


- ಭಾರತದಲ್ಲಿನ 12 ಕ್ಯಾಂಪಸ್ಗಳಾದ್ಯಂತ ನಡೆದ ಪ್ರೈಡ್ ವಾಕ್ ನಲ್ಲಿ ಜಿವಿ ವರ್ನೋವಾದ 1,100ಕ್ಕೂ ಹೆಚ್ಚು ಉದ್ಯೋಗಿಗಳು, ಪಾಲುದಾರರು ಮತ್ತು ಸಮುದಾಯ ಸದಸ್ಯರು ಭಾಗವಹಿಸಿದ್ದರು
ಬೆಂಗಳೂರು, ಜೂನ್ 11, 2024: ಜಿಇ ವರ್ನೋವಾ ಭಾರತದಲ್ಲಿನ ತನ್ನ ಏಳು ಕ್ಯಾಂಪಸ್ಗಳಲ್ಲಿ ಆಯೋಜಿಸಿದ್ದ ಪ್ರೈಡ್ ವಾಕ್ ನಲ್ಲಿ ಎಲ್ಜಿಬಿಟಿಕ್ಯೂಎಐ+ ಸಮುದಾಯವನ್ನು ಒಳಗೊಳ್ಳುವ ಮೂಲಕ ತನ್ನ ಅಚಲ ಬದ್ಧತೆಯನ್ನು ಪ್ರದರ್ಶಿಸಿದೆ. ಬೆಂಗಳೂರು, ಹೈದರಾಬಾದ್, ನೋಯ್ಡಾ, ಚೆನ್ನೈ, ದುರ್ಗಾಪುರ ಮತ್ತು ವಡೋದರ ಮುಂತಾದೆಡೆ ನಡೆದ ಪ್ರೈಡ್ ವಾಕ್ ಗಳಲ್ಲಿ ಜಿಇ ವರ್ನೋವಾದ 1,100ಕ್ಕೂ ಹೆಚ್ಚು ಉದ್ಯೋಗಿಗಳು, ಪಾಲುದಾರರು ಮತ್ತು ಸಮುದಾಯದ ಸದಸ್ಯರು ಭಾಗವಹಿಸಿದ್ದರು.
ಪ್ರೈಡ್ ವಾಕ್ ಕುರಿತು ಮಾತನಾಡಿದ ಜಿಇ ವರ್ನೋವಾದ ಭಾರತದ ಸಿಟಿಓ ಶಿಲ್ಪಾ ಗುಪ್ತಾ, “ಪ್ರತಿಯೊಬ್ಬರೂ ಮುಖ್ಯವೆಂದು ಗೌರವಿಸುವಂತಹ ಒಳಗೊಳ್ಳುವಿಕೆಯ ಕೆಲಸದ ವಾತಾವರಣವನ್ನು ಉಂಟು ಮಾಡುವ ಮೂಲಕ ನಮ್ಮ ಪ್ರತಿಭೆಗಳು ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಕೆಲಸ ಮಾಡಬಹುದು ಮತ್ತು ನಾವೀನ್ಯತೆ ಸಾಧಿಸಬಹುದು ಎಂಬುದನ್ನು ನಾವು ಬಲವಾಗಿ ನಂಬುತ್ತೇವೆ. ಪ್ರೈಡ್ ವಾಕ್ ಎಲ್ಲಾ ರೀತಿಯ ವ್ಯಕ್ತಿಗಳ ವಿಶಿಷ್ಟ ಕೊಡುಗೆಗಳನ್ನು ಸಂಭ್ರಮಿಸುವ ವಾತಾವರಣವನ್ನು ರಚಿಸುವ ನಮ್ಮ ಬದ್ಧತೆಯ ಒಂದು ಸಂಕೇತವಾಗಿದೆ. ಈ ಉಪಕ್ರಮವು ಸಕಾರಾತ್ಮಕ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಪ್ರೈಡ್ ಅಲೈಯನ್ಸ್ ನೇತೃತ್ವದಲ್ಲಿ ಆಯೋಜಿಸಿದ ಅನೇಕ ಕಾರ್ಯಕ್ರಮಗಳ ವಿಸ್ತೃತ ರೂಪವಾಗಿದೆ. ನಾವು ಪ್ರೈಡ್ ತಿಂಗಳನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಎಲ್ಜಿಬಿಟಿಕ್ಯೂಎಐ+ ಸಮುದಾಯದ ಜೊತೆಗಿದ್ದೇವೆ ಎಂಬ ಭಾವವನ್ನು ವ್ಯಕ್ತಪಡಿಸುವ ಮೂಲಕ ನಮ್ಮ ಉದ್ಯೋಗಿಗಳ ಸಕಾರಾತ್ಮಕ ಮನೋಭಾವಕ್ಕೆ ಸಾಕ್ಷಿಯಾಗುವುದು ನಿಜಕ್ಕೂ ಗೌರವವಾಗಿದೆ” ಎಂದು ಹೇಳಿದರು.
