ಯಲಹಂಕ :- ಯಲಹಂಕ ತಾಲೂಕು ಇಟ್ಟಿಗೆ ಫ್ಯಾಕ್ಟರಿ ಬಳಿ ಇರುವಂತಹ ಸೆಂಟ್ ಫಾಲ್ ಇಂಗ್ಲಿಷ್ ಶಾಲೆಯಲ್ಲಿ ಅದ್ದೂರಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದಂತಹ ಮಹಾರಾಜ ರವರು ಮಾತನಾಡುತ್ತಾ ಈ ವರ್ಷ ನಮ್ಮ ಶಾಲೆಯಿಂದ ಪಾಸಾಗಿ ಹೋಗುತ್ತಿರುವ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು. ಪ್ರೀತಿಯ ವಿದ್ಯಾರ್ಥಿಗಳೇ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳು ಪಡೆಯುವ ಮುಖಾಂತರ ಶಾಲೆಗೆ ತಂದೆ-ತಾಯಿಗಳಿಗೆ ಕೀರ್ತಿಯನ್ನು ತಂದುಕೊಡಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಮುಟುಕುಗೊಳಿಸಬೇಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ನಿಮ್ಮ ಕೈಯಲ್ಲಿದೆ ತಮ್ಮ ಮಕ್ಕಳನ್ನ ಉನ್ನತ ವಿದ್ಯಾಭ್ಯಾಸ ಮಾಡಿಸಿ ಎಂದು ಪೋಷಕರಿಗೆ ತಿಳಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಕ್ಸ್ಫರ್ಡ್ ಶಾಲೆಯ ಮಾಲೀಕರು ಆದಂತಹ ಸುರೇಶ್ ರವರು ಮಾತನಾಡುತ್ತಾ ಪೋಷಕರು ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿದ್ದು ಅಷ್ಟೇ ಅಲ್ಲ ಜೊತೆಗೆ ನಮ್ಮ ಮಕ್ಕಳು ಎಷ್ಟರ ಮಟ್ಟಿಗೆ ಓದುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಶಾಲೆಗೆ ಬರುವುದು ಅಷ್ಟೇ ಮುಖ್ಯ. ಜೊತೆಗೆ ಈಗಿನ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡುವ ಮುಖಾಂತರ ಅವರ ಭವಿಷ್ಯವನ್ನು ನಾವೇ ಹಾಳು ಮಾಡುತ್ತಿದ್ದೇವೆ. ಆದ್ದರಿಂದ ಮಗುವಿನ ಪ್ರತಿಯೊಂದು ಹೆಜ್ಜೆಯನ್ನು ಪೋಷಕರು ಗಮನಿಸಬೇಕಾಗಿದೆ ಎಂದು ಪೋಷಕರಿಗೆ ಕಿವಿ ಮಾತು ತಿಳಿಸಿದರು. ವಿವಿಧ ಇಂಟರ್ನ್ಯಾಷನಲ್ ಶಾಲೆಗಳಲ್ಲಿ ಕೆಲಸ ಮಾಡಿರುವಂತಹ ಮರಿಯ ಮೇಡಂ ಅವರು ನಿಮಗೆ ಪ್ರಾಂಶುಪಾಲರಾಗಿ ಸಿಕ್ಕಿರುವುದು ನಿಮ್ಮ ಸೌಭಾಗ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅತಿಥಿಗಳಾಗಿ ಸಿಲ್ವನ್, ಡಾ. ರಫಿಯಾ , ಆನಂದ, ಗುರುಪ್ರಸಾದ್, ಮತ್ತು ಶಾಲೆಯ ಎಲ್ಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *