
ದಿನಾಂಕ 1-3 – 2024 ಶುಕ್ರವಾರ 6.00 ಗಂಟೆಗೆ ಎಂ ಜಿ ರಸ್ತೆಯಲ್ಲಿರುವ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡುವ ಪ್ರಶಸ್ತಿ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದ ಕ್ರಿಯಾಶೀಲ ಪ್ರಾಂಶಪಾಲರಾದ ಡಾ. ಶೀಲಾ ದೇವಿ ಎಸ್ ಮಳೀಮಠ ಅವರಿಗೆ ನೀಡಿ ಗೌರವಿಸಲಾಗಿದೆ.. ಕಳೆದ 34 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಬೋಧನೆಯ ಮೂಲಕ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿ.ಅವರಿಗೆ ಆತ್ಮವಿಶ್ವಾಸ ಬಲಗೊಳ್ಳುವಂತೆ ಸದಾ ಅವರೊಡನೆ ಭಾವನಾತ್ಮಕವಾಗಿದ್ದು. ಅವರನ್ನುಬೆಳೆಸಿದ ಇವರ ಶಿಕ್ಷಕವೃತ್ತಿ ಗೌರವಕ್ಕಾಗಿ ಹಾಗೂ 13 ಎಂಫಿಲ್ ವಿದ್ಯಾರ್ಥಿಗಳು II ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಉನ್ನತ ಶಿಕ್ಷಣಕ್ಕೂ ತಮ್ಮನ್ನು ತಾವು ತೊಡಗಿಸಿಕೊಂಡು ಸಧ್ಯ ಬಸವೇಶ್ವರ ಕಾಲೇಜಿನಲ್ಲಿ ೧೦ ತಿಂಗಳನಲ್ಲಿ ತಮ್ಮ ಪ್ರಾಂಶುಪಾಲರ ಕರ್ತವ್ಯಶೀಲತೆಯಲ್ಲಿ ಶೈಕ್ಷಣಿಕ ಭೌಧ್ಧಿಕ ಸಾಂಸ್ಕೃತಿಕ-ಸಾಮಾಜಿಕ-ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುತ್ತಿರುವ.. ಇಎಲ್ ಸಿ – ಎನ್ಎಸ್ಎಸ್ -ರೆಡರಿಬ್ಬನ್ ಕ್ಲಬ್. ಕನ್ನಡ ಸಂಘದ ಕಾರ್ಯಕ್ರಮಗಳನ್ನು ಆಯೋಜಿಸಿ ಗುಣಾತ್ಮಕತೆಗೆ ಶ್ರಮಿಸುತ್ತಿರುವ ಇವರು ಮಾದರಿ ಪ್ರಾಂಶುಪಾಲರೆಂದು ಇವರ ಸಾಧನೆಯನ್ನು ಪರಿಗಣಿಸಿ “ಶಿಕ್ಷಕರತ್ನ” ಪ್ರಶಸ್ತಿಯನ್ನು ಸಾಧಕಿಗೆ ನೀಡಲಾಗಿದೆ. ಎ೦ದು ಇವರನ್ನು ಅಭಿನಂದಿಸುತ್ತೇವೆ