.

ಯಲಹಂಕ : ಯಲಹಂಕ ಕ್ಷೇತ್ರ ವ್ಯಾಪ್ತಿಯ ಅರಕೆರೆ ಗ್ರಾ.ಪಂ. ನೂತನ ಉಪಾಧ್ಯಕ್ಷರಾಗಿ ಮಾರಸಂದ್ರ ಗ್ರಾಮದ ಎಂ.ವಿ.ಪದ್ಮ ಮುನಿಕೃಷ್ಣ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅರಕೆರೆ ಗ್ರಾ.ಪಂ.ನಲ್ಲಿ ಒಟ್ಟು 22 ಸದಸ್ಯರಿದ್ದು, ಉಪಾಧ್ಯಕ್ಷರ ಆಯ್ಕೆಗಾಗಿ ಬುಧವಾರ ನಡೆದ ಪ್ರಕ್ರಿಯೆಯಲ್ಲಿ ಯಾವ ಪ್ರತಿಸ್ಪರ್ಧಿ ಗಳು ಕಣದಲ್ಲಿ ಇಲ್ಲದ ಕಾರಣ ಎಂ.ವಿ.ಪದ್ಮ ಮುನಿಕೃಷ್ಣ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಅವರು ‘ಯಲಹಂಕ ಶಾಸಕರಾದ ಎಸ್ ಆರ್ ವಿಶ್ವನಾಥ್ ರವರ ಮಾರ್ಗದರ್ಶನದಲ್ಲಿ, ಗ್ರಾ.ಪಂ. ಅಧ್ಯಕ್ಷರೊಡಗೂಡಿ, ಎಲ್ಲಾ ಸದಸ್ಯರ ವಿಶ್ವಾಸದೊಂದಿಗೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಮುನಿಲಕ್ಷ್ಮಮ್ಮ ಪರಶುರಾಮ್, ಬಿಜೆಪಿ ಮುಖಂಡರಾದ ಎಸ್ ಎನ್ ರಾಜಣ್ಣ, ಸತೀಶ್ ಕಡತನಮಲೆ, ಚೊಕ್ಕನಹಳ್ಳಿ ವೆಂಕಟೇಶ್, ಜಗದೀಶ್, ಮುನಿದಾಸಪ್ಪ, ರಮೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಕೆ.ಆರ್.ತಿಮ್ಮೇಗೌಡ, ಲಕ್ಷ್ಮೀನಾರಾಯಣಗೌಡ, ಶಶಿಕುಮಾರ್ ಬಿ.ಸಿ., ಗ್ರಾ.ಪಂ. ಸದಸ್ಯರಾದ ರಾಮಯ್ಯ, ಶಿಲ್ಪಾ, ಮಂಜುಳ ಜಿ., ರಾಮಲ್ಲಪ್ಪ, ಪವನ್ ಕುಮಾರ್, ಮಂಜುಳ, ಚನ್ನಪ್ಪ, ಅರಸೇಗೌಡ, ಆಂಜಿನಮ್ಮ, ಶಾಂತಮ್ಮ, ಮುನಿಲಕ್ಷ್ಮಮ್ಮ, ಗಾಯತ್ರಿ, ನೇತ್ರಾವತಿ, ಮಂಜುನಾಥ್, ಚಿಕ್ಕಮುನಿಯಪ್ಪ, ಪ್ರಕಾಶ್, ಭಾಗ್ಯಮ್ಮ ಸೇರಿದಂತೆ ಇನ್ನಿತರರಿದ್ದು, ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *