• ಸಮಾವೇಶದಲ್ಲಿ ಸ್ತ್ರೀ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ವೃತ್ತಿಪರ ಆರೋಗ್ಯ ತಜ್ಞರು ಮತ್ತು ಕಾರ್ಪೊರೇಟ್ ನಾಯಕರು ಸಂವಾದ ನಡೆಸಿದರು ಮತ್ತು ಕಾರ್ಯಕ್ರಮವು ಪ್ರಾಯೋಗಿಕ ಸೆಷನ್ ಗಳನ್ನು ಒಳಗೊಂಡಿತ್ತು

ಬೆಂಗಳೂರು, 17 ಮಾರ್ಚ್ 2024: ಆರೋಗ್ಯ ಮತ್ತು ಕ್ಷೇಮ ಕುರಿತ ಜ್ಞಾನ ನೀಡುವ ಪ್ಲಾಟ್ ಫಾರ್ಮ್ ಆಗಿರುವ ಹ್ಯಾಪಿಯೆಸ್ಟ್ ಹೆಲ್ತ್ “ಹ್ಯಾಪಿಯೆಸ್ಟ್ ಹರ್: ಮಹಿಳೆಯರ ಯೋಗಕ್ಷೇಮ ಸಮಾವೇಶ” ಎಂಬ ಕಾರ್ಯಕ್ರಮವನ್ನು ಇಂದು ಬೆಂಗಳೂರಿನ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ಆಯೋಜಿಸಿತ್ತು. ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಮಹಿಳೆಯರ ಜೀವನದ ಅಂಶಗಳ ಕುರಿತು ಚರ್ಚೆಗಳು ನಡೆದುವು. ಪ್ರಖ್ಯಾತ ವಾಗ್ಮಿಗಳು ಆರೋಗ್ಯ, ಜೀವನಶೈಲಿ ಮತ್ತಿತರ ವಿಚಾರಗಳ ಕುರಿತು ಒಳನೋಟಗಳನ್ನು ನೀಡಿದರು.

ಮಹಿಳೆಯರ ಆರೋಗ್ಯದ ಕುರಿತು ಇತ್ತೀಚೆಗೆ ಹೆಚ್ಚು ಚರ್ಚೆಯಾಗುತ್ತಿರುವುದರಿಂದ, ಸಮಾವೇಶವು ಹಲವು ವಿಚಾರಗಳಿಗೆ ಸ್ಪಷ್ಟತೆಯನ್ನು ಒದಗಿಸಿತು ಮತ್ತು ತಪ್ಪು ಕಲ್ಪನೆಗಳನ್ನು ಪರಿಹರಿಸುವಂತಹ ಪ್ರಮುಖ ವಿಷಯಗಳ ಚರ್ಚೆಗಳನ್ನು ಹೊಂದಿತ್ತು. ಜ್ಞಾನ ಪಸರಿಸುವ ಉದ್ದೇಶದ ಈ ಕಾರ್ಯಕ್ರಮವು ಭಾಗವಹಿಸಿದವರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಮೌಲ್ಯಯುತವಾದ ಮಾಹಿತಿ ಮತ್ತು ಒಳನೋಟಗಳನ್ನು ಒದಗಿಸಿತು. ಎಲ್ಲಾ ವಯೋಮಾನದ ಮಹಿಳೆಯರನ್ನು ಉದ್ದೇಶಿಸಲಾದ ಚರ್ಚೆಗಳು ಮತ್ತು ಸಂವಾದಾತ್ಮಕ ಸೆಷನ್ ಗಳು ನಡೆದವು. ಸಂತಾನೋತ್ಪತ್ತಿ ಆರೋಗ್ಯದಿಂದ ಹಿಹಿಡಿದು ವ್ಯಾಯಾಮ, ಮಾನಸಿಕ ಆರೋಗ್ಯದವರೆಗಿನ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಲಾಯಿತು. ದಿನಪೂರ್ತಿ ಶಿಕ್ಷಣ ಒದಗಿಸಲಾಯಿತು. ಸ್ಫೂರ್ತಿದಾಯಕ ಮಾತುಕತೆ ಒಳಗೊಂಡಿತ್ತು. ಮಹಿಳೆಯರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಸ್ಪಷ್ಟವಾದ, ನಂಬಿಕಾರ್ಹವಾದ, ಸ್ಫೂರ್ತಿ ನೀಡುವಂತಹ ಉತ್ತರಗಳನ್ನು ನೀಡಿದರು.

ಹ್ಯಾಪಿಯೆಸ್ಟ್ ಹೆಲ್ತ್‌ ಅಧ್ಯಕ್ಷ ಮತ್ತು ಸಿಇಓ ಆದ ಶ್ರೀ. ಅನಿಂದ್ಯಾ ಚೌಧರಿ, “ಹೆಚ್ಚುತ್ತಿರುವ ಒತ್ತಡದ ಜಗತ್ತಿನಲ್ಲಿ ಹ್ಯಾಪಿಯೆಸ್ಟ್ ಹೆಲ್ತ್ ಮಹಿಳೆಯರ ಸ್ವಾಸ್ಥ್ಯವನ್ನು ಹೆಚ್ಚು ಗೌರವಿಸುತ್ತದೆ. ಮಹಿಳೆಯರು ವೃತ್ತಿಪರ ಮತ್ತು ವೈಯಕ್ತಿಕ ರಂಗಗಳಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸುವಾಗ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಮಹಿಳೆಯರ ಜೀವನದ ಕುರಿತು ಹೆಚ್ಚಿನ ಸಂವಾದಗಳನ್ನು ನಡೆಸಲು ಮತ್ತು ಅವರು ಸ್ವಯಂ-ಆರೈಕೆಯಲ್ಲಿ ಹೇಗೆ ಸಮಯವನ್ನು ಕಳೆಯಬಹುದು ಎಂಬುದರ ಕುರಿತು ಜಾಗೃತಿ ಮೂಡಿಸುವುದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ ಎಂದು ಹೇಳಿದರು.

ಬೆಂಗಳೂರಿನ ಕ್ಲೌಡ್‌ನೈನ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ಅರುಣಾ ಮುರಳೀಧರ್ ಅವರು ತೂಕ ನಷ್ಟ, ಜೀವನಶೈಲಿ, ಪಿಸಿಓಎಸ್ ಮತ್ತು ಹೆರಿಗೆ ಕಾಳಜಿಗಳ ಕುರಿತು ಮುಖ್ಯ ಭಾಷಣ ಮಾಡಿದರು. ಅವರು ಭೇಟಿ ಮಾಡುವ ಮೂರರಿಂದ ನಾಲ್ಕು ಮಹಿಳೆಯರಲ್ಲಿ ಒಬ್ಬರಿಗೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಇದೆ, ಅದು ಇತ್ತೀಚಿನ ದಿನಗಳಲ್ಲು ತುಂಬಾ ಸಾಮಾನ್ಯವಾಗುತ್ತಿದೆ ಎಂದು ಅವರು ತಿಳಿಸಿದರು.

ಇದರ ನಂತರ ದೇಬ್ಜಾನಿ ಮುಖರ್ಜಿ (ಉಪಾಧ್ಯಕ್ಷರು, ಜಾಗತಿಕ ಕಾರ್ಯತಂತ್ರದ ಮೈತ್ರಿಗಳು, ಟ್ಯಾಲೆಂಟ್‌ಸ್ಪ್ರಿಂಟ್), ಡಾ ಸಾಕ್ಷಿ ಅರೋರಾ (ಪಿಎಚ್‌ಡಿ-ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ನ್ಯಾಷನಲ್ ಬೋರ್ಡ್ ಸರ್ಟಿಫೈಡ್ ಹೆಲ್ತ್ ಕೋಚ್), ಡಾ. ಮಾಧುರಿ ವಿದ್ಯಾಶಂಕರ್. ಪಿ (ಸಮಾಲೋಚಕ ಸ್ತ್ರೀರೋಗ ತಜ್ಞೆ, ಹಿಸ್ಟರೊಸ್ಕೋಪಿಕ್ ಮತ್ತು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಕಿ, ಮದರ್‌ಹುಡ್ ಆಸ್ಪತ್ರೆಗಳು, ಬೆಂಗಳೂರು), ಮತ್ತು ಸುನೀಲಾ ಬೆಂಜಮಿನ್ (ನಿರ್ದೇಶಕರು, ನೀಲ್ಸೆನಿಕ್ ಬೇಸಸ್) ಮನೆ, ಕೆಲಸ ಮತ್ತು ನಾನು ಎಂಬ ಮೂರು ವಿಚಾರಗಳ ಕುರಿತು ಮಾತನಾಡಿದರು.

ಬೆಂಗಳೂರಿನ ಸೈಟ್‌ಕೇರ್ ಹಾಸ್ಪಿಟಲ್ಸ್‌ನಲ್ಲಿ ಹಿರಿಯ ಸಲಹೆಗಾರ್ತಿ ಮತ್ತು ಬ್ರೆಸ್ಟ್ ಆಂಕೊಲಾಜಿ ನಿರ್ದೇಶಕಿ ಡಾ ಪೂವಮ್ಮ ಸಿ ಯು ಅವರು ವಿವಿಧ ಕ್ಯಾನ್ಸರ್‌ಗಳಲ್ಲಿ ಜೀವನಶೈಲಿ ವಹಿಸುವ ಪಾತ್ರದ ಕುರಿತು ಕ್ಯಾನ್ಸರ್ ಜಾಗೃತಿ ಕುರಿತು ಮಾತನಾಡಿದರು. ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಎಂಬ ವಿಷಯದ ಕುರಿತು ಮಾತನಾಡಿದ ಅವರು, “ಸಾಮಾನ್ಯವಾಗಿ, ಪಶ್ಚಿಮದಲ್ಲಿ, ಸುಮಾರು 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಕ್ಯಾನ್ಸರ್ ಸಂಭವಿಸುತ್ತದೆ. ಆದರೆ ನೀವು ಐಸಿಎಂಆರ್ ನೀಡುವ ಅಂಕಿಅಂಶಗಳನ್ನು ನೋಡಿದರೆ, ಸುಮಾರು 48%ರಷ್ಟು ಸ್ತನ ಕ್ಯಾನ್ಸರ್ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತದೆ ಎಂಬುದು ತಿಳಿಯುತ್ತದೆಎಂದು ಹೇಳಿದರು.

ಮಣಿಪಾಲ್ ಹಾಸ್ಪಿಟಲ್ಸ್‌ ನ ಕನ್ಸಲ್ಟೆಂಟ್-ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ರಂಜನ್ ಶೆಟ್ಟಿ, ಡಾ.ಸುನೀತಾ ಮಹೇಶ್ (ವೈದ್ಯಕೀಯ ನಿರ್ದೇಶಕಿ, ಹಿರಿಯ ಸಲಹೆಗಾರ್ತಿ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಮಿಲನ್ ಫರ್ಟಿಲಿಟಿ ಸೆಂಟರ್, ಬೆಂಗಳೂರು), ಮತ್ತು ಮರಗತವಳ್ಳಿ ಇನ್ಬಮುತ್ತಯ್ಯ (ಹಿರಿಯ ಸಲಹೆಗಾರ, ಪ್ಯಾರಿಟಿ ಕನ್ಸಲ್ಟಿಂಗ್) ಘನತೆವೆತ್ತ ವೃದ್ಧಾಪ್ಯ(ಗ್ರೇಸ್ ಫುಲ್ ಏಜಿಂಗ್) ಎಂಬ ವಿಚಾರ ಗೋಷ್ಠಿಯ ನೇತೃತ್ವ ವಹಿಸಿದ್ದರು. ವಯಸ್ಸಾಗುವಿಕೆ ವಿಷಯದ ಬಗ್ಗೆ ಆಕರ್ಷಕವಾಗಿ ಮಾತುಕತೆ ನಡೆಯಿತು ಮತ್ತು ವಯಸ್ಸಾದವರ ಬಗ್ಗೆ ಸರಿಯಾದ ಗ್ರಹಿಕೆಯನ್ನು ಹೊಂದಲು ಮತ್ತು ಜನರ ಜೀವನಕ್ಕೆ ಬೇಕಾದ ಜ್ಞಾನವನ್ನು ಹಂಚುವ ಕೆಲಸವನ್ನು ಭಾಷಣಕಾರರು ಮಾಡಿದರು. ಘನತೆಯ ವೃದ್ಧಾಪ್ಯಕ್ಕೆ ಕೊಡುಗೆ ನೀಡುವ ಜೀವನಶೈಲಿಯ ಕುರಿತೂ ಚರ್ಚಿಸಲಾಯಿತು. ಜೊತೆಗೆ ಮಹಿಳೆಯರು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಈ ಹಂತಕ್ಕೆ ತಮ್ಮನ್ನು ಹೇಗೆ ಸಿದ್ಧಪಡಿಸಿಕೊಳ್ಳಬಹುದು ಎಂಬುದರ ಕುರಿತು ಸಲಹೆಗಳನ್ನು ನೀಡಲಾಯಿತು. 

ಸುದ್ದಿ ಹಾಗೂ ಜಾರಿತುಗಳಿಗೆ ಸಂಪರ್ಕಿಸಿ

9845085793.    7349337989

Leave a Reply

Your email address will not be published. Required fields are marked *