲ್ಲಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು AICTE ಪ್ರಾಯೋಜಿತ 6 ದಿನಗಳ ATAL ಅಧ್ಯಾಪಕರ ಅಭಿವೃದ್ದಿ ಕಾರ್ಯಕ್ರಮವನ್ನು “ಹೈಡ್ರೋಜನ್ ಹೈಬ್ರಿಡ್ ಟೆಕ್ನಾಲಜಿ ಫಾರ್ ಕ್ಲೀನರ್ ಮೊಬಿಲಿಟಿ ರೆವಲ್ಯೂಷನ್” ಶೀರ್ಷಿಕೆಯ ಅಡಿಯಲ್ಲಿ 2023 ರ ನವೆಂಬರ್ 6 ರಿಂದ 11 ರವರೆಗೆ ಆಯೋಜಿಸಿದೆ.
IISc, IIT ಮತ್ತು ವಿವಿಧ ಕೈಗಾರಿಕೆಗಳ ಪ್ರತಿಷ್ಠಿತ ಸಂಶೋಧಕರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲಾಗಿದ್ದು, ಅವರು ವಾಹನಗಳಿಗೆ ಇಂಧನವಾಗಿ ಹೈಡ್ರೋಜನ್ ಉತ್ಪಾದನೆ ಮತ್ತು ಬಳಕೆಯ ಬಗ್ಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತದಾದ್ಯಂತ ವಿವಿಧ ಎಂಜಿನಿಯರಿಂಗ್ ಸಂಸ್ಥೆಗಳ ಅಧ್ಯಾಪಕರು ಮತ್ತು ಕೈಗಾರಿಕೆಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ನವೆಂಬರ್ 6, 2023 ರಂದು ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಲಾಗಿದ್ದು ಸಮಾರಂಭದ ಮುಖ್ಯ ಅತಿಥಿಗಳಾದ ಡಾ. ದಾಸಪ್ಪ ಎಸ್, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿರುವ ಸೆಂಟರ್ ಫಾರ್ ಸಸ್ಟೈನಬಲ್ ಟೆಕ್ನಾಲಜಿಯ ಪ್ರೊಫೆಸರ್ ಮತ್ತು ಮುಖ್ಯಸ್ಥರು ಆಗಿರುವ ಇವರು, ಆಟೋಮೊಬೈಲ್‌ಗಳಲ್ಲಿ ಹೈಡ್ರೋಜನ್ IC ಇಂಜಿನ್‌ಗಳ ಬಳಕೆಯು ಹವಾಮಾನ ಬದಲಾವಣೆಗೆ ಬಹುಮಟ್ಟಿಗೆ ಕಾರಣವಾಗಿರುವ ಕಾರ್ಬನ್ ಆಕ್ಸೈಡ್‌ಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು..
BMSIT&M ನ ಪ್ರಾಂಶುಪಾಲರಾದ ಡಾ. ಮೋಹನ್ ಬಾಬು ಜಿ ಎನ್, ಸಂಸ್ಥೆಯು ಸುಸ್ಥಿರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಪೋಷಿಸುವ ಸ್ಪಷ್ಟ ದೃಷ್ಟಿಯನ್ನು ಹೊಂದಿದೆ ಎಂದು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಾ.ಅನಿಲ್ ಜಿ.ಎನ್.- ಉಪ ಪ್ರಾಂಶುಪಾಲರು, ಡಾ.ಎಚ್.ಕೆ.ಗೋವಿಂದರಾಜು,- ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಖ್ಯಸ್ಥ ಡಾ.ಕೆ.ಎಂ.ಸತೀಶ್ ಕುಮಾರ್ – ಡೀನ್ ಅಕಡೆಮಿಕ್ ಉಪಸ್ಥಿತರಿದ್ದರು.
ಬಯಲು ಸಿಂಹ ಕನ್ನಡ ದಿನಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗೆ ಜಾಹೀರಾತು ನೀಡಲು ಸಂಪರ್ಕಿಸಿ
9845085793
7349337989
9035282296