
” 6 ವರ್ಷ ರಾಜ್ಯಾಧ್ಯಕ್ಷ ಸೇವೆ ಸಲ್ಲಿಸಿದ್ದು ನನಗೆ ಖುಷಿ ತಂದಿದೆ – ವಿ.ಆನಂದ್ “
ಪೀಣ್ಯ ದಾಸರಹಳ್ಳಿ: ನಮ್ಮ ರಾಷ್ಟ್ರ ಹಿಂದು ರಾಷ್ಟ್ರ ನಾವು ಹಿಂದುಗಳು ಹಿಂದುಗಳ ರಕ್ಷಣೆಗೆ ಹಿಂದು ಪರ ಸಂಘಟನೆಗಳು ಪ್ರಾಮಾಣಿಕ ಕೆಲಸ ಮಾಡುತ್ತಿವೆ ಅದರಲ್ಲಿ ನಾನು ರಾಜ್ಯಾಧ್ಯಕ್ಷ ನ್ನಾಗಿ ಹಿಂದುಗಳ ದೇವಾಸ್ಥಾನಗಳ ಜೀರ್ಣೋದ್ಧಾರ,ಆಂನೇಯ ಸ್ವಾಮಿ ಮಾರುತಿ ಹಳ್ಳಿಯಲ್ಲಿ ಬೃಹತ್ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ, ಗಣೇಶ ಚತುರ್ಥಿ ಮತ್ತು ಶಿವರಾತ್ರಿ ಹಬ್ಬದ ರಾಜಗೋಪಾಲನಗರ ವಾರ್ಡಿನಲ್ಲಿ ಪ್ರತಿವರ್ಷ ಗಣೇಶ ಚತುರ್ಥಿ ನಿಮಿತ್ತ ಸಾರ್ವಜನಿಕವಾಗಿ ಗಣೇಶ್ ಶಿವರಾತ್ರಿಯಲ್ಲಿ108 ಈಶ್ವರನ ವಿಗ್ರಹ ಸ್ಥಾಪಿಸಿ 9 ಅಥವಾ11ದಿನ ಸಾಂಸ್ಕೃತಿಕ, ಬೌದ್ಧಿಕ,ಭಜನೆ, ಕೀರ್ತನೆಗಳು ಮತ್ತು ಪ್ರತಿದಿನ ಬೆಳಿಗ್ಗೆ ಪ್ರಸಾದ ರಾತ್ರಿ ಭೋಜನ ವ್ಯವಸ್ಥೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಅದಲ್ಲದೆ ರಾಜ್ಯದಲ್ಲಿ 28 ಜಿಲ್ಲೆಗಳಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳ ಸಂಘಟನೆ ಮಾಡುತ್ತಿದೆ.
ಸಂಘಟನೆ ವತಿಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉಚಿತ ಔಷಧಿ ವಿತರಣೆ, ಹಿಂದುಗಳ ಪವಿತ್ರ ಹಬ್ಬ ನಿಮಿತ್ತ ವೃದ್ಧಾಶ್ರಮಕ್ಕೆ ತೆರಳಿ ತಿಂಡಿ ಭೋಜನ ವ್ಯವಸ್ಥೆ ಬಟ್ಟೆ ಬರಿ,ಹೊದಿಕೆ, ಚಳಿಗಾಲದಲ್ಲಿ ಕಂಬಳಿ ಅಥವಾ ರಗ್ ವಿತರಿಸುವುದು ನಮ್ಮ ಸಂಘಟನೆಯ ವಾಡಿಕೆಯಾಗಿದೆ.
ಮತ್ತು ಶ್ರೀರಾಮನ ಜಯಂತಿ, ಮಹಾವೀರ ಜಯಂತಿ ಹಲವಾರು ಹಿಂದು ಹಬ್ಬಗಳು ಆಚರಿಸಿ ಹಿಂದೂಗಳ ಸನಾತನ ಧರ್ಮ ಸಂಪ್ರದಾಯಗಳ ಆಚಾರ ವಿಚಾರಗಳ ಸಾಮೂಹಿಕ ಶಿಬಿರಗಳ ಮೂಲಕ ಹಿಂದೂ ಜನ ಜಾಗೃತಿ ಮೂಡಿಸುವ ಕಾರ್ಯ ಕ್ರಮಮಾಡುತ್ತೇವೆ ಇಂದು ಬೆಂಗಳೂರು ಹೊರವಲಯದ ಮಾತೃ ಶ್ರೀ ಮನೋವಿಕಾಸ ಕೇಂದ್ರ ಬುದ್ದಿಮಾಂದ್ಯ ಮಕ್ಕಳ ವಸತಿ ವಿಶೇಷ ಶಾಲೆ ಗೌಡಹಳ್ಳಿ ಭೇಟಿ ನೀಡಿ ಅಲ್ಲಿಯ ಬುದ್ದಿಮಾಂದ್ಯ ಮಕ್ಕಳಿಗೆ ಕೇಕ್ ಕತ್ತರಿ ಸಿಹಿ ತಿನ್ನಿಸಿ ಭೋಜನ ವಿತರಿಸಿ ಉಡುಗೊರೆ ನೀಡಿ ಆರು ವರ್ಷ ಸಮರ್ಥವಾಗಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ವಿ.ಆನಂದ್ ಭಾವುಕರಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಆರ್.ಸಿ.ಬಿ ಪ್ರದಾನ ಕಾರ್ಯದರ್ಶಿ ಆದಿ, ರವಿಕುಮಾರ್, ಗೋವಿಂದರಾಜು, ರವೀಂದ್ರ ಕುಮಾರ್,ಗುಂಡು, ಶ್ರೀಕಾಂತ್ ಭೀಮ ಸಂದೇಶ ಪತ್ರಿಕೆಯ ಸಂಪಾದಕ ವೈ ಜಿ ನರಸಿಂಹಮೂರ್ತಿ, ಸಂಜೆ ಸಮಯ ಪತ್ರಿಕೆಯ ಪ್ರತಿನಿಧಿ ಕೆಂಪರಾಜು, ಪತ್ರಕರ್ತ ಗೋಪಿ, ಸೇರಿದಂತೆ ಮುಂತಾದವರು ಇದ್ದರು.