ಈ ಪ್ರೈಡ್ ತಿಂಗಳಲ್ಲಿ ಜಿಇ ವರ್ನೋವಾ ಇಂಡಿಯಾದಲ್ಲಿ ಕಂಪನಿಯೊಳಗೆ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಹಲವಾರು ಸರಣಿ ಕಾರ್ಯಕ್ರಮಗಳು ನಡೆಯಲಿವೆ. ಅದರ ಭಾಗವಾದ ಪ್ರೈಡ್ ವಾಕ್ ನಲ್ಲಿ ಮುಕ್ತ ಸಂವಾದ, ಸತ್ಯ ಉದಾಹರಣೆಗಳ ಹಂಚಿಕೊಳ್ಳುವಿಕೆ ಮತ್ತು ಎಲ್ಜಿಬಿಟಿಕ್ಯೂಎಐ+ ಸಮುದಾಯಗಳ ವೈವಿಧ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದ್ದು, ಜಿಇ ವರ್ನೋವಾದ ಬದ್ಧತೆಯನ್ನು ಸಾರಲಿದೆ. ಎಲ್ಜಿಬಿಟಿಕ್ಯೂಎಐ+ ಸಮುದಾಯದ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ಆ ಕುರಿತು ಸಂವಾದಗಳನ್ನು ಉಂಟುಮಾಡುವ ಉದ್ದೇಶದಿಂದ ವಿವಿಧ ಕ್ಯಾಂಪಸ್ ಗಳಲ್ಲಿ ಉದ್ಯೋಗಿಗಳಿಗಾಗಿ ವೈಯಕ್ತಿಕವಾಗಿ ಮತ್ತು ಹೈಬ್ರಿಡ್ ಆಗಿ ಸಂವೇದನಾಶೀಲ ಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ. ಹೆಚ್ಚುವರಿಯಾಗಿ, ಕಂಪನಿಯು ಎಲ್ಜಿಬಿಟಿಕ್ಯೂಎಐ+ ಸಮುದಾಯದ ಸದಸ್ಯರು ಮತ್ತು ಎನ್ ಜಿ ಓಗಳ ಸದಸ್ಯರನ್ನು ಆಹ್ವಾನಿಸಿ ಅವರಿಂದ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ತಂಡಗಳ ನಡುವೆ ಸಂಪರ್ಕ ಏರ್ಪಡುವಂತೆ ಮಾಡಲಾಗುತ್ತದೆ.
ಪ್ರೈಡ್ ಅಲೈಯನ್ಸ್ ಜಿಇ ವರ್ನೋವಾದ ಎಂಪ್ಲಾಯೀ ರಿಸೋರ್ಸ್ ಗ್ರೂಪ್ ಗಳಲ್ಲಿ (ಇ ಆರ್ ಜಿ) ಒಂದಾಗಿದ್ದು, ಅದು ವೈವಿಧ್ಯಮಯತೆ ಮತ್ತು ಒಳಗೊಳ್ಳುವಿಕೆಯ ವಾತಾವರಣವನ್ನು ಉಂಟುಮಾಡಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಗ್ರೂಪ್ ಎಲ್ಜಿಬಿಟಿಕ್ಯೂಎಐ+ ಸಮುದಾಯದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ ಮತ್ತು ಎಲ್ಲರೂ ಒಳಗೊಳ್ಳುವ ಕೆಲಸದ ವಾತಾವರಣವನ್ನು ರಚಿಸಲು ನೆರವು ಮತ್ತು ಸಲಹೆಯನ್ನು ನೀಡುತ್ತದೆ. ಈ ಅಲಯನ್ಸ್ ಈಗ ಭಾರತದಲ್ಲಿ 250ಕ್ಕೂ ಹೆಚ್ಚು ಮಿತ್ರ ಸಂಸ್ಥೆಗಳನ್ನು ಹೊಂದಿದ್ದು, ಅವರು ಸಂವೇದನಾಶೀಲವಾಗಿ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಹಾಗೂ ಕೆಲಸದ ಸ್ಥಳದಲ್ಲಿ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ, ಜಿಇ ವರ್ನೋವಾ ಎಲ್ಜಿಬಿಟಿಕ್ಯೂಎಐ+ ಸಮುದಾಯವನ್ನು ಬೆಂಬಲಿಸಲು ಈ ಕೆಳಗಿನ ಉಪಕ್ರಮಗಳನ್ನು ನಡೆಸುತ್ತಿದೆ:
· ಜಿಇ ವರ್ನೋವಾ ಲಿಂಗ ಸಮಾನತೆಯನ್ನು ಉತ್ತೇಜಿಸಲು ಮತ್ತು ಒಳಗೊಳ್ಳುವಿಕೆಯ ಕೆಲಸದ ವಾತಾವರಣವನ್ನು ಉಂಟು ಮಾಡಲು ಹಲವಾರು ಪ್ರಯತ್ನಗಳನ್ನು ನಡೆಸುತ್ತಿದೆ. ಪ್ರಸ್ತುತ ಕಂಪನಿಯು ಎಲ್ಜಿಬಿಟಿಕ್ಯೂಎಐ+ ಸಮುದಾಯಕ್ಕೆ ಬೆಂಬಲವನ್ನು ಒದಗಿಸುವ ಸಲುವಾಗಿ ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿದೆ
· ಸೂಕ್ಷ್ಮತೆ ಮತ್ತು ಜಾಗೃತಿ ಮೂಡಿಸುವಿಕೆ ಹಾಗಾ ಸಂವಾದಾತ್ಮಕ ಸೆಷನ್ಗಳನ್ನು ನಿಯಮಿತವಾಗಿ ವೈಯಕ್ತಿಕ ನಿಟ್ಟಿನಲ್ಲಿ ಮತ್ತು ವರ್ಚುವಲ್ ಸ್ವರೂಪದಲ್ಲಿ ನಡೆಸಲಾಗುತ್ತದೆ. ಎಲ್ಲಾ ಉದ್ಯೋಗಿಗಳೂ ಈ ಸೆಷನ್ ಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲಾಗುತ್ತದೆ. ಹಿರಿಯ ನಾಯಕತ್ವ, ಜನ ನಾಯಕರು ಮತ್ತು ಮಾನವ ಸಂಪನ್ಮೂಲ ತಂಡಕ್ಕೆ ವಿಶೇಷ ತರಬೇತಿ ನೀಡಲು ವಿಶೇಷ ಗಮನ ನೀಡಲಾಗುತ್ತದೆ. ಈ ಸೆಷನ್ ಗಳನ್ನು ಮಾರಾಟಗಾರ ಪಾಲುದಾರರಿಗೂ (ವೆಂಡರ್ ಪಾರ್ಟ್ನರ್) ಒದಗಿಸಲಾಗುತ್ತದೆ.
· ಅವಲಂಬಿತರಾಗಿರುವ ಸಲಿಂಗ ಸಂಗಾತಿಗಳಿಗೆ ವೈದ್ಯಕೀಯ ವಿಮೆ ಒದಗಿಸಲಾಗುತ್ತದೆ.
· ಜಿಇ ವರ್ನೋವಾದಲ್ಲಿನ ಟ್ರಾನ್ಸ್ ಜೆಂಡರ್ ಎಂಪ್ಲಾಯೀ ಪ್ರೊಟೆಕ್ಷನ್ ಪಾಲಿಸಿ ಸೂಕ್ತವಾದ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ಒದಗಿಸುವಂತೆ ನೋಡಿಕೊಳ್ಳುತ್ತದೆ.
· ಜಿಇ ವರ್ನೋವಾ ಘಟಕಗಳಲ್ಲಿ ಲಿಂಗ ತಟಸ್ಥ (ಜೆಂಡರ್ ನ್ಯೂಟ್ರಲ್) ವಾಶ್ರೂಮ್ ಗಳನ್ನು ಸ್ಥಾಪಿಸಲಾಗಿದೆ.
· ಜಿಇ ವರ್ನೋವಾ ಎಂಪ್ಲಾಯೀ ರಿಸೋರ್ಸ್ ಗ್ರೂಪ್ ಗಳ ಮೂಲಕ ತನ್ನ ಉದ್ಯೋಗಿಗಳನ್ನು ಉದ್ಯೋಗಿ ನೆಟ್ವರ್ಕ್ ಗಳಿಸಲು ಪ್ರೋತ್ಸಾಹಿಸುತ್ತದೆ ಮತ್ತು ವಿಶೇಷ ಉದ್ಯೋಗಿ ಸಹಾಯ ಕಾರ್ಯಕ್ರಮದ ಮೂಲಕ ಬೆಂಬಲವನ್ನು ನೀಡುತ್ತದೆ.
ಜಿಇ ವರ್ನೋವಾ ಸಂಸ್ಥೆಯು ಸಮಾನ ಅವಕಾಶ ಒದಗಿಸುವ ಉದ್ಯೋಗದಾತ ಎಂಬ ಹೆಗ್ಗಳಿಕೆ ಗಳಿಸಿಕೊಂಡಿದೆ. ಜನಾಂಗ, ಬಣ್ಣ, ಧರ್ಮ, ರಾಷ್ಟ್ರ ಅಥವಾ ಜನಾಂಗೀಯ ಮೂಲ, ಲಿಂಗ, ಲೈಂಗಿಕ ದೃಷ್ಟಿಕೋನ, ಲಿಂಗ ಅಸ್ಮಿತೆ ಅಥವಾ ಅಭಿವ್ಯಕ್ತಿ, ವಯಸ್ಸು, ಅಂಗವೈಕಲ್ಯ ಅಥವಾ ಕಾನೂನಿನಿಂದ ರಕ್ಷಿಸಲ್ಪಟ್ಟ ಇತರ ಗುಣಲಕ್ಷಣಗಳಂತಹ ಅಂಶಗಳನ್ನು ಪರಿಗಣಿಸದೆ ಉದ್ಯೋಗ ಒದಗಿಸುವ ನಿರ್ಧಾರಗಳನ್ನು ನಿಷ್ಪಕ್ಷಪಾತವಾಗಿ ಮಾಡಲಾಗುತ್ತದೆ.
ಜಿಇ ವರ್ನೋವಾ ಕುರಿತು
ಜಿಇ ವರ್ನೋವಾ (NYSE: GEV) ಪವರ್, ವಿಂಡ್ ಮತ್ತು ಎಲೆಕ್ಟ್ರಿಫಿಕೇಶನ್ ವಿಭಾಗಗಳನ್ನು ಒಳಗೊಂಡಿರುವ ಉದ್ದೇಶ-ನಿರ್ಮಿತ ಜಾಗತಿಕ ವಿದ್ಯುತ್ ಕಂಪನಿಯಾಗಿದೆ ಮತ್ತು ಆಕ್ಸಲೇಟರ್ ಬಿಸಿನೆಸ್ ನಿಂದ ಬೆಂಬಲಿತವಾಗಿದೆ. ಪ್ರಪಂಚದ ಹಲವಾರು ಸವಾಲುಗಳನ್ನು ನಿಭಾಯಿಸುವ ಮೂಲಕ 130 ವರ್ಷಗಳ ಅನುಭವವನ್ನು ಹೊಂದಿರುವ ಜಿಇ ವರ್ನೋವಾ ವಿಶ್ವವನ್ನು ವಿದ್ಯುದ್ದೀಕರಿಸುವುದನ್ನು ಮುಂದುವರೆಸುವ ಮೂಲಕ ಶಕ್ತಿಯ ಪರಿವರ್ತನೆ ನಡೆಸುವುದನ್ನು ಮುಂದುವರಿಸಲಿದೆ. ಅದರ ಜೊತೆಗೇ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವತ್ತ ಕಾರ್ಯ ನಿರ್ವಹಿಸುತ್ತಿದೆ. ಜಿಇ ವರ್ನೋವಾ ಸಂಸ್ಥೆಯು ಗ್ರಾಹಕರಿಗೆ ವಿದ್ಯುತ್ ಹೊಂದಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯ, ಸುರಕ್ಷತೆ, ಭದ್ರತೆ ಮತ್ತು ಸುಧಾರಿತ ಜೀವನದ ಗುಣಮಟ್ಟ ಅವಶ್ಯ ಇರುವ ವಿದ್ಯುತ್ ಅನ್ನು ಒದಗಿಸುತ್ತದೆ. ಜಿಇ ವರ್ನೋವಾ ತನ್ನ ಕೇಂದ್ರ ಕಛೇರಿಯನ್ನು ಯುಎಸ್ ನ ಕೇಂಬ್ರಿಡ್ಜ್ ನಲ್ಲಿರುವ ಮಸಾಚುಸೆಟ್ಸ್ ನಲ್ಲಿ ಹೊಂದಿದೆ. ಪ್ರಪಂಚದಾದ್ಯಂತ 100+ ದೇಶಗಳಲ್ಲಿ ಸುಮಾರು 75,000 ಉದ್ಯೋಗಿಗಳನ್ನು ಕಂಪನಿಯು ಹೊಂದಿದೆ. ದಿ ಎನರ್ಜಿ ಟು ಚೇಂಜ್ ದಿ ವರ್ಲ್ಡ್ ಎಂಬ ಉದ್ದೇಶವನ್ನು ಹೊಂದಿರುವ ಜಿಇ ಕಂಪನಿಯ ತಂತ್ರಜ್ಞಾನವು, ಹೆಚ್ಚು ಕೈಗೆಟುಕುವ, ವಿಶ್ವಾಸಾರ್ಹ, ಸುಸ್ಥಿರ ಮತ್ತು ಸುರಕ್ಷಿತ ಇಂಧನ ಭವಿಷ್ಯವನ್ನು ನೀಡಲು ಸಹಾಯ ಮಾಡುತ್ತದೆ.
ಹೆಚ್ಚು ತಿಳಿಯಲು ಭೇಟಿ ಕೊಡಿ: ಜಿಇ ವರ್ನೋವಾ ಮತ್ತು LinkedIn